ಒಬ್ಬೊಬ್ಬ ಸೂರ್ಯನ ಕೊಡಿ

ಅಕ್ಕ ತಂಗಿಯರೇ!
ಪ್ರತಿಯೊಬ್ಬರೂ ಒಬ್ಬೊಬ್ಬ ಸೂರ್ಯನನ್ನು ದೇಶಕ್ಕೆ ಕೊಡಿ
ಕನಿಷ್ಟ ಪಕ್ಷ ನಕ್ಷತ್ರವನ್ನಾಗಲೀ ಕೊನೆಗೆ ಹಣತೆಯನ್ನಾಗಲೀ ಕೊಡಿ

ಎರವಲು ಬೆಳಕಿನಿಂದ ಮೆರೆವ
ಗ್ರಹ ಉಪಗ್ರಹಗಳನ್ನೋ
ಉಲ್ಕೆಗಳನ್ನೋ ಕೊಡಬೇಡಿ

ಒಂದರೊಳಗೊಂದು ಸಿಕ್ಕಾ ಸಿಕ್ಕಾಗಿ ಗೋಜಲುಗೊಂಡು
ಒಂದನೊಂದು ಕಿತ್ತು ತಿನ್ನುವ ಕೆಲವು
ಹೆಗ್ಗಣ ಹದ್ದು ನಾಯಿ ನರಿಗಳಿಗಂಜಿ
ಪುತು ಪುತು ತಿಪ್ಪೆ ಸೇರಿಕೊಳ್ಳುವ
ಅಲ್ಲೇ ಕೈಲಾಸ ವೈಕುಂಠಗಳ ತೇಲುಗಣ್ಣಿನಲ್ಲಿ ಕಾಣುವ
ಬರೀ ಹುರುಳಿಲ್ಲದ ನರಳಾಟದ ನರಸತ್ತ
ನರಹುಳಗಳನ್ನು ಮಾತ್ರ ಕೊಡಬೇಡಿ

ತಮ್ಮ ತಮ್ಮೊಳಗೆ ಹೆಣೆದುಕೊಂಡ
ಬೇಲಿಗಳಿಗಾಗಿ ಇರಿದಾಡಿ ಸಾಯುವುದರಲ್ಲೇ
ತಮ್ಮ ಪೌರುಷ ಶೌರ್ಯಗಳನ್ನೆಲ್ಲ ಕಳೆದುಕೊಳ್ಳುತ್ತಿರುವ
ಮೃಗಗಳನ್ನು ಮಾತ್ರ ಕೊಡಬೇಡಿ
ಹೆಗ್ಗಣ ಹದ್ದು ನಾಯಿ ನರಿಗಳೇನಾದರೂ
ನಿಮ್ಮೊಡಲಿಂದ ಹುಟ್ಟಿದರೆ
ಹೆತ್ತವರಿಗೆ ಹೆಗ್ಗಣ ಮುದ್ದೆಂದು ಮುದ್ದಾಡಬೇಡಿ
ಪಾಪ ಎಂದು ಕರುಣೆ ತೋರಿಸಬೇಡಿ
ಬಲಿತಂತೆಲ್ಲ ಅವು ನಿಮ್ಮನ್ನೇ |
ಅಥವಾ ನಿಮ್ಮಂಥ ಎಷ್ಟೋ ತಾಯಿ ಅಕ್ಕ ತಂಗಿಯರನ್ನೇ
ಹರಿದು ಕಿತ್ತು ತಿನ್ನುತ್ತ ಹೋದರೆ
ಅಂಥ ರಕ್ಕಸಗಳ್ಳಿಗಳನ್ನು ಹಡೆದ ನಿಮ್ಮನ್ನು
ದೇಶದ ಹೆತ್ತಮ್ಮ ಕ್ಷಮಿಸಳು
*****
೧೦.೬.೮೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಕಶಾಸ್ತ್ರದ ಪಾಠಶಾಲೆ
Next post ಬಲ್ಪಿನ ಬೆಳಕು

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…