Home / ವೃತ್ತ

Browsing Tag: ವೃತ್ತ

ಬುದ್ದಿ ಇರುವುದೆ ಹೇಳಿ ಇದ್ದಮಾತ್ರಕೆ ಕಾವು ಈಗೀಗ ಕಣ್ ತೆರೆಯುತಿರುವ ಎಳೆಯರು ನಾವು. ಹಿರಿಯರೊಡಬೆರೆತು ಅನುಭವವಿಲ್ಲ, ಬೆರೆತೆವೋ ಅಪಚಾರವಾಯ್ತೆಂಬ ಎಗ್ಗಿಲ್ಲ. ಬಾಲನಡೆ ಬಲಿತಿಲ್ಲ ಹಸಿರು ಪ್ರಾಯದಲಿ ಜೊತೆ ಬಂದೆವು. ಸ್ನೇಹಕೂ ಹುಬ್ಬುಗಂಟನು ತರುವ ...

ಯಾರೊ ಕಟ್ಟಿದ ಮನೆಯ ನಾನು ಮುರಿಯುವುದೀಗ ನನ್ನ ಕರ್‍ಮ, ಜಳ್ಳು ಕಾಳೆಲ್ಲ ಕಣ್ಮುಚ್ಚಿ ಬಾಚಿದೆನೇಕೆ? ಕೇರುತಿದೆ ಈಗ ಕೆರಳಿದ ಮನೋಧರ್‍ಮ. ಸುಬ್ಬಮ್ಮ, ನಾಣು, ಪಟಗುಪ್ಪೆ ರಾಮಾಜೋಯ್ಸ ಹರಿಕಥಾಂಬುಧಿ ಚಂದ್ರ ನರಸಿಂಹದಾಸ ಚಿಕ್ಕಂದಿನಿಂದ ನನಗೆಂದೆ ಕನಿಕರ...

ದಣಿದ ಮೈ. ದುಡಿಮೆ ಭಾರಕೆ ರೆಪ್ಪೆ ಮುಚ್ಚಿತೋ ಗಂಧರ್ವಗಣದವರ ಕಾಟ. ಕೂದಲಿಗಿಂತ ಕರಿ ತೆಳುವು ಎಳೆ ಕಚ್ಚಿ ನಡುಬಾನಿನಲಿ ತೂಗಿ ಗಿರಗಿರನೆ ಮೈಮಣಿಸುವಾಟ. ಹೊಸ ಲಯ, ಒತ್ತು; ಅರು ಅರೆಂಟೆಂಬ ಗತ್ತು; ಬರಿ ಮಸಲತ್ತು! ಅದರೂ ತಲೆ ಒಲೆವ ಮತ್ತು! ಬುದ್ಧಿಗೆ...

ಕಮಲಗಣ್ಣಿನಿಂದ ಬಾನ ನೋಡುವ ಕೆರೆ ದಂಡೆಯುದ್ದ ಅಂಚು ಹೆಣೆದ ಹೂವ ಹೊರೆ ಭೂಮಿಯೆದೆಗೆ ಹೊಕ್ಕುನಿಂತ ಭಲ್ಲೆಗಬ್ಬು ಸೊಕ್ಕಿ, ತಲೆಯ ಸುತ್ತ ಒಲೆವ ಪೈರಿನುಬ್ಬು ಬಿಸಿಲ ಕುಡಿದು ಉರುಳಿ ಬಿದ್ದ ಕಲ್ಲ ನಿದ್ದೆ ಚೌಕ ಚೌಕ ತೇಪೆ ಹೊಲಿದ ಪಗಡೆಗದ್ದೆ ಹಸಿರ ಛತ್...

ದೈವನಂಬಿಕೆಯೊಂದು ದಿನ್ನೆ, ಏರುವ ಜನಕ್ಕೆ. ಹತ್ತಿನಿಂತರೆ ದಿನ್ನೆನೆತ್ತಿಯಲಿ ಸುತ್ತಲಿನ ಹತ್ತು ವಿಷಯಗಳೆಲ್ಲ ಕಣ್ಣತೆಕ್ಕೆಗೆ ಸಿಕ್ಕಿ ನೋಟ ಕೂರಾಗುವುದು, ನಿಲವು ದೃಢವಾಗುವುದು, ತುಂಬಿ ಹರಿಯುವ ಗಾಳಿ ಬಗೆ ಸೋಸಿ ಮುಖದಲ್ಲಿ ನೊಂದ ನೆನಪಿನ ಬಿರುಸು ...

ಯಾರೋ ಬಂದರು ಯಾರೋ ಹೋದರು ಗೋಡೆ ಮೇಲೆಲ್ಲ ನೆರಳು, ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು ಯಾರದೋ ನುಣುಪು ಬೆರಳು, ಬಂದಿದ್ದರು, ನಿಂತಿದ್ದರು, ನುಡಿಸಲು ಎಣಿಸಿದ್ದರು ಎಂಬ ಭಾವವೊಂದೆ ಉಳಿದಿದೆ, ಕತ್ತೆತ್ತಲು ಏನಿದೆ, ಬರಿಬಯಲು! ಹೂ ಪರಿಮಳ ಹಾಯಾಗಿ ಹ...

ಕರೆದರೂ ತಿರುಗದೆ ಜಿಗಿದು ಓಡಿದಳಲ್ಲ, ಯಾರಿವಳು ಎರಳೆಮರಿ ಎಂದಿರೆ? ಇವಳೆ ಊರ್ಮಿಳೆ, ತುಂಬುಜಂಬುನೇರಳೆ ನಮ್ಮ ಮಲೆನಾಡ ಸಿಹಿಪೇರಲೆ. ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ ನನ್ನ ಕಂಡರೆ ನಾಚಿಕೆ, ಪ್ರೀತಿಯಲಿ ಬಾ ಎಂದು ರಮಿಸಿದರೆ ನಿಲ್ಲುವಳು ನಾ...

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್...

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ! ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ; ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ. ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ ಮಣ್ಣು ಹಡೆದದ್ದರಿತೆ ಪ್ರೀತಿ ನೀತಿ ; ...

ಏನಿದೀ ಜಿಗಿದಾಟ ಕಿವಿಹರಿವ ಕೂಗಾಟ ಇದುವರೆಗು ಕೇಳರಿಯದೀ ಆರ್ಭಟ? ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ ಇವನಾಡುವಾಟ! ಅವರಿವರ ನಾಲಗೆಯ ಕಿತ್ತು ತಲೆಯೊಳು ನೆಟ್ಟು ಬೆಳೆಸಿಹನು ಇವನೊಂದು ಭಾರಿ ಮಂಡೆ. ರಮಣ ಅರವಿಂದ ನುಡಿಯುವರು ಬುರುಡೆಯೊಳ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...