(ಆಕ್ಸಫರ್ಡಿಗೆ ಸಮೀಪವಾಗಿದ್ದ ಹಳ್ಳಿಯ ಗುಡ್ಡ) ಮಾಗಿಯು ಹಿಮ್ಮೆಟ್ಟುವ ಮುನ್ನ ಮಾಗಿಯು ಹೊನ್ನಾಗಿಸಿದ ಹಸಿರೆಲೆಗಳನ್ನು ಕುಳಿರು ಬಂದು ಮಣ್ಣುಗೂಡಿಸುವ ಮುನ್ನ ಬೂದಿಬಣ್ಣದ ಮಂಜು ಬಂದು ಬೀದಿಬೀದಿಗೆ ಬೀಳುವ ಮುನ್ನ,- ಆಂಗ್ಲದೇವಿ! ನೋಡಿದೆನು ನಿನ್ನ ಮ...

ಹಸುಮಳ್ಕಳಾಡಿದರ, ಹಸನವ್ವ ಅಂಗಳ ದೆಸಿಮುಖದ ಜೆಲುವ ಮಗರಾಮ | ಆಡಿದರ ಹಸನ ಹಡದವ ಅರಮನೆ || ಹಚ್ಚನ್ನ ಮೈಯಾವ, ಹವಳದ ತುಟಿಯಾವ ಎಲ್ಲಿಗ್ಹೋಗಿದ್ದಿ ಗಿಳಿರಾಮ | ತವರೂರ ಉತ್ತತ್ತಿ ವನಕ ಉಲುವಿಲ್ಲ || ದೇಶದೇಶದ ಮಂದಿ, ಕಾಸಿಗೆ ಹೋಗತಾರ ಕೂಸು ಕಂದವ್ವ ಒ...

ಜೊತೆಯಿರದ ಈ ಬಾಳ ಹಾಳು ಗೋಳಿನ ಕಥೆಯ ದಾರಿ ಕೊರಕಲುಗಳಲಿ ಸಾಗುತಿರಲು; ಹಗಲಿರುಳು ಉರುಳಿದರು ಹೊಸತನವೆ ಬರದಿರಲು ಏನೊ ಎಂತೋ ಜೀವ ನರಳುತಿರಲು. ನೂರಾರು ಹರದಾರಿ ತಿರುತಿರುಗಿ ಅತಿಥಿಯೊಲು ನಿನ್ನ ಮನೆ ಹೊಸತಿಲಲಿ ಬಂದು ನಿಲಲು; ತಂಗಾಳಿ ಸೋಕಿದರೆ ಹಾರ...

ಜಯದೇವಾ ಜಯದೇವಾ ಶ್ರೀ ಗಣಪತಿರಾಯಾ ಭಯಕಾರಕ, ಭಯಹಾರಕ, ಓಂಕಾರ ಕಾಯಾ ||ಜಯದೇವಾ|| ಜಗದಂಬೆಯ ಮೈಮಣ್ಣಲಿ ಮೂಡಿದ ಮೂರುತಿಯೆ ಮೃಗಧರ ನೋಡಿದ, ಮಾಡಿದ ಬೇರೆಯ ಆಕೃತಿಯೇ ಚಿಗುರಾಗಿದೆ ನಿಂನಾಲಿಗೆಯಲಿ ದಿನ-ದಿನ ಶ್ರುತಿಯೇ ಹಗಲಾಯಿತು ನಿಂನೆನಪೇ, ಸುಳ್ಳಾಯಿ...

೧ ಆಕಾಶ ಕುಸುಮವನ್ನಭಿವರ್ಣಿಸುವ ಕಾವ್ಯ ವಿದ್ದೇನು ಸಾರ್ಥಕ್ಯ? ಕುರುಡಗಣ್ಣು! ಸಾಕಾರ ದೇವನಿಗೆ ನೈವೇದ್ಯವೇ ಶೂನ್ಯ ಉದ್ಧಾರ ವೇನಿದಕೆ? ಘೋರ ಹುಣ್ಣು! ೨ ಹಣವಂತ ಮಾನವನ ಹೆಣಗೈದರೂ ತೃಪ್ತಿ ಇಲ್ಲೆಂದು ಕುದಿಕುದಿದು ಲಾಭಕಾಗಿ; ಒಣ ರೊಟ್ಟಿ ಸಿಕ್ಕದೊಲು...

ಬೇಗ ಪಡುವ ತೆರೆಯ ತುಳಿದು, ಇರುಳ ದೇವಿ, ಬಾ. ಮಬ್ಬುಗವಿಯೊಳೊಬ್ಬಳಿದ್ದು, ಹಗಲು ಸಮೆಯದಾಗ ಹೆಣೆದ ಸೊಗದ ಭಯದ ಕನಸ ಬೀರಿ, ಉಬ್ಬಿಸುತ್ತ, ಬೆದರಿಸುತ್ತ, ಬಾ, ಬೇಗ, ಬಾ. ಅರಿಲ ಹೂವು ನೆಯ್ದ ಕಪ್ಪು ದುಗುಲವುಟ್ಟು ಬಾ. ಹಗಲ ಕಣ್ಗೆ ಕುರುಳ ಕವಿಸಿ, ಮುತ...

ಬರಿದೇ ಬೈವರು ಜನ ಸೋಮಾರಿಯ! ಕೋಣಕೆ ಸಮನೆನುತಲಿ ಛೀಮಾರಿಯ ಮಳೆ ಸುರಿಸುತ ಮುದಗೊಳ್ಳುತಲಕಟ ತೊಡಿಪರು ಬೈಗುಳ ಮುಳ್ಳಿನ ಮುಕುಟ! “ಕೆಲಸಕೆ ಕುಳಿತರೆ ಒಂದೇ ಎರಡೇ? ಅದನು ನೆಚ್ಚಿದರೆ ಜೀವನ ಬರಡೇ!” ಎಂಬ ಸತ್ಯವನು ಅರಗಿಸಿಕೊಂಡಿಹ ಸೋಮಾರಿಯೆ ಜಗದೊಬ್ಬನೆ...

ತಂಗಿ ಬಂದಳೆನ್ನ ಮನೆಗೆ ಮಂಗಳವನು ತಂದಳು ಅಕ್ಕ ನಕ್ಕು ನಡೆದ ದಾರಿ ತಕ್ಕದೆಂದು ತನಗೆ ತೋರಿ ಅಕ್ಕರತೆಯ ನಗೆಯ ಬೀರಿ ಚಕ್ಕಂದದಿ ನೆಗೆದು ಹಾರಿ ಹಡೆದ ಮನೆಯ ಹೊನ್ನು ದೀಪ ಹಡೆದವ್ವನ ಸಣ್ಣ ರೂಪ ನಡೆದು ಬಂದಳಪರೂಪ ಒಡಲಕುಡಿ! ಬಾ ಸಮೀಪ *****...

ಭವನುತ್ಸವಾಗ್ರದೊಳು ಮೆರೆವ ಗಣದುರವಣೆಯ ಹೋಲಿ ಭೋರಿಡುತಿಹುದು ಅಷಾಢದೀ ಗಾಳಿ ಓಲಾಡೆ ಗರಿಕೆದರುತಾವೇಶದೊಳು ತೆಂಗು ತವಕದೊಳು ಹುಯ್ಯಲಿಡೆ ಬೀಳವೊಲು ಬಿಗಿಹಿಡಿದ ಮರದ ಮಮತೆಯ ಗೂಢ ರಕ್ಷೆಯೊಳು ರೆಂಬೆಯೆಲೆ. ಬಾನ ತುಂಬಿಹ ಗಾಳಿಯಾಲಿಸುತ ತಣಿಯದಿದೆ ಧ್ಯಾ...

1...3132333435...946

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...