ದೌರ್ಬಲ್ಯ

ತಾಯಿ ಸೊಟಕ್ಕಂಟಿದ್ದ ದೌರ್ಬಲ್ಯವು ಬೆಳೆಬೆಳೆದು
ಹೆಮ್ಮರವಾಗಿ ಬಳ್ಳಿ ನಡು ಬಳಸುವುದು
ಕಾಲ ಬಳಸಿದ್ದೀಗ ಕೈಯ ಟಳಕುವುದು
ಜೊಲ್ಲು ಸುರಿಸುತ್ತಾ ನಿಂತ ನಾಯಿಯ ಕಾಲಕೆಳಗೇ
ಅದರ ಸೆರೆ ಬಿಡಿಸಿಕೊಳ್ಳಲು ಹವಣಿಸುತ್ತದೆ ನೆರಳು ಪ್ರಾಬಲ್ಯ

ಬದುಕು ರಥವನ್ನೆಳೆವ ಕೀಲೆಣ್ಣೆಯಾಗಿ
ಗತಿ-ಪ್ರಗತಿ-ದುರ್ಗತಿಗಳ ವಕ್ರಚಕ್ರದ ಜಾರೆಣ್ಣೆಯಾಗಿ,
ನರಾಯಣ ಪರಂಪರೆ ಪಣತಿಯ ಸೂಡರೆಣ್ಣೆಯಾಗಿ,
ಜೀವ ಜಂತ್ರದೊಡಲಚ್ಚಾಗಿ ಮನಸಿಜನಚ್ಚು ಮೆಚ್ಚಾಗಿ
ಭೀಮ ಭಯಂಕರರ ಮಣ್ಣು ಮುಕ್ಕಿಸಿ
ಸಂಯಮ ಸನ್ಯಾಸಿಗಳಿಗೆ ಸೊನ್ನೆ ಸುತ್ತಿಸಿ
ಪ್ರಾಬಲ್ಯವೆಂಬುದನಾಳುವಂತಿದೆ ಈ ದೌರ್ಬಲ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌಂದರ್ಯ ಸ್ಪರ್ಧೆ
Next post ಅರ್‍ಲಿ ಟು ಬೆಡ್ – ಅರ್‍ಲಿ ಟು ರೈಸ್

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…