ಮಲೆನಾಡಿನ ಸಿರಿಸೊಬಗಲಿ…
ಬೆಟ್ಟಗಳ ಏಕಾಂತದ ನಡುವಲಿ
ಸುತ್ತಲಿನ ಗ್ರಾಮಗಳಿಗೆ…
ಬಹು ದೂರವಾಗಿತ್ತು ಆ ಊರು
ಸರಕಾರ ಮನ್ನಣೆಯಲಿ
ಶಾಲೆಯೊಂದು ನಡೆದಿತ್ತು
ತಾಯಿ, ಗಡಿಗಳೆಂಬ ದ್ವಿಭಾಷಾ
ಶಿಕ್ಷಕರನು ಹೊಂದಿತ್ತು
ಮಾತುಗಾರನ ಹೊಗೆ ಉಗಳುವರ
ಮೊಗಶಾಲೆಯಾಗಿ ಕಲಿಸುವ ಶಾಲೆಯಿತ್ತು
ಶಾಲೆ ಮಕ್ಕಳನು
ಕಳಿಸದ ಗ್ರಾಮದ ಜನರು
ದಿನವಿಡಿ ಸುರಾಧೀನರಾಗಿರುತ್ತಿದ್ದರು
ಶಾಲೆಗೆ ಕಳಿಸಿದರೆ ನಮಗೇನಾಗಿತೆನ್ನುತ
ದನ ಸೆಗಣಿ ಕಲೆ ಹಾಕಿಸುವ
ಗುರಿಯಲಿ ಮಾತ್ರ ಮುನ್ನಡೆಯುತ್ತಿದ್ದರು
ಪರಿಸರ ಸಂಘ ದೋಷದಿ
ಮರೆತರು ಶಿಕ್ಷಕರು ಶಿಕ್ಷಣದ
ಮೂಲ ಧ್ಯೇಯೋದ್ದೇಶ ಗುರಿಗಳನು
ಕರ್ತವ್ಯ ಕತ್ತು ಹಿಸುಕುತಲಿವರು
ಹೆಮ್ಮೆಯಲಿ ಎದೆಯುಬ್ಬಿಸಿ ಇರುತಿಹರು
ಮೇಲಧಿಕಾರಿಯ ಮುದ್ದು ಮುಖವು
ವರ್ಷಕ್ಕೊಮ್ಮೆ ನೋಡಲು ಸಿಗುವದು
ಮೂರು ಅಂಕಿಯ ಖಡಕ ನೋಟೊಂದು
ಕಾಣದಂತೆ ಜೀಬಿಗೆ ಹಾಕಿದರೆ ಸಾಕು
ಆಡುವೆವು ಹರ್ಷದಲಿ ವರ್ಷವಿಡಿ
ಎನ್ನುವ ಶಿಕ್ಷಣ ಚೋರರಿಗೆ
ಶಿಕ್ಷೆ… ನಿಸರ್ಗ… ನೀಡಿತೇ!….
***