ಕೋಣ ಮತ್ತು ನಾವು

ಏಕೆ ಜನುವ ಕೊಟ್ಟೆಯಮ್ಮಾ ! ಗಂಡಾಗಿ ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ. ನಾನು ಹುಟ್ಟಿದ ಕೂಡಲೆ ಮಾರಿದೇವಿಯ ಒಳಿತು ಕೋರಿ ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು....

ಒಲೆಗಳು ಬದಲಾಗಿವೆ

ಒಲೆಗಳು ಬದಲಾಗಿವೆ ಹೊಸ ರೂಪ, ಆಡಂಬರದ ಬಿಂಕ ಬಿನ್ನಾಣ ಮೈತೆತ್ತು ಉರಿ ಬದಲಾಗಿದೆಯೇ? ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ ಹೊಳಪು ಕಂದಿದೆಯೇ? ಕಳೆಕುಂದಿದರೆ ಬೇಯಿಸುವ ಕೈಗಳು ಕೆಲಸ ಕಳೆದುಕೊಳ್ಳುತ್ತದೆ ಕೈಬಳೆಯ ನಿಟ್ಟುಸಿರ ಗಾಳಿಯೂ ದೀರ್ಘವಾಗುತ್ತದೆ....

ಕಾಣ್ಕೆ ಬೇರಾದರೂ ಕರುಳು ಒಂದೇ

ತಾಯಿ ಹೆಂಡತಿ ಮಗಳು ಗೆಳತಿ ತೋರಿಕೆಯಲ್ಲಿ ಒಂದೆ ವೃಕ್ಷದ ಬೇರೆ ಬೇರೆ ಕೊಂಬೆ ಹಸಿಸೌದೆ ಬೆರಣಿ ಕಕ್ಕುವ ದಟ್ಟಹೊಗೆ ನಡುವೆ ನಿಧಾನ ಹಣಿಕುವ ಬೆಂಕಿ ಕುಡಿಯಂತೆ ಚಿಗಿತವಳು; ಇಷ್ಟಿಷ್ಟೆ ಗೆಲ್ಲುತ್ತ ಕುಡಿ ಕಾಂಡವಾಗುತ್ತ ತುತ್ತಲಾರದ...

ಬಸುರಾದೆನ ತಾಯಿ ಬಸುರಾದೆನ

ಬಸುರಾದೆನ ತಾಯಿ ಬಸುರಾದೆನ ನನ್ನ ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ|| ವಾರೀಗಿ ಗೆಳತೇರು ಗಾರೀಗಿ ನೆರತೇರು ಬೋಳ್ಯಾರು ಹುಳು ಹುಳು ನೋಡ್ಯಾರೆ ಗಂಡನ್ನ ಹೆಸರೇಳ ಗಣಪತಿ ತಾಯಾಗ ಗಮ್ಮಂತ ಗುಳುಗುಳು ನಗತಾರೆ ||೧|| ಏನಂತ...

ಮುಖಾ ಮುಖಿ

ನಾನು ‘ಅವನನ್ನು’ ಕಾಣ ಹೋದೆ ಬೇಡಿಕೆ ಪಟ್ಟಿ ಹನುಮನ ಬಾಲದಂತಿತ್ತು. ಎದುರಿಗೆ ನಿಂತು ಇಲ್ಲದ ಭಯ, ಭಕ್ತಿ ನಟಿಸುತ್ತ "ನೀನೆ ನನಗೆ ಎಲ್ಲ ನಿನ್ನದೇ ಇದು ಎಲ್ಲ ನಾನು, ನನ್ನದೆಂಬುದೇನೂ ಇಲ್ಲ" ನನ್ನ ಊನ,...

ನೆಲಮಣ್ಣಿನ ಸ್ವಯಂ ಸ್ವಯಂವರ

ಅದೇ ಆ ಕೆಂಪುಮಣ್ಣಿನ ಗದ್ದೆಯ ತುಂಬಾ ಪ್ರತಿಸಲದಂತೆ ಈ ಸಲವೂ ಹೊಸ ಬೀಜಗಳದ್ದೇ ಬಿತ್ತು. ಮೋಹನ ರಾಗದ ಮಾಲಿಕೆಗಳ ಜೊತೆ ತರವೇಹಾರಿ ತಳಿಬೀಜಗಳ ಊರಿಹೋಗುವ ಆತನಿಗೋ ಪುರಸೊತ್ತಿಲ್ಲದ ದಣಿವು. ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ...

ಒಂದು ಹಣತೆ ಸಾಕು

ಒಂದು ಹಣತೆ ಸಾಕು ಮನೆಯ ಬೆಳಗಲು ಕೋಟಿ ಕಿರಣಗಳೆ ಬೇಕು ತಾಯಿನಾಡ ಬೆಳಗಲು || ಕೋಟಿ ಕಿರಣಗಳಲಿ ಬೇಕು ಸ್ವಚ್ಛಂದ ಮನಸ್ಸು ಮನಸ್ಸುಗಳಿಗೆ ಬೇಕು ತಾಯಿ ನುಡಿ ಆರಾಧಿಸುವ ಮನಸು || ನಮ್ಮ ಮನೆ...

ಒಪ್ಪಿಕೊ ಪರಾಭವ!

ಮಾತಲ್ಲ ಮಂತ್ರ, ಅರ್ಥದಾಚೆಗೆ ಮಾತ ಹಾರಿಸಿಬಿಡುವ ತಂತ್ರ; ಕತ್ತಿಗೆ ಗಂಟು ಬಿದ್ದ ಅರ್ಥದ ಕಣ್ಣಿ ಕಳಚಿ ಅಂತರಿಕ್ಷಕ್ಕೆ ಜಿಗಿದು ನಕ್ಷತ್ರವಾಯಿತು ಶಬ್ಧ. ನಾದಲಯಗಳ ಜೋಡು ಸಾರೋಟು ಹತ್ತಿ ರೂಪಕದ ಮೆರವಣಿಗೆ ಬರವಣಿಗೆ; ಬಡ ಪದವ...