Home / Kavana

Browsing Tag: Kavana

೧ ನಡು ಹಗಲಲ್ಲಿ ಹಚ್ಚಿಟ್ಟ ದೀಪ- ಬೆಳಕಿನಲ್ಲಿ ಕಳೆದುಹೋದ ಬೆಳಕು. ಬೆಳಕಿನ ಸಿದ್ಧಾಂತ ಮುರಿದು ಬಿತ್ತು : ದೊಡ್ಡ ಬೆಳಕು ಹಿಮ್ಮೆಟ್ಟಿದೆ ಹಣ್ಣಿನಿಂದ ಮರ ಬಿದ್ದ ಹಾಗೆ. ೨ ಗಂಟೆಯ ತುಂಬ ಗಾಳಿ, ಬಾರಿಸದಿದ್ದರೂ. ಹಕ್ಕಿಯ ಮೈಯ ತುಂಬ ಹಾರಾಟ, ನಿಶ್ಚಲವ...

ಆಗಿನಿಂದಲು ಇವನು ಹೀಗೆಯೇ ರೋಗಿಯೇ, ಮಾತಲ್ಲಿ ಮಾತ್ರ ಧನ್ವಂತರೀ ಶೈಲಿಯೇ; ಇಷ್ಟು ದಿನ ಹುಚ್ಚೆದ್ದು ಊದಿರುವ ರಾಗದಲಿ ಶೋಕ ವ್ಯಭಿಚಾರಿ, ಸ್ಥಾಯಿಯು ಮಾತ್ರ ಟೀಕೆಯೇ. ಟೀಕೆ ಪರರಿಗೆ, ಆತ್ಮಾರ್ಚನೆಗೆ ನುಡಿಕೇದಗೆ! ಇವನ ಬೊಜ್ಜು ಪಟಾಕಿ ಸಿಡಿತಕ್ಕೆ ಜಯ...

ಹಾರೆ ನೀ ಹಕ್ಕಿ ಹಾರೆ ನೀಲಾಕಾಶದ ದಿಗಂತದಲಿ ಬೆಳ್ಳಿ ಚುಕ್ಕಿ ಬಿಡಿಸಿ ರಂಗೋಲಿ ಬಾರೆ ನೀ ಹಕ್ಕಿ ಬಾರೆ ನನ್ನ ನಿನ್ನ ಬಂಧ ತಿಳಿ ಹೇಳು ಬಾರೆ ನೀ ಬಾರೆ ಜಾಣೆ ಹಕ್ಕಿ ||ಽಽಽಽ ಬೆಳ್ಳಿ ಹಕ್ಕಿ ನೀನು ಬಂಗಾರ ಮೈ ಬಣ್ಣ ಸಿಂಗಾರದ ನೆರಿಗೆ ಉಟ್ಟ ಚೆಲುವೆ ಹ...

ಕಳ್ಳ ಕದೀಮರ – ಕವಿ ಪ್ರಣಯಿಗಳ ಗೆಳೆಯ ಚಂದ್ರ ದಕ್ಷ ಧೀಮಂತರ ಹೂವು ಹಸಿರಿನ ಮಿತ್ರ ಸೂರ್‍ಯ ಹಾಲು ಹಸುಳೆಯರ ಅಜ್ಜ ಅಜ್ಜಿಯರ ಲಾಲಿ ಚುಕ್ಕೆಗಳು. *****...

ಅಮ್ಮಾ, ನದಿ ಯಾಕೆ ನಗುತ್ತಿದೆ? ಬಿಸಿಲು ಕಚಗುಳಿ ಇಟ್ಚಿದೆ. ಅಮ್ಮಾ, ನದಿ ಯಾಕೆ ಹಾಡುತ್ತಿದೆ? ಕೋಗಿಲೆ ನದಿಯ ಕಲರವ ಹೊಗಳಿದೆ. ಅಮ್ಮಾ, ನದಿಯ ನೀರು ಯಾಕೆ ತಣ್ಣಗಿದೆ? ಒಮ್ಮೆ ಲವ್ವು ಮಾಡಿದ್ದ ಹಿಮಗಡ್ಡೆಯ ನೆನಪಾಗಿದೆ. ಅಮ್ಮಾ, ನದಿಗೆಷ್ಟು ವರ್ಷ ವ...

ಎದೆಯ ಹೊಂಡದಲೆಲ್ಲ ಎಚ್ಚರದಿ ಕೈಯಾಡಿ ಹುಡುಕಿ ಎತ್ತಿದ್ದೇನೆ ನಿನ್ನ, ನಿನ್ನ ಮಲಗಿಸಿ ಮೈಯ ಅಂಗುಲಂಗುಲವನ್ನು ದುರ್ಬೀನುಗಣ್ಣಿನಲ್ಲಿ ಬೆದಕಿ ನೋಡಿದರೆ ಇದೇನು, ಎಲ ನೀನು ಪ್ರತಿ ಕಣದಲೂ ಖುದ್ದು ನಾನು! ಜವಳಿಯಂಗಡಿಯಲ್ಲಿ ಗಂಟೆಗಟ್ಟಲೆ ಹುಡುಕಿ ಬಟ್ಟೆ...

ತನು ಮನ ಸೆಳೆಯುವ ಬೃಂದಾವನಕೆ ಹೋಗುವ ಬಾರೆ ಸಖಿ ಕರೆಯೋಲೆಯನಿತ್ತು ಕರೆಯುತಿದೆ ಬೃಂದಾವನ || ನವರಸ ಶೃಂಗಾರ ರಸದೌತಣ ನವ ಚೈತನ್ಯ ಮೈತಾಳಿತ್ತು ರಾಧೆ ಕೃಷ್ಣೆಯರ ಗೋಪಿಕೆಯರ ವನ ಬೃಂದಾವನ || ಕಿನ್ನರ ಲೋಕದ ಕಿನ್ನರಿಯ ನರ್‍ತನ ಜಲದಿನಿಂದು ಮೆರೆವ ಸ್ವ...

1...6162636465...147

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...