ಸಾಹಿತ್ಯ ಗಗನದಲಿ
ಧ್ರುವ ತಾರೆ ಮಿನುಗುತಿತ್ತು
ಒಮ್ಮೆಲೇ ಮಾಯವಾಯ್ತು
ಕಣ್ಮರೆಯಾದುದು ಜಡಕಾಯ
ಶಾಶ್ವತವಾಗಿ ಉಳಿದದ್ದು
ಅಮೂಲ್ಯ ಕೃತಿಗಳಲಿ.
ಅದೆಂದಿಗೂ ಧ್ರುವ
ಚಿರ ಶಾಂತಿ ಹೊಂದಲಿ ಜೀವ
ಎಂದು ನಿನ್ನ ಬೇಡುವೆ ದೇವ.
೭-೧೦-೧೯೭೫ ರಂದು ಶ್ರೀ ಡಿ.ವಿ. ಗುಂಡಪ್ಪ ಅವರು ಸ್ವರ್ಗಸ್ಥರಾದಾಗ, ಈ ಕವನ ಬರೆದು ಶ್ರೀ ಡಿ.ವಿ.ಜಿ. ಅವರ ಅಮೋಘ ಕೃತಿ “ಮಂಕುತಿಮ್ಮನ ಕಗ್ಗ” ಪುಸ್ತಕ ಕೊಂಡು, ಅದರ ಮೊದಲ ಪುಟದಲ್ಲಿ ಈ ನನ್ನ ಕಿರುಗವನ ಬರೆದು, ಅಗಲಿದ ಮಹಾ ಚೇತನಕ್ಕೆ ನನ್ನ ಗೌರವಪೂರ್ವಕ ನಮನ ಸೂಚಿಸಿದೆ.
*****
೦೭-೧೦-೧೯೭೫