ಜಗವನು ಬೆಳಗುವ ರವಿಯಿಹನೆಂದು, ತಣ್ಗದಿರನು ಶಿರದೊಳಗಿಹನೆಂದು, ಅಪಾರ ಸಂಪದವಲ್ಲಿಹುದೆಂದು, ಅಷ್ಟೈಶ್ವರ್ಯವು ತನಗಿಹುದೆಂದು, ಸಗ್ಗದೊಡೆಯ ತಾ ಪೇಳುವನು! ಬಲು ಬಲು ಬಿಂಕವ ತಾಳಿಹನು!! ಮೀರಿದ ಶೂರರು ಅಲ್ಲಿಹರೆಂದು, ಕುಕ್ಕುವ ಕವಿವರರಿರುತಿಹರೆಂದು, ಮುನಿವರರೆಲ್ಲರು ತನ್ನವರೆಂದು, ಕಲೆಗಳ ಕೋವಿದರಲ್ಲಿಹರೆಂದು, ...

ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗೌರಿ ಶಂಕರನಿಗೆ ಶಿರ ಬಾಗಿದರೂ ಮನ ಸಹ್ಯಾದ್ರಿಗೆ ಮರಳುವುದು ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗಂಗೆಯಲಿ ಮಿಂದರೂ ಮೈ-ಮನ ತುಂಗೆಯಲಿ ತಂಗುವುದು ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ನಾನ...

“ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?” “ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?” “ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ...

ಗುಡುಗುಟ್ಟಿದ ಧರೆ ಕೆರಳಿತು ಸಾಗರ ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ ಕೊಚ್ಚಿ ಹೋದವು ಮನೆ ಮಠ ಜಲಸಮಾಧಿಯಾದವು ಜೀವರಾಶಿ ಕಂದಮ್ಮಗಳ ಸಾವಿನಲ್ಲಿ ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ ನೋವು! ಕೇಳುವವರ್‍ಯಾರು? ಮಾರಣ ಹೋಮ ನಡೆಯಿತು ಜೀವರಾಶಿಗಳ ಮೇಲೆ...

ಮನೆಯ ತುಂಬ ಹಾರಿಕೊಂಡು ಅಡುಗೆ ಮನೆಗೆ ನುಗ್ಗಿಕೊಂಡು ಅಂಗಳದಲ್ಲಿ ನಲಿದುಕೊಂಡು ನಮ್ಮ ನೋಡಿ ಹೆದರಿಕೊಂಡು ಬುರ್ರೆಂದು ಹಾರಿ ಹೋಗಿ ಮತ್ತೆ ಮತ್ತೆ ಇಣುಕುತ್ತಿದ್ದ ಚಿಲಿಪಿಲಿ ಹಾಡಿಕೊಂಡು ಮಕ್ಕಳಿಗೆ ಕುಶಿ ಕೊಡುತ್ತಿದ್ದ ಗುಬ್ಬಚ್ಚಿಗಳೆಲ್ಲಿ ಕಾಣೆಯಾದ...

ತೋರುವುದು ಕನ್ನಡಿ ಈ ಚೆಲುವು ಕರಗುವುದ, ಗಡಿಯಾರ ಕೈಮುಳ್ಳು ಗಳಿಗೆಗಳು ಜರುಗುವುದ; ಈ ಖಾಲಿ ಪುಟಗಳಲಿ ಬರೆ ಮನದೊಳಿರುವುದ, ರುಚಿನೋಡಿ ಬಳಸು ಈ ಪುಸ್ತಕದ ಒಳತಿರುಳ. ಕನ್ನಡಿಯು ಬಿಂಬಿಸುವ ಮುಖದ ಮುರಿನೆರಿಗೆಗಳು ಕೆಳಕುಸಿದ ಗೋರಿಗಳ ನೆನಪನ್ನು ಕೆದು...

ಅಕ್ಷಯಕುಮಾರನ ಅವಸಾನ ಮಾನಸಿಕವಾಗಿ ತೊಳಲಾಡುತ್ತಾ ಹಾಗೆಯೇ ನಿದ್ದೆಹೋದೆ, ಎಷ್ಟೋ ಹೊತ್ತಿನ ಮೇಲೆ ಎಚ್ಚರವಾಯಿತು. “ಇದೇನಿದು ಇಷ್ಟೊಂದು ನಿದ್ದೆ ಯಾವ ಕೇಡಿಗೋ! ರಾಜ್ಯದಲ್ಲಿ ಅನಾಹುತಗಳಾಗಿವೆಯೋ, ಗಮನಿಸಬೇಕು” “ರಾವಣೇಶ್ವರನಿಗೆ...

ಕರುಣಾಳು ಸಂತತವು ಕಾಯ್ವಬೀಳಿಸನೆಮ್ಮ ಏಕೆ ಹೆದರಿಕೆ ಒಂದು ತಪ್ಪಿಗಾಗಿ ಹೆದರದಿರು ದಟ್ಟಡಿಯ, ಹಾಕುತ್ತ ಹೋಗೋಣ ದೇವನಿರುವಾ ದಿವ್ಯ ತಾಣಕಾಗಿ ಹಲವು ಹಂಬಲಗಳನ್ನು ಹೊರಹಾಕಿ ಎದೆಗೂಡ ಹಸನಾಗಿ ಇಟ್ಟು ಸೊಗ ಉಣ್ಣೋಣುಬಾ ಒಂದೊಂದೆ ಮೆಟ್ಟಲವ ಮೇಲೇರಿ ಗುರಿಯ...

ಸಾಹಿತ್ಯ ಗಗನದಲಿ ಧ್ರುವ ತಾರೆ ಮಿನುಗುತಿತ್ತು ಒಮ್ಮೆಲೇ ಮಾಯವಾಯ್ತು ಕಣ್ಮರೆಯಾದುದು ಜಡಕಾಯ ಶಾಶ್ವತವಾಗಿ ಉಳಿದದ್ದು ಅಮೂಲ್ಯ ಕೃತಿಗಳಲಿ. ಅದೆಂದಿಗೂ ಧ್ರುವ ಚಿರ ಶಾಂತಿ ಹೊಂದಲಿ ಜೀವ ಎಂದು ನಿನ್ನ ಬೇಡುವೆ ದೇವ. ೭-೧೦-೧೯೭೫ ರಂದು ಶ್ರೀ ಡಿ.ವಿ. ಗ...

ಮೂಢತೆಯ ಮಾತು ಆಯಿತೇ ಮುತ್ತು ಹವಳ ನೋಡಲು ಪತಿ ಹವಳ ಸಾಯುವನೆಂದು ಕಳವಳ ಅದೆಷ್ಟೋ ದಿನಗಳಿಂದ ಕೊರಳಲಿ ಇದ್ದ ಮುತ್ತಿಗೆ ಜೀವ ಬಂದಿತೇನೋ ಈಗ ಕುಟ್ಟಿದರೇ ಬಿಡುವುದೇ ಕುತ್ತ ನೀತಿಯ ಮಾತ ವರ್‍ಷ ಹೇಳಿದರೂ ಕೇಳದ ಮಹಾ ಮಣಿಗಳು ಅನೀತಿಯ, ಮೌಢ್ಯದ ಮಾತುಗಳು...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...