ನಾನು ಭಾವ ನೀನು ಗೀತ ನಾನು ರಾಮ ನೀನು ಸೀತ ಹೀಗೆಲ್ಲ ಹಾಡಿದ ಕವಿಗಳು ಒಂದು ದಿನ ನಾನು ಶವ ನೀನು ಪ್ರೇತ ಎಂದು ಸಾಯುತ್ತಾರೆ ನಾನು ದೇವರ ಪುತ್ರ ಬನ್ನಿ ನನ್ನಡಿಯಲ್ಲಿ ಮೋಕ್ಷದ ಹಾದಿ ಸುರಳೀತ ಎಂದು ಸಾರಿದ ಸಾಧಕರೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ...

ಮಲೆನಾಡಿನ ಸಿರಿಸೊಬಗಲಿ… ಬೆಟ್ಟಗಳ ಏಕಾಂತದ ನಡುವಲಿ ಸುತ್ತಲಿನ ಗ್ರಾಮಗಳಿಗೆ… ಬಹು ದೂರವಾಗಿತ್ತು ಆ ಊರು ಸರಕಾರ ಮನ್ನಣೆಯಲಿ ಶಾಲೆಯೊಂದು ನಡೆದಿತ್ತು ತಾಯಿ, ಗಡಿಗಳೆಂಬ ದ್ವಿಭಾಷಾ ಶಿಕ್ಷಕರನು ಹೊಂದಿತ್ತು ಮಾತುಗಾರನ ಹೊಗೆ ಉಗಳುವರ ಮ...

ನಿನ್ನ ಎದೆಗೆ ಗುಂಡು ಬಡಿದಾಗ ಮಣ್ಣು ನಡುಗಿತು ಹಗಲಹೂ ಬಾಡಿತು ಶಾಂತಿದೂತ ಪಾರಿವಾಳ ಗೂಡು ಸೇರಿತು. ತಿಳಿವು ತುಂಬಿದ ಕಣ್ಣು ಒಲವು ತುಂಬಿದ ಹೃದಯ ಛಲವನರಿಯದ ಬದುಕು ಸಾಕು ಇಷ್ಟೇ ನೆಲವು ನಂದನವಾಗಲಿಕ್ಕೆ ಮನುಕುಲದ ಇತಿಹಾಸ ರಕ್ತರಂಜಿತ. ಸರಳತೆ ಸಾಕ...

ಮೇಳ: ಸಿರಿ ಅಂತರಗಟ್ಟೆ ಮಾರಿ ಎನಿಸಿದವಳೆ ನೆಲೆ ನಿಂತು ಜೀವಗಳ ಕಾದವಳೆ || ಕಂದಗಳ ಕಾದವಳೆ ಜೀವಿನ ಮರದವಳೆ ಕೇಳಿದ್ದ ಕೊಟ್ಟವಳೆ ಬೇಡಿದ್ದ ಬಿಟ್ಟವಳೆ || ಸತ್ಯವ್ವ ಮುತ್ಯವ್ವ ಕರಿಕಾರಲರಮ್ಮ ಬೇವ ತಿಂದು ಬೇವನುಟ್ಟಮ್ಮ ಸಿಡುಬ ನುಂಗಿ ಕಂದಗಳ ಕಾದವಳೆ...

ಪ್ರಕೃತಿ ನೀನು ಬರೆದ ಕಾವ್ಯ ಹಾಡುತಿಹುದು ಕೂಜನ (ಕೋಗಿಲೆ) ಅರ್ಥಸುಳಿಗಳ ಸೆಳವಿನಾಚೆ `ಕೇಳುವಂತೆ, ಜನಮನ ಕಣ್ಣ ತೀಡೋ ಹಸಿರಸಿರ ಸಾಲ ಸಾಲಿನಕ್ಕರೆಯಕ್ಕರ ಭಾವವರಳಿ ನಲಿದು ನಲಿವ ರಾಗಮಾಲಿಕೆ ನೂಪುರ ವಿಶ್ವ ಸಿಂಧುವು ವಿಶ್ವ ಬಿಂದುವು ಗೀತವಾಗಿ ಹೊಮ್ಮ...

ಮೆಂವ್ ಮೆಂವ್ ಬಿಸ್ ಬಿಸ್ ಮೆಂವ್ ಮೆಂವ್ ||ಪ|| ಅಡಗಿಯ ಮನೆಯೊಳು ಬಡಬಡ ಬರುವದು ಕೊಡ ಹಾಲನು ಕುಡಿದು ಗಡಗಿಯ ಒಡೆವುದು ||೧|| ಕೋಣೆಯ ಮೂಲೆಯೊಳು ಹಾಲಿನ ಸ್ವಾರಿಯೊಳು ಹಾಲಿನ ಕೆನೆಯನು ಕಾಲಿಲೆ ತೆಗೆವಂಥ ||೨|| ಮೀಸಲಹಾಲಿದು ಶಿಶುನಾಳಧೀಶನ ವಸುಧಿಪಾ...

ನಾವೆಲ್ಲಾ… ಒಂದೇ ಭಾರತ ಮಾತೆಯ ಮಕ್ಕಳು ಭೇದ-ಭಾವ ಬೇಡ ನಮ್ಮಲಿ ಹಿಂದು, ಮುಸ್ಲಿಂ, ಕ್ರೈಸ್ತರೆನ್ನದೆ ನಾವೆಲ್ಲಾ ಮೊದಲು ಭಾರತೀಯರು ಸಹೋದರತೆಯ ವಾತ್ಸಲ್ಯದಲಿ ಸಹನೆ, ಶಾಂತಿಯೇ ನಮ್ಮ ಕೈಗೋಲು ಜಾತಿ, ವಿಜಾತಿಯೆನ್ನದೆ… ಜಾಗೃತರಾಗಿರಬೇಕ...

ಹಾಡು – ೧ ಹೇಳಿರಣ್ಣ ಹೇಳಿರೊ ಬುದ್ಧಿವಂತ ಜನಗಳೆ ಕೇಳಿರಣ್ಣ ಕೇಳಿರೊ ಮನಸುಳ್ಳ ಜನಗಳೆ || ಹೇಳಿರಣ್ಣ ಹೇಳಿರೊ ಹೆಣ್ಣೆಚ್ಚೊ ಗಂಡಚ್ಚೊ || ಹೆಣ್ಣೆಚ್ಚು ಎಂಬುವರು ಕಾರಣವ ತಿಳಿಯಿರೊ ಗಂಡೆಚ್ಚು ಎಂಬುವರು ಕಾರಣವ ಹೇಳಿರೊ || ಮಗುವಾಗಿ ಹುಟ್ಟಿದ...

ನೀನು ಮಾಡಬೇಕಾದದ್ದು ನೋಡಬೇಕಾದದ್ದು ಇನ್ನೂ ಬಹಳವಿತ್ತು ಯಾಕೆ ಹೋದೆ ? ನಂಬಲೂ ಕಷ್ಟ ಮಲಗಿದೆಯಂತೆ ತುಸು ತುಸು ಮುಲುಗಿದೆಯಂತೆ ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ ಏರುತ್ತ ಇಳಿದು ಬಿಟ್ಟಿತಂತೆ ಈಗೀಗ ಪದೇ ಪದೇ ನಿನ್ನ ನೆನಪು ಅದೇ ರೂಪು ಅದೇ ರೂಹ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....