ತಮೋಭೀತಿ

ತವಸಿ ಶಿವ ಪಾರ್ವತಿಯ ನಸು ನೋಡುತೆವೆ ಮುಚ್ಚಿ- ದಂದದೂಳು ಸಂಜೆಯಚ್ಚರಿ ಹೊನ್ನ ಬೆಳಕು ಮಲೆ ಕಣಿವೆ ಬನ ಸರಸಿಯೆಲ್ಲವೂ ತೇಜಗೊಳೆ ತುಸಕಾಲ ಬೆಳಗುತಳಿಯಿತು, ಆಯ್ತು ನಸುಕು. ಕತ್ತಲೆಲ್ಲೆಡೆ ಈಗ-ಇದಿರುಮಲೆ ಕರಗಿತಿಗೊ ಬಾನಿನೊಳು ಕದಡಿತಿಗೊ-ಬರಿ ಧೂಳುಗುಪ್ಪೆ;...

ಆರತಿ

ಅಂತರಾತ್ಮದ ದೀಪ ಎತ್ತುವೆ ಕಣ್ಣು ಕರ್‍ಪುರ ಬೆಳಗುವೆ ಜ್ಞಾನ ಕೆಂಡಕೆ ದೇಹ ಗುಗ್ಗುಳ ಸುಟ್ಟು ಧೂಪವ ಹಾಕುವೆ ಉಸಿರು ಉಸಿರಿಗೆ ಶಿವನ ನೆನಪಿನ ಊದಬತ್ತಿಯ ಬೆಳಗುವೆ ವಿಮಲ ಮಾನಸ ಜ್ಞಾನ ಅಗ್ನಿಯ ತುಪ್ಪದಾರತಿ ಸಲಿಸುವೆ...

ಜೀರುಂಡೆಯ ಮೇಳ

ಕದ್ದಿಂಗಳಿನಿರುಳು: ಬುವಿ ಬಾನಂತರವೆಲ್ಲವ ಕತ್ತಲು ತುಂಬಿರಲು, ದೆಸೆಯಳಿಯದೆ ನಿಲಲು ತಮಕಿವು ಸೇತುವೊ ಎನೆ ದಟ್ಟೈಸಿರೆ ತಾರೆಗಳು, ಭೂತ ಭವಿಷ್ಯವನು ಮುಸುಕಿನೊಳವಿತಿಟ್ಟಂತಿಳೆ ಹೊದೆದಿರೆ ಮೌನವನು, ಸೆರೆಬಿದ್ದಿಹ ಕಾಲ ಹುಯಿಲಿಡುವುದೊ ಎನೆ ಜಿರ್ರನೆ ಜೀರುಂಡೆಯ ಮೇಳ! *****

ಪಕ್ಷಿ ಮಂಚವೆ ತಾಯ ಮಂಚವು

ಪಕ್ಷಿ ಮಂಚವೆ ತಾಯ ಮಂಚವು ವೃಕ್ಷ ತೊಟ್ಟಿಲು ತೂಗಲಿ ಕಣ್ಣು ಕಮಲಾ ಹಾಲು ಅಮೃತ ಎದೆಯ ಗಾನವ ಉಣಿಸಲಿ ದೇಹ ದೇಗುಲ ಮನವೆ ಲಿಂಗವು ಆತ್ಮ ನಂದಾದೀಪವು ಪ್ರೀತಿಯೊಂದೆ ಮಧುರ ಪರಿಮಳ ಹೊನ್ನ ಅರಮನೆ...

ಚಿಕುಹೂ

ಚಿಕುಹೂ ಚಿಕುಹೂ ಚಿಕುಹೂ- ಸನ್ನೆಯವೊಲು ಮುಹುರ್ಮುುಹು ಆರೆಚ್ಚರಕೀ ತುತ್ತುರಿ ಬಾನೊಳು ಮೊಳಗುತ್ತಿದೆ? ಎನ್ನ ಕಿವಿಯೊಳೀ ಸವಿ ದನಿ ಸಿಂಪಿಸುತಿದೆ ಸೊದೆಸೀರ್ಪನಿ ವಿಸ್ಮೃತಿಗೈದಿರುವಾತ್ಮವ- ನುಜ್ಜೀವಿಪ ತೆರದೆ. ದಿವಮರೆತಪ್ಸರೆ ಎಚ್ಚರೆ ಅಗಲುವಳೆಂದಿಳೆ ಬೆಚ್ಚಿರೆ ಹರಿಕಾರರನಮರಾವತಿ ದೊರೆಯಟ್ಟಿಹನೆನಲು ಈ...

ಮುದ್ದು ಕಂದನ ವಚನಗಳು : ಆರು

ಯೋಗ ಉಸಿರು ಉಸಿರಿಗೆ ಶಿವನ ನೆನಹು ನಿಂದಿರಲಣ್ಣ ಸಹಜಯೋಗವೆ ಯೋಗ ರಾಜಯೋಗ ಮಾಡೂವ ಕೈ ಕೆಲಸ ನೆನಪಿನಾಟವ ಮಾಡು ಕರ್‍ಮಯೋಗವೆ ಯೋಗ ಮುದ್ದುಕಂದ ಸಂಸಾರ ಸಂಸಾರವೆಂಬುವದು ಕೊಳಚೆ ಕಿಲ್ಪಿಷವಲ್ಲ ಸಂಸಾರ ಸುಂದರದ ದ್ರಾಕ್ಷಿತೋಟ ಹೂವು...

ಸ೦ಧ್ಯಾ

ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ 'ಮುನಸ್ಸೀನ'ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ ಹೊನಲಿನೊಳು ಸುರಕನ್ಯೆ ಹಣತೆಯಿದ ತೇಲಿಸಿಹ- ಳೆನುವಂತೆ...

ಮುದ್ದು ಕಂದನ ವಚನಗಳು : ಐದು

ಶಿವಯೋಗಿ ಲಂಗೋಟಿ ಕಟ್ಕೊಂಡು ಕಾಡು ಸೇರುವ ಯೋಗಿ ನೀನೊಬ್ಬ ಹೆಂಬೇಡಿ ಅಂಜುಬುರುಕ ಇದ್ದ ಜೀವನದಲ್ಲಿ ಇದ್ದಂತೆ ಎದೆಯೊಡ್ಡು ಶೂರನೇ ಶಿವಯೋಗಿ ಮುದ್ದುಕಂದ ಲಾಂಛನ ಪ್ಯಾಂಟು ತೊಟ್ಟರು ಶರಣ ಬೂಟು ತೊಟ್ಟರು ಶರಣ ಲಾಂಛನದ ಪ್ರಿಂಟಿನಲಿ...

ಕವಿ

ಯೋಜನಗಳಾಚೆಯೊಳು ಎಲ್ಲಿಯೋ ಜನಿಯಾಂತು ಮಿಂಚಿನಣುಗಳನೇರಿ ಸಕಲ ದಿಙ್ಮಂಡಲವ ಸಂಚರಿಸುತಂತರದಿ ಮೌನದಿಂ ಮಿಡಿಯುತಿಹ ಸೋಜಿಗದ ಗೀತವನ್ನು ಹಿಡಿದು, ಉಜ್ಜ್ವಲಗೊಳಿಸಿ, ಶ್ರೋತೃಪಥವೈದಿಸುವ ಯಂತ್ರದೊಲು,-ಹೇ ಕವಿಯೆ, ಬಾಳುಬಾಳುಗಳಾಚೆ ಬ್ರಹ್ಮಾಂಡ ಹೃದಯಾಂತ- ರಾಳದೊಳು ಸಂತತಂ ಸಂಜನಿಸುವಾನಂದ- ಮಾತೃಕೆಯೆ ತಾನಾದ, ವಿಶ್ವ...

ಮುದ್ದು ಕಂದನ ವಚನಗಳು : ನಾಲ್ಕು

ಬದುಕು ನಟ್ಟು ಕಡಿಯುವ ಶರಣ ಒಡ್ಡು ಕಟ್ಟುವ ಶರಣ ರೊಟ್ಟಿ ತಟ್ಟುವ ಕೈಯೆ ತಾಯಿ ಶರಣ ಬದುಕು ಹೆಂಗೊ ಹಾಂಗ ಬದುಕಿ ನಿಂದವ ಶರಣ ಶೂರನೇ ಶಿವಶರಣ ಮುದ್ದುಕಂದ ಶರಣ ಮೂರ್‍ಹೊತ್ತು ಮಡಿಸ್ನಾನ ಉಪವಾಸ...