
ಎಲ್ಲಿ ಹಾರಿತು ನನ್ನ ಮುದ್ದು ಹಕ್ಕಿ ಎಲ್ಲಿ ಕೂಗುತಲಿದೆಯೊ ವ್ಯಥೆಗೆ ಸಿಕ್ಕಿ? ಕಣ್ಣು ತಪ್ಪಿಸಿ ಹಾರಿ ಬೇಲಿ ಸಾಲನು ಮೀರಿ ಅಡವಿ ಪಾಲಾಯಿತೋ ದಾರಿ ತಪ್ಪಿ! ಮನೆಯ ಕಾಳನು ತಿಂದು ಬೇಸರಾಗಿ ವನದ ತೆನೆಯನು ತಿನುವ ಚಪಲ ರೇಗಿ ಹೊಸ ಸಂಗ ಬೇಕೆನಿಸಿ ಹಾರಿತ...
“ಮಳೆ ಮಳೆ ಎಂದು ರೈತರು ಆಕಾಶದೆಡೆಗೆ ನೋಡುವಂತೆ ಇಲ್ಲಿಯೆ ಅರಬರು ಪೆಟ್ರೋಲ್ ಪೆಟ್ರೋಲ್ ಎಂದು ಮರುಭೂಮಿ ಆಳ ನೋಡುತ್ತಾರೆ” ರೈತನಿಗೆ ನಲದಾಳ ಸಂಬಂಧವಿಲ್ಲ ಅರಬನಿಗೆ ಆಕಾಶದಾಳಗೊತ್ತಿಲ್ಲ ನಮ್ಮ ರೈತ ದೋ ದೋ ದುಮ್ಮಿಕ್ಕುವ ಮಳೆಗೆ ಹಣ ಕೊ...
ತನ್ನಾಳ ಅಗಲ ಶಕ್ತಿ ತಿಳಿಯದಿವರು ದಡಗಳ ಕಟ್ಟಿ ನನಗೇ ಮಿತಿಯೊಡ್ಡುವರೇ? ತೀರಗಳಾಚೆಯ ಬದುಕಿಗೆ ತೆರೆಯೆಳೆಯುವರೇ? ರೋಷಾವೇಶದಿ ಹೂಂಕರಿಸಿ ಕಡಲು ದೈತ್ಯಾಕಾರದ ತೆರೆಗಳನ್ನೆಬ್ಬಿಸಿ ದಡಕ್ಕೆ ಬಡಿದು ಕಣ್ಣರಳಿಸಿ ಏನಿದೆ ಇಲ್ಲಿ ಬರೀ ರಸ ಹೀರಿ ಒಗೆದ ಕಸ ಬ...
(“ನೂರು ದೇವರನು ನೂಕಾಚೆ ದೂರ ಭಾರತೀ ದೇವಿಯನು ಪೂಜಿಸುವ ಬಾರ”…. ಕುವೆಂಪು) ದೇವಿ ಭಾರತಿ ತಾಯಿ ಭಾರತಿ ಎಲ್ಲಿಗೆ ಬಂತೇ ನಿನ್ನ ಗತಿ ಯಾರಿಗೆ ಅವರೇ ಬಡಿದಾಡ್ತಾರೆ ಯಾರಿಗೆ ಬೇಕೇ ನಿನ ಚಿಂತಿ ||ಪ|| ಪುಣ್ಯಭೂಮಿ ನೀ ಗಣ್ಯಭೂಮಿ ...
ಏಳುವುವು ಚಿಂತೆಗಳು ಸುಖವ ಒಮ್ಮೆಗೆ ಹೂಳಿ ಗಾಳಿ ಬೀಸಲು ಏಳುವಂತೆ ಧೂಳಿ, ಕಣ್ಣೀರ ಮೇಘಗಳೆ ಸುರಿದು ಹೋದವು ಶೋಕ- ವಾದ್ಯದಲಿ ಮಲ್ಹಾರ ಭಾವದಾಳಿ ಪ್ರೀತಿ ತೋಯಿಸಿತೆನ್ನ ಕರುಣೆಯಲ್ಲಿ ನುಡಿಸಿ ವಿರಹವ ಹೃದಯವೀಣೆಯಲ್ಲಿ ನಿನ್ನ ನೆನಪಿನ ಅಲೆಯು ತಾಗಿದೊಡನ...
ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ ನಿತ್ಯ ನೆರೆದರೂ ಸಂತೆ ಇಲ್ಲ ಚಿಂತೆ! ಬಿಸಿಲು ಮಳೆ ಚಳಿಗಾಳಿಗೆ ಹಿಗ್ಗದೇ ಕುಗ್ಗದೇ ಎಲ್ಲಿಯೂ ಲೆಕ್ಕಕ್ಕೆ ಸಿಗದೇ ಯಾರಿಗೂ ವೇದ್ಯವಾಗದೇ ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ. ಅದೆಷ್ಟು ತರಹೇವಾರ...
ನನ್ನ ಹಾಡು ಹಕ್ಕಿಯಾಗಿ ಹಾರಿ ಹೋಗಲೀ ನನ್ನ ಹಾಡು ಗೂಡು ಗೂಡು ಸಾಗಿ ಹೋಗಲೀ ||ಪ|| ಮಹಡಿ ಮನೆಯ ಪಂಜರದಲಿ ಸಿಕ್ಕಿ ಹಿಕ್ಕಿ ಹಾಕಧಾಂಗೆ ಪಟ್ಟಣಗಳ ಬೆಂಕಿ ಪೊಟ್ಟಣಗಳ ಕಡ್ಡಿ ಆಗಧಾಂಗೆ ಬೊಜ್ಜುಗಳ ಮುಖದ ಮೀಸೆ ಮೇಲೆ ಕುಳಿತು ಕಿಸಿಯಧಾಂಗೆ ಕಲಿತ ಮಾತ ಮಾರ...













