ಈ ಗೋಡೆಯಿಂದ ಆ ಗೋಡೆಗೆ ಕಪಾಟಿನಿಂದ ಷೋಕೇಸಿಗೆ ಮುಚ್ಚಿದ ಈ ಬಾಗಿಲಿನಿಂದ ತೆರೆಯದ ಆ ಕಿಟಕಿಯವರೆಗೆ ಹಾರಾಟ ವಿಹ್ವಲ ತುಡಿತ ಮನೆ ಹೊಕ್ಕ ಜೋಗಿಣಿ ಹಕ್ಕಿಯ ತಬ್ಬಲಿ ಅಲೆದಾಟ. ಸುತ್ತ ಸುತ್ತಿ ಸುಳಿದು ಒತ್ತಿ ಬಂದ ಕಂಪನ. ಜನ್ಮಾಂತರದ ಮೂಲ ಜಾಡು ತಡಕುತ್...
ಕೆಲವೊಮ್ಮೆ ಕವಿತೆ, ಕತೆ, ಕಾದಂಬರಿ ಅಥವಾ ಪ್ರಬಂಧಗಳಂಥ ‘ಪಠ್ಯ’ಗಳಲ್ಲಿನ ಶಬ್ದಗಳನ್ನೋ ಸಂದರ್ಭ ಸೂಚನೆಗಳನ್ನೋ ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಅಡಿಟಿಪ್ಪಣಿಗಳ ಅಥವಾ ಕೊನೆಟಿಪ್ಪಣಿಗಳ ಸಹಾಯ ಬೇಕಾಗುತ್ತದೆ; ಆಯಾಪುಟಗಳ ಅಡಿಯಲ್ಲೇ ಮುದ್ರಿತವಾದುವು ಅಡ...
ಅನುದಿನವು ಇಡು ಭಕ್ತಿಯನ್ನು ದೇವನಡಿಯಲ್ಲಿ ಅನುಸರಿಸು ಸನ್ಮಾರ್‍ಗವನೆ ನಿತ್ಯ ಮುದದಿ. ಎತ್ತಲುಂ ಕತ್ತಲೆಯು ಸುತ್ತಿಹುದು ದಾರಿಯನು ಕಿತ್ತುಬಿಡು ಭಯವನ್ನು, ಎತ್ತು ಪೌರುಷವಾ. ಅತ್ತಿತ್ತ ಕದಲದಿರು, ಚಿತ್ತವನು ಸ್ಥಿರಗೊಳಿಸು, ಎತ್ತರದೊಳಿದೆ ತಾರೆ, ...
ಸುಲಭವೆಂದೊಂದು ಬೆಳೆಯನಿರುವೆಲ್ಲ ಜಾಗ ದೊಳು ರೈತ ತಾ ಬೆಳೆದನಿವಾರ್‍ಯದೊಳು ಮಾರುವ ನೆಲ್ಲವನು ನೀಚ ಬೆಲೆಗೆ, ಉಳಿದೆಲ್ಲ ಬೇಕು ಗಳಾನಂತರದೊಳ್ ಕೊಳ್ಳುವನುಚ್ಛ ಬೆಲೆಗೆ ಬೆಲೆಯಿಲ್ಲದಾಗಿಹುದಿದರಿಂದ ರೈತಂಗಾತನುತ್ಪನ್ನಂಗೆ – ವಿಜ್ಞಾನೇಶ್ವರಾ *...
ದಡೂತಿ ಮನುಷ್ಯನೊಬ್ಬ ವೈದ್ಯರೊಬ್ಬರ ಬಳಿ ಬಂದು ಕೇಳಿದ- “ಡಾಕ್ಟ್ರೆ ಕೂಡಲೇ ನಾನು ಇಪ್ಪತ್ತು ಪೌಂಡ್ ತೂಕವನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು” ಡಾ|| ಶೀಲಾ: “ನಿಮ್ಮ ಎರಡು ಕಾಲು ಕತ್ತರಿಸಿಕೊಳ್ಳಿರಿ…” *...
ಮುಗಿಲೆತ್ತರ ಏರುವ ಹಾರುವ ತೇಲಾಡುವ ಬಯಕೆ ಬಲಿತು ಹೆಮ್ಮರ ಕಡಿದಾದ ದಾರಿ ಬಲುದೂರ. ಕಾಣದ ತೀರ ಗುರಿ ಸೇರುವ ಕಾತುರ ಹುಚ್ಚು ಮನಸ್ಸಿಗಿಲ್ಲ ಕಡಿವಾಣ ಪುಂಖಾನುಪುಂಖ ನಿರಾಸೆಯ ಬಾಣ ಆಸೆಗಳು ಆಗಸದಷ್ಟು ಕನಸುಗಳು ಕಡಲಿನಷ್ಟು ನನಸಾಗದೆ ಉಳಿಯುವುದೇ ಹೆಚ್...
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ ಗುರುಪಾದವ ಕಂಡು ಧನ್ಯಳಾದೆ ನೋಡಾ [ಅರಲುಗೊಂಡ ಬತ್ತಿದ ಬರ...
೧ ಪೃಥ್ವಿಯ ಒಡಲೊಳಗಿರುತಿಹುದೇನು ? ತಳಮಳ ಕಾಯ್ದಿಹ ಲಾವಾರಸವು ! ಭೂಮಿಯು ಗದಗದ ನಡುಗುತಿದೆ ! ಸಾಗರ ಕೊನೆ ಮೊದಲಾಗುತಿದೆ ! ಗಿಡವದು ಬುಡಮೇಲಾಗುತಿದೆ ! ಪಶುಗಳ ಪ್ರಾಣವು ಪೋಗುತಿದೆ ! ಮಾನವಕೋಟಿಯು ಮುಳುಗುತಿದೆ ! ಕಟ್ಟಡ ಕಟ್ಟಡ ಉರುಳುತಿದೆ ! ಪಟ...
ದಿನಾಲು ಉರಿಯುವ ಸೂರ್‍ಯನ ಒಂದು ಕಿಡಿಯ ತೆಗೆದು, ಪ್ರಣತಿ ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ, ದೀಪ ಹಚ್ಚುವ ಕಾಲ ಮತ್ತು ನಾನು ಖಾಸಾ ಗೆಳೆಯರು. ಎದೆಯಿಂದ ಎದೆಯ ಆಳಕೆ ಇಳಿದ ಇಷ್ಟದ ಕಷ್ಟದ ಕ್ಷಣಗಳ, ಸರಿಸಿ ದಕ್ಕುವ ಬೆಳಕಿನ ಕೋಲುಗಳು. ಆ ದಿನದ ಮ...
ಮಧುರ ಮಧುರವೀ ಮಧುರ ಚಂದ್ರಮ ಮಧುರ ಮಧುರಾಂಕಿತವೀ ಸಂಭ್ರಮ ಮಧುರ ಮಧುರವೀ ಪ್ರೇಮ ಕಾಶ್ಮೀರ ಮಧುರ ಮಧುರವೀ ಗಾನವೀ ಮನೋಭಿಲಾಶ ಸಂಭ್ರಮ ಮಧುರ ಮಧುರವೀ ನಾಟ್ಯ ವಿಲಾಸ ತೋಂತನಾಂತ ಮಧುರ ಮಧುರವೀ ತಕಟ ತಾಟಾಂಕಿತ ಮನೋಹಾರಿ ಮಧುರ ಮಧುರವೀ ಸ್ವರ ಮಾಧುರ್ಯ ಮ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







