Home / Sanna Kathe

Browsing Tag: Sanna Kathe

ಇದನ್ನು ಕತೆಯೆನ್ನಿ, ಏನು ಬೇಕಾದರೂ ಎನ್ನಿ. ಅದು ಪ್ರಸ್ತುತವಲ್ಲ. ನಿಮಗೆ ಕತೆಯೇ ಬೇಕಿದ್ದರೆ ನಾನೊಂದು ಪ್ರೇಮ ಕತೆಯನ್ನೋ, ಕೌಟುಂಬಿಕ ಕತೆಯನ್ನೂ ಬರೆಯಬಹುದು. ಹಾಗೆ ಬರೆದರೆ ಅದು ಮತ್ತೊಂದು ಸಾಮಾನ್ಯ ಕತೆಯೇ ಆಗುವುದು ಕಂಡುಬಂದ ಅನುಭವಗಳನ್ನು ಕಲ್...

ನಿಧಾನವಾಗಿ ಮೆಟ್ಟಲು ಹತ್ತಿಕೊಂಡು ಮೂರನೆ ಮಾಳಿಗೆಯ ತನ್ನ ಮನೆಯೆದುರು ಬಂದು ನಿಂತವನಿಗೆ ಎದೆಯ ಉಬ್ಬಸದಿಂದ ಮೈನಡುಗಿದಂತೆನಿಸಿ, ತೊಡೆಯ ಸಂದುಗಳು ಕಂಪಿಸಿದವು. ಢಗೆಯ ರಭಸ ಹೆಚ್ಚಾಗಿ ಮೆಟ್ಟಲಿನ ದಂಡೆಗೆ ಕೈಕೊಟ್ಟು ನಿಂತುಕೊಂಡ. ಕೆಮ್ಮು ಮತ್ತೆ ಮತ್...

ಮುಂಜಾನೆಯ ಒಂಬತ್ತರ ಸುಮಾರಿಗೆ ಕರೆಗಂಟೆ ಕೇಳಿಸಿತು. ಯಾವುದೋ ಕೇಸ ಪೇಪರನ್ನು ತಿರುವುತ್ತ ಕುಳಿತಿರುವ ಶ್ರೀನಿವಾಸರಾಯ ಬಾಗಿಲ ತೆರೆಯಲು ಬಂದ. ಬರುವಾಗ ಈ ಹೊತ್ತಿನಲ್ಲಿ ಮತ್ತೆ ಯಾರಿರಬಹುದು ಹಾಲಿನವ, ಪೇಪರಿನವ, ಅಗಸರೆಲ್ಲ ಬಂದು ಹೋಗಿದ್ದಾರೆ. ಯಾರ...

ಸಾಗರದವರ ಮಂಗಳೂರಿನ ಬಸ್ಸು ಸಾಯನ್ ಚೌಕವನ್ನು ಬಿಟ್ಟು ಪೂನಾದ ದಾರಿಯನ್ನು ಹಿಡಿಯಿತು. ವಾಸಿಯನ್ನು ಜೋಡಿಸುವ ಬೃಹತ್ ಸೇತುವೆ ಈಚೆಗೆ ಕಂಭಗಳಲ್ಲಿ ಬಿರುಕುಬಿಟ್ಟುದರಿಂದ ರಪೇರಿ ಕೆಲಸ ಜಾರಿಯಲ್ಲಿತ್ತು. ಚೆಂಬೂರಿನಿಂದ ಗಸ್ತು ಹಾಕಿ ಬಸ್ ವಾಸಿಯ ಮಾರ್ಗ...

ಆ ರಸ್ತೆಯ ಕೊನೆಯಲ್ಲಿರುವ ಮರ. ಏನಿಲ್ಲಾ ಅಂದ್ರೂ ಒಂದು ತಲೆಮಾರು ದಾಟಿರಬಹುದು. ಅದರ ಕೆಳಗೆ ನಿಂತರೆ ಆಕಾಶ ಕಾಣುತ್ತಿರಲಿಲ್ಲ. ತನ್ನನ್ನು ತಾನೆ ಸಿಂಗರಿಸಿಕೊಂಡಂತಿರುವ ಮರದ ಟೊಂಗೆಗಳಿಗೆ ಆವರಿಸಿರುವ ಎಲೆಗಳು ತನ್ನನ್ನು ಮೀರಿ ಮೇಲಿರುವುದು ಕಾಣದಷ್...

ಮನದೊಳಗಣ ಭಾವನೆಗಳನ್ನು, ಕತ್ತಲನ್ನು, ಬೆಳಕನ್ನು ಬಗೆಬಗೆದು ಮತ್ತೊಬ್ಬರ ಎದುರು ಬೆತ್ತಲಾಗುವುದು ಸಾಮಾನ್ಯವೇ? ಅಂಥ ವ್ಯಕ್ತಿ ಯೊಬ್ಬ ಸಿಕ್ಕಾಗ ಎದೆಯೊಳಗೆ ಅಡಗಿದ ಜಗತ್ತನ್ನು ಬಿಚ್ಚಿಡಬೇಕು ಎಂದೆನಿಸಿತು ಆಕೆಗೆ. ಕತ್ತಲ ಎದೆಗೆ ಒದ್ದಂತೆ ಹಗಲು ಆಗತ...

ಮಳೆ ಸುರಿಯುತ್ತಿದೆ. ಮನೆಯಿಂದ ಹೊರಬೀಳುವುದು ಕಷ್ಟ ಎನ್ನುವಷ್ಟು ಮಳೆ. ನೆಲ ಮುಗಿಲುಗಳ ಸಲ್ಲಾಪ ನಿರಂತರ. ಭೂಮಿತಾಯಿ ಹಸಿರು ಸೆರಗು ಹೊದ್ದು ನಗುತ್ತಿರುವಾಗಲೇ ನೆನಪುಗಳು ಸುಗ್ಗಿ. ಮಳೆ ನೀರಿಗೆ ಸಮುದ್ರ ಸೇರುವ ಆತುರ. ಸುರಿವ ಮಳೆಯಲ್ಲೂ ರೇನ್ ಕೋಟ...

ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ ಇಡೀ ಕೋಣೆ ಯಲ್ಲಿ ವಿಚಿತ...

“ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು……” ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ...

ದಾಲೂರಪ್ಪ, ಇದು ಆತನ ಹೆಸರು. ಆದರೆ ಇದು ಆತನ ನಿಜ ಹೆಸರಲ್ಲ. ದಾಲೂ ಎಂಬ ಮಗ ಆತನಿಗಿದ್ದ. ಆತನ ಹೆಸರು ನನಗೆ ಇಂದಿಗೂ ಗೊತ್ತಿಲ್ಲ. ನಾನು ಸೇರಿದಂತೆ ನನ್ನ ಅಕ್ಕ, ತಮ್ಮ, ಅವ್ವೆ ಎಲ್ಲರೂ ಆತನನ್ನ ಕರೆಯುವುದು ದಾಲೂರಪ್ಪ ಎಂದು. ದಾಲೂನ ಅಪ್ಪ ’ದಾಲೂರ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...