Home / ಕವನ / ಕವಿತೆ

ಕವಿತೆ

ಅಂದಿನಂತೆಯೇ ಇಂದೂ ಕ್ಷಣಗಳ ಯುಗವಾಗಿಸಿ ಮುಖಾಮುಖಿ ಕುಳಿತಿದ್ದೇವೆ ಏತಕ್ಕೋ ಕಾಡಿದ್ದೇವೆ! ಅಥವಾ ಸುಮ್ಮನೆ ಹೀಗೇ… ಭಾವುಕತೆ ಮೀರಿದ್ದೇವೆ ಸ್ಥಿತಪ್ರಜ್ಞರಾಗಿದ್ದೇವೆ ಮಾತಿಗೆ ಅರ್ಥವಿಲ್ಲ ಮೌನ ವ್ಯರ್ಥವಲ್ಲ! ತಿಳಿದಿದ್ದೇವೆ. ಬಹುದೂರ ಸಾಗಿದ್...

ಯಾರೋ ಬಂದರು ಹಾರಿ ಧಗೆಯ ಕುದುರೆಯನೇರಿ ಉರಿದಾವು ಹೂಮಲ್ಲಿಗೆ – ಬಿಸಿಯುಸಿರಿಗೆ ಬೂದಿಯಾದವು ಮೆಲ್ಲಗೆ ಬೆಂಕಿಯಂಗಾಲಿಂದ ತುಳಿದು ಕೆಂಡವ ಸುರಿದ ಉರಿದು ಹೋದವು ಹೂವು ಚಿಗುರು ಉಕ್ಕಿ ಹೋದವು ಹಾಲು ಹೌಹಾರಿ ಹಾಯೆನಲು ಬಿರಿದಾವು ಎದೆಯ ನೋವು &#...

೧ ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ ವೈಭವೀಕರಿಸಿ ಹೇಳುವ ರೀತಿಗೆ ಬೆರಗಾಗಬೇಕು ವಿಜ್ಞಾನ ತಂತ್ರಜ್ಞಾನ ಮೇರೆಮೀರಿದ ಡಾಲರ್ ಹೊಳೆ ಸಮಯ ಪ್ರಜ್ಞೆಗೆ ಟಾಮ್ ಹ್ಯಾರಿಗಳ ನಡುವೆ ಎರಡನೆಯ ದರ್ಜೆಯ ನಾಣಿ ಸೀನರ ಹೋರಾಟ ಗೋಳಾಟ ಹಣಕ್ಕೆ ಸಮಾಧಾನ ಪಡುವ ಗತಿ. ...

ಇಲ್ಲಿ ನಿತ್ಯಸಂತೆ ಅನುಕ್ಷಣವೂ ಬಿರುಸಿನ ಮಾರಾಟ ಎಲ್ಲ ಎಲ್ಲವೂ ವ್ಯಾಪಾರದಾಟ! ಹೂವು – ಹಣ್ಣು ಹಸಿರು – ಮೀನು ನಾನು – ನೀನು – ಅವನು ಎಲ್ಲ ಇಲ್ಲಿ ಬಿಕರಿಗಿಟ್ಟ ಸರಕು! ಭರಾಟೆ ಮಾರಾಟದಲಿ ಯಾರಿಗೆ ಬೇಕು ಹೃದಯದ ಕೂಡಬಲ್...

ನನ್ನ ಮನವ ಕದ್ದವನೇ ಬಾ ನನ್ನ ಹರಣ ಗೆದ್ದವನೇ ಬಾ ನನ್ನ ಕೂಡಿ ಕಳೆವ ಗಳಿಗೆಗೆ ಏನೆಲ್ಲವನೂ ಒದ್ದವನೇ ಬಾ ನಿನ್ನ ಎದುರು ಬಿಂಕ ಏನಿದೆ ದೇವರೆದುರು ಶಂಕೆ ಏನಿದೆ? ನಿನ್ನ ಸೇರಿ ಉರಿದು ಹೋಗುವಾ ಬೆಂಕಿ ಬಯಕೆ ಮೈಯೊಳೆದ್ದಿದೆ ನನ್ನೆದೆಯಾ ಚಿನ್ನ ಹಾರವೇ ...

ಉರಿ‌ಉರಿಬಿಸಿಲು ನೆತ್ತಿಯಮೇಲೆ ಸುಡುವ ಮರಳು ಕಾಲ್ಕೆಳಗೆ ಸುಂಯನೆ ಬೀಸುವ ಬಿಸಿ ಬಿರುಗಾಳಿ ಕೂತೂಹಲದ ಕಣ್ಣುಮನಸುಗಳ ಮೌನ ಮಾತು ನೋಡಬೇಕೆನ್ನುವ ತವಕ ಪಡದವರಾರು. ನೋಡಬೇಕು ನೋಡಲೇಬೇಕು ಏನೆಲ್ಲ ಮಾತನಾಡಬೇಕು ಪುರಾತನ ನಗರಿಗಳೊಂದಿಗೆ ತೇಲಬೇಕು ಮುಳುಗೇ...

ಸಂತೆ ಗದ್ದಲದಲಿ ಕೂತು ಸಂತರಾಗುವ ಹುಚ್ಚು! ನೂರಾರು ಆಮಿಷಗಳ ಚುಂಬಕ ಸೆಳೆತದಲೂ ಏನೂ ಬೇಡೆನುತ ಕಣ್ಮುಚ್ಚಿ ಕುಳಿತರೂ ಮತ್ತದೇ ಸೆಳೆವ ಬಣ್ಣದ ಚಿತ್ರಗಳು. ಗಳಿಗೆಗೊಮ್ಮೆ ಅಲ್ಲಿಲ್ಲಿ ಹಾರುವ ಹುಚ್ಚು ಮನಸಿಗೆ ಕಲಿಸುವುದೆಂತು ಸ್ಥಿತಪ್ರಜ್ಞತೆಯ ಪಾಠ? ನ...

ಎಲ್ಲಿಹೋದ ನಲ್ಲ? ಚಿತ್ತವ ಚೆಲ್ಲಿ ಹೋದನಲ್ಲ ಮೊಲ್ಲೆ ವನದಲಿ ಮೆಲ್ಲಗೆ ಗಾಳಿ ಸಿಳ್ಳು ಹಾಕಿತಲ್ಲ! ಹರಿಯುವ ಹೂಳಯಲ್ಲಿ – ಫಕ್ಕನೆ ಸುಳಿಯು ಮೂಡಿತಲ್ಲೆ ಜಲ ತುಂಬುವ ಮುಂಚೆ – ಕಟಿಯ ಕೊಡವೆ ಜಾರಿತಲ್ಲೆ! ನಡಿಗೆ ಏಕೊ ತಪ್ಪಿ – ಗೆ...

ಹೆದ್ದಾರಿ ಬದಿಯಲಿ ನನ್ನಪ್ಪ ಸಮಾಧಿಯಾಗಿ ಕೂತಿದ್ದಾನೆ ಮೇಲೆ ಹಸಿರಾಗಿ ಕಂಗೊಳಿಸುವ ಮಾವಿನ ಮರ ಒಳಹೊರಗೆಲ್ಲ ಚಿಲಿಪಿಲಿಸುವ ಪಕ್ಷಿ ಸಂಕುಲ ಪ್ರತಿಸಲದ ಬಸ್ ಪ್ರಯಾಣದಲಿ ಕಿಟಕಿಯಿಂದಲೇ ನೋಡುತ್ತೇನೆ ಮನದೊಳಗೆ ನಮಿಸುತ್ತೇನೆ ಕಣ್ಣುಗಳು ಜಿನುಗುತ್ತವೆ ಝ...

ಅಟ್ಟ ಏಣಿಗಳ ಅದೇ ಹಳೇ ಕಥೆ ಅಟ್ಟವೇರಲು ಏಣಿ ಏಣಿ ಕೊನೆಗೆ ಅಟ್ಟವಂತೆ! ಒಂದೊಂದು ಏಣಿ ಮೆಟ್ಟಿಲೇರಲೂ ಪ್ರಯಾಸ ದೀರ್ಘ ಪ್ರವಾಸ ಹಠ ಹಿಡಿದು ಉಪವಾಸ! ಎರಡನೇ ಮೆಟ್ಟಿಲೇರಿದರೆ ಮೊದಲ ಮೆಟ್ಟಿಲ ಮರೆವು ಏರುತ್ತಾ ಹೋದಂತೆ ಕೆಳಗಿನದೆಲ್ಲವೂ ಕೆಲಸಕ್ಕೆ ಬಾರದ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...