ನೀನೆಲ್ಲಿಂದು

ನೀನೆಲ್ಲಿಂದು? ಕಣ್ಮರೆಯಾದ ಚಿಕ್ಕೆ ಆಗಾಗ ಹೊಳೆದು ಕರಗುವಂತೆ ಮನದ ಮೆಲುಕಾಟದಲ್ಲಿ ಕನಸಾಗಿ ಕಾಣುವೆ ನಿನ್ನೊಡನಾಟದ ಹಾಲುಸಕ್ಕರೆಯ ಸವಿಯಂತೂ ನನಗಿಲ್ಲ ಆದರೆ ಆಗಾಗ ಫಳಕ್ಕೆಂದು ಮಿಂಚಿ ತೆರವಾದ ಬಾನಿಂದ ಮಳೆಯಂತೆ, ಅಳುವಿನಂತೆ ಇಳೆಗಿಳಿಯುವೆ, ನೆಲವೇನೂ ತೋಯದೆ...

ಅಗ್ನಿದೀಕ್ಷೆ

ಅವಳ ಮೈಗೆ ಮಣ್ಣ ಬಣ್ಣ, ಮನಕ್ಕೂ ಮಣ್ಣ ಸತ್ವ, ಅವಳು, ಆಗಾಗ ಹರಿಸುತ್ತಾಳೆ ನಲ್ಮೆಯ ನಗುವನ್ನು, ಮೈತುಂಬಿಕೊಂಡ ತೊರೆಯನ್ನು. ಕೆಲವು ದಿನ ಎಲುಬು ಮೈಯಲ್ಲಿ ನರನರ ಬರಲಾದ ಮರದಂತಿರುತ್ತಾಳೆ, ‘ಎಷ್ಟು ಸೊರಗಿರುವಿಯಲ್ಲೇ ತಾಯಿ’ ಎಂದರೆ...

ವಾಸನೆ

ಹುಟ್ಟಿದಾಗ ನೆಲ ಮೂಸಿ, ಬೆಳೆದಾಗ ಮುಡಿ ಮೂಸಿ ಇಳಿದಾಗ ಕಾಲು ಮೂಸ್ತದೆ, ಕಾಯಿದ್ದಾಗ ಕಟು ವಾಸನೆ, ಹಣ್ಣಿದ್ದಾಗ ಕಟುವಾಸನೆ. ಕೊಳೆತಾಗ ಮೂಗು ಮುಚ್ಚೋ ವಾಸಾನೆ, ಮಣ್ಣಾಗಿಂದ ವಾಸನೆ ಬೇರ್ಪಡಿಸಾಕೆ ಸಾಧ್ಯೇನು? ಈ ವಾಸನೆ ಆ...

ನೆನಪಿರಲಿ

ಹೂಮೂಸುವಾಗ ಅದರೊಳಗಿರುವ ಕಾಯಿಯ ನೆನಪಿರಲಿ ಹಣ್ಣು ತಿನ್ನುವಾಗ ಅದರ ಬೀಜದ ನೆನಪಿರಲಿ ಬಣ್ಣ ಬಣ್ಣದ ಮುಗಿಲ ನೋಡುವಾಗ ಅದರ ಹಿಂದಿನ ನೀಲಾಗಸದ ನೆನಪಿರಲಿ ವಿವಿಧ ವಿತಾನಗಳಿಂಚರವ ಕೇಳುವಾಗ ಅದರಂತರ ಭಾವ ಬಗೆದೋರಲಿ, ಅಲೆಗಳಾನಂದವನನಭವಿಸುವಾಗ ಕೆಳಗೆ...

ಸಾಮಾನ್ಯ

ಏನ ಮಾಡಿ ಒಗದ್ಯೋ, ಯಾತರಿಂದ ಮಾಡಿ ಒಗದ್ಯೋ, ತಂದೆ! ಇವನು ಎಷ್ಟು ಹಂಡ ಬಂಡ, ಎಷ್ಟು ಅಡಸಲ ಬಡಸಲ, ಬೆಳದಂಗೆಲ್ಲಾ ಬಿಚಿಗೆಂಡು ಹೊಂಟಂಗೆ ಯಾವ್ದೋ ಕಗ್ಗಂಟು, ಎಲ್ಲಾ ಗೊತ್ತಾಗಿತ್ತೇನೊ ಅನುವಂಗೆ ಒಂದೊಂದೇ ಕಂಡಿ, ಒಂದೊಂದೇ...

ಎಲ್ಲವನ ಜಾತ್ರೆ

ಹಗಲ ಭಂಡವಾಳವು ಇರುಳ ಕಾರಖಾನೆಯ ಸೇರುವುದು ಹಲ್ಲು ಮಸೆದು ಕಬಳಿಸಿತು ಯಂತ್ರ ಮಂತ್ರವೂದಿ ಚೇತನಗೊಳಿಸಿತು ತಂತ್ರ ಅವರಿವರ ಭಂಡವಾಳಗಳ ಮೇಲೆ ಹೂಡಿದ ಬೃಹದುದ್ಯಮವಿದು ಬಡ್ಡಿಗೆ ಬಡ್ಡಿ ಸೇರಿ ಬೊಡ್ಡೆ ಬಲಿತಿದೆ ಮೂಲ ಅಸಲೆಲ್ಲೋ ಒಂದೆರಡು...

ಮಾನ

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು ಚಿಂದಿಯಾಗುತ್ತವೆ ಕೆಲವು ನನ್ನ ಮೈಕೈ ಕಾಲುಗಳೊಡನೆ...

ದಾರಿ ಬಿಡಿರೋ

ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ ಹುಲಿಕರಡಿಗಳಂತೆ ಹೆದರಿಸಬೇಡಿ ಮರಿಗಿಳಿಯಂತಿವನು ಕತ್ತಿ ಬಡಿಗೆಗಳನಾಡಿಸಬೇಡಿ ಬಳ್ಳಿ ಚಿಗುರಿನಂತಿವನು ಮುಳ್ಳು ಕಲ್ಲುಗಳ ಹರವಬೇಡಿ, ಹೂಪಾದ ಇವನವು ಕೋಲಾಹಲದಲೆಯಪ್ಪಳಿಸಬೇಡಿ ಆಶ್ರಮ ಶಾಂತಿಯಲ್ಲರಳಿದ ಕಿವಿಯಿವನವು ಉರಿಮಾರಿಯ ಮೆರವಣಿಗೆ...

ದೌರ್ಬಲ್ಯ

ತಾಯಿ ಸೊಟಕ್ಕಂಟಿದ್ದ ದೌರ್ಬಲ್ಯವು ಬೆಳೆಬೆಳೆದು ಹೆಮ್ಮರವಾಗಿ ಬಳ್ಳಿ ನಡು ಬಳಸುವುದು ಕಾಲ ಬಳಸಿದ್ದೀಗ ಕೈಯ ಟಳಕುವುದು ಜೊಲ್ಲು ಸುರಿಸುತ್ತಾ ನಿಂತ ನಾಯಿಯ ಕಾಲಕೆಳಗೇ ಅದರ ಸೆರೆ ಬಿಡಿಸಿಕೊಳ್ಳಲು ಹವಣಿಸುತ್ತದೆ ನೆರಳು ಪ್ರಾಬಲ್ಯ ಬದುಕು ರಥವನ್ನೆಳೆವ...

ಕಳ್ಳುಬೇರು

ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ ಬದಲಾವಣೆ ಮಾಡಿಕೊಂತೀವಿ ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂತೀವಿ ಎಲ್ಲಕ್ಮೊದಲು...