Home / ಕವನ / ಕವಿತೆ

ಕವಿತೆ

೧ ಮಳೆ ಬಂತು ಹೊಳೆ ಬಂತು ಬಿಸಿಲ ತಾಪದಿ ಬೆಂದು- ನೊಂದ ನೆಲಕೂ ಇಂದು ಜೀವ ಬಂತು ಮನೆ ಮುಂದೆ ಹೊಸತಿಲಲಿ ಪ್ರಭೆಯ ಪ್ರತಿಭಾ ಕಿರಣ ಮನೆಯನೆಲ್ಲವನಿಂದು ಬೆಳಗ ಬಂತು. ೨ ಎದೆಯ ಹೂದೋಟದಲಿ ಬಳ್ಳಿ ಹಂದರದಲ್ಲಿ ಮೊಗ್ಗೆ ಮೊಗದೋರಿದವು ಕಣ್ಣ ತೆರೆದು ಕೋಮಲತೆ ...

ಓ ಮೇಘರಾಜ ಘನ ವಿದ್ಯುಲ್ಲತಾ ತೇಜ ಓಜೆಗುಂದಿದನಿಂದು ರವಿರಾಜ. ಆ ಗ್ರೀಷ್ಮ ಭೀಷ್ಮ ಭಾಸ್ಕರತೆ ಎಂದೋ ಮಸಳಿ, ನೀ ಬಂದೆ ತಂದೆ ಜೀವನದಾಶೆ, ಕೃಷಿಕರೀಕ್ಷಣದಲ್ಲಿ ಸ್ಫುರಿಸೆ ಚಾತಕ ಭಾಷೆ, ರಿಕ್ತ ಧ್ವನಿಯಾಗಿ ಗ- -ರ್ಜಿಸಬೇಡ; ಸುಪ್ತ ಬೀಜವು ಬೇಡದೇನೊ ಜೀ-...

ಒಣಗುತಿದೆ ನನ್ನ ಪಂಚೆ, ಒಣಗುತಿದೆ ನನ್ನ ಪಂಚೆ ಎಲ್ಲಿ ತೊಯ್ಯಿಸಲಿ ಈ ಪಂಚೆ, ಎಲ್ಲಿ ಒದ್ದಿ ಮಾಡಲಿ ಈ ಪಂಚೆ ಜಗದೊಳಗಿನ ಹಳ್ಳ ಕೊಳ್ಳ ನದಿ ಸಮುದ್ರಗಳು ಬತ್ತಿಹವು ನಿಮ್ಮ ಕಣ್ಣೀರಲಿ ನನ್ನ ಪಂಚೆ ತೊಯಿಸಲೆ ನಿಮ್ಮ ಕಣ್ಣೀರೂ ಬತ್ತಿಹುದು ಸಮೀಪಿಸುತಿದೆ ...

೧ ಕಂಡ ವಸ್ತುವನುಳಿದು ಕಾಣದುದ ಬಯಸುವರೆ? ಕೆಂಡವನು ಕರ್ಪೂರ ಬಯಸಿದಂತೆ! ಭಂಡರಿಗೆ ಬಲು ಭಾಗ್ಯ ಬೇಡೆನಲು ಬರುವುದುರೆ ಹಿಂಡನಗಲಿದ ಜಿಂಕೆ ಬೆದರುವಂತೆ! ೨ ಇಂದಿನೀ ಬಾಳೆಲ್ಲ ನರಕವಾದರು ಸರಿಯೆ, ಮನುಜನಂತೆಯೆ ಬಾಳು ತಾಳ್ಮೆಯಿಂದ ಮಂದಿಯಾಡುವ ಮಾತು ಹೀ...

ಕಾರ್ಮೋಡದ ಭಾಂಡದೊಳಿಂ ಬರೆ ಮಿಂಚಿನ ಬುಗ್ಗೆ ತಿರೆ ಹುಬ್ಬನು ಏರಿಪೊಲಿದೆ ಬಾನಂಚಿದು ಬಗ್ಗೆ! ಸೌಂದರ್ಯದ ನಕ್ಷೆಯನೇ ರಚಿಸುವವೊಲು ಮಿಂಚು ಗೆರೆಗೆರೆಯಾಗುದ್ಭವಿಸಿದೆ ಬೆಳಗಲು ನಭದಂಚು! ಮೇಘಕಲಾವಿದನೇನನೊ ಯೋಚಿಸುತಲಿ ತನ್ನ ಕುಂಚವನಾಡಿಪನೆನ್ನುತ ಭ್ರಮ...

ಕೇಳಿಸದಾಯ್ತು ನನ ಗೀತ ಮೇಳದಿಂದೊಳಗೊಂಡ ಸುರರ ಸಂಗೀತ ನನ್ನದೀಮನ ತಣಿಸಲೆಂದು ನಿನ್ನ ಕರುಳಿನ ಆಳದಿಂದ ಹೊರಬಂದು ಎನ್ನ ಜೀವಕೆ ಶಾಂತಿ ತಂದು ತನ್ನ ತಾನದಿ ತಾನಗುಡುನ ಸಂಗೀತ ಮನ ತುಂಬಿ ನಿನ್ನ ಹೊರಸೂಸಿ ಮನೆ ತುಂಬಿ ನೆರೆತುಂಬಿ ತುಳುಕೀದ ರಾಸಿ ದನಿಗೊ...

ತೆರಿಗೆ ಸಂದಿತು ದಿನಕೆ : ನಿಶೆ ತುಂಬಿರುವ ಪ್ರಾಣ- ಪಾನ ಪಾತ್ರೆಗಳಿಂದ ಚೈತನ್ಯ ರಸವೀಂಟಿ ಭಾನು ಸಂದನು ಮರೆಗೆ. ತಾರೆ ತಾರೆಗು ತಾಯ ತೆರವಿಹ ಮಹಾತಮದ ನಂಟು ತಿರೆಗಾಯ್ತೀಗ. ಅಂಬು ಕೋಶವ ಹೊಗುವೊಲಾಕೃಷ್ಟವಾದುವೆನೆ ಮರದ ಬತ್ತಳಿಕೆಯೊಳು ಲೀನವಾದವು ಹಕ...

೧ [ಒಂದಾನೊಂದು ದಿನ ಸುಧಾಮನ ಸಹಧರ್ಮಿಣಿ ತನ್ನ ಪತಿರಾಯನನ್ನು ಕುರಿತು ಹೀಗೆ ನುಡಿದಳು] ಭಾಗ್ಯವನು ಬಳೆದುಕೊಂಡಿಹರು ಕೆಲ ಜನರು ಸೌ- ಭಾಗ್ಯವನು ಸುರಿದುಕೊಂಡಿಹರು ಹಲ ಜನರು ಸೌ- ಭಾಗೃತಿಲಕನೆ ಕೇಳು ಭಾಗ್ಯಲಕ್ಷ್ಮಿಯು ನಮ್ಮ ಗುಡಿಸಲವ ತೊಲಗಿ ತಾನು! ...

ಜಗವುತಾನಿದು ರಂಗಭೂಮಿಯು ನರನು ಅದರೊಳು ವಿವಿಧ ಪಾತ್ರವ | ವಹಿಸಿ ತನ್ನಯ ಕಾರ್ಯವೆಸಗುತೆ ಮರಳಿ ಪೋಗುವನು || ೧ || ಮೊದಲು ತಾನವ ಶಿಶುವು ರೂಪವಧರಿಸಿ ತನ್ನಯ ಕೇಳಿಯಿಂದಲಿ | ತಣಿಪತನ್ನಯ ಜನನಿ ಜನಕರಮನವ ತಾನಾಗ || ೨ || ವರುಷವಾರೇಳುಗಳು ಗತಿಸಲು ಶ...

೧ ಸತ್ಯ ಪೂರ್ಣ ಜ್ಯೋತಿ ಬೀರುವ ಬೆಳಕಿನಲಿ ಮು೦ದರಿಯುವ, ನಿತ್ಯ-ನಿರ್ಮಲ ಯೋಗಿ, ಸತ್ಯಾಗ್ರಹಿ ‘ಮಹಾತ್ಮ’ಗೆ ವಂದನಂ ೨ ತಾನು ನಡೆಯುವ ನಡತೆಯಿಂದಲೆ ಸರಳ ಜೀವನ ಸಾರವ ಮಾನವರಿಗೊರೆಯಿಸುವ ‘ಮೋಹನ- ದಾಸ’ಗಿಂದೀ ವಂದನಂ ೩ ತ್ಯ...

1...2728293031...626

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...