ತಂಗಿ ಬಂದಳೆನ್ನ ಮನೆಗೆ
ಮಂಗಳವನು ತಂದಳು
ಅಕ್ಕ ನಕ್ಕು ನಡೆದ ದಾರಿ
ತಕ್ಕದೆಂದು ತನಗೆ ತೋರಿ
ಅಕ್ಕರತೆಯ ನಗೆಯ ಬೀರಿ
ಚಕ್ಕಂದದಿ ನೆಗೆದು ಹಾರಿ
ಹಡೆದ ಮನೆಯ ಹೊನ್ನು ದೀಪ
ಹಡೆದವ್ವನ ಸಣ್ಣ ರೂಪ
ನಡೆದು ಬಂದಳಪರೂಪ
ಒಡಲಕುಡಿ! ಬಾ ಸಮೀಪ
*****
ಕನ್ನಡ ನಲ್ಬರಹ ತಾಣ
ತಂಗಿ ಬಂದಳೆನ್ನ ಮನೆಗೆ
ಮಂಗಳವನು ತಂದಳು
ಅಕ್ಕ ನಕ್ಕು ನಡೆದ ದಾರಿ
ತಕ್ಕದೆಂದು ತನಗೆ ತೋರಿ
ಅಕ್ಕರತೆಯ ನಗೆಯ ಬೀರಿ
ಚಕ್ಕಂದದಿ ನೆಗೆದು ಹಾರಿ
ಹಡೆದ ಮನೆಯ ಹೊನ್ನು ದೀಪ
ಹಡೆದವ್ವನ ಸಣ್ಣ ರೂಪ
ನಡೆದು ಬಂದಳಪರೂಪ
ಒಡಲಕುಡಿ! ಬಾ ಸಮೀಪ
*****