ನನ್ನೊಳಗೆ ನೀನಿದ್ದೆ

ಅರಿವಾಗಲೇ ಇಲ್ಲ ನನ್ನೊಳಗೆ ನೀನಿದ್ದೆ. ಕಂಡಕಂಡಲ್ಲಿ ಕಾಡು ಮೇಡಲ್ಲಿ ನಾಡಬೀಡಲ್ಲಿ ನಿನ್ನರಸಿ ಅಲೆದೆ. ಕಣ್ಣಿನಾಳದ ಬಿಂಬದೊಳು ಒಳಬಿಂಬವಾಗಿ ನೀನಿದ್ದೆ. ಬಿಂಬಕ್ಕೆ ಇಂಬು ನಾನಾಗಿದ್ದು ತಿಳಿದಿರಲಿಲ್ಲ ಮುಷ್ಟಿಯೊಳಗಣ ಸೃಷ್ಟಿ ನೀನಾಗಿದ್ದೆ ಕರದೊಳಗಣ ಕಮಲ ಕಾಡು ಕುಸುಮವೆಂದು...

ಬಣ್ಣಗೆಡುತ್ತಿವೆ ಬೀಜಗಳು

ನನ್ನದೇ ತಾರಸಿಯಲ್ಲಿ ಒಣಗಿಸಿದ ಒಂದೇ ಜಾತಿಯ ಬೀಜಗಳು ಮೈಮನ ಗೆದ್ದಿದ್ದವು. ಕಂಕುಳಲ್ಲಿ ಎತ್ತಿಕೊಂಡು ಉಣಿಸಿ ತಣಿಸಿ ಹದಮಾಡಿ ತೋಯಿಸಿಟ್ಟ ಬೀಜ ಮಹಾಬೀಜವಾದಂತೆ ಒಂದೊಂದು ದಿಕ್ಕಿನಲ್ಲಿ ಪಲ್ಲಟಗೊಂಡ ಪ್ರಾಯದ ಪುಂಡ ಹಲಬುವಿಕೆ ಧಾಡಸಿಯಾಗುತ್ತಲೇ ನಡೆದವು. ಎದೆಯುಬ್ಬಿಸಿ...

ಕಾರದ ಬಯಕೆ

ಕಾರದ ಹೂಹನಿ ನೀ ಖಾರವಾಗದೇ ಬಾ ಉಬ್ಬರಿಸದೆ ಅಬ್ಬರಿಸದೆ ತೇಲುವ ಮಳೆಬಿಲ್ಲಿಗೆ ಮಧುರ ಸ್ಪರ್ಶ ಮೋಹನನಾಗಿ ಬಾ ಲಘು ತೆಪ್ಪಕ್ಕೆ ನೀರ ಸೆಲೆಯಾಗಿ ಬಾ ಶರಧಿಯಾಳದಿ ಚಿಪ್ಪ ಗರ್ಭವ ಸೇರಿ ಮುತ್ತಾಗು ಬಾ ಒತ್ತಾದ...

ವ್ಯತಿರಿಕ್ತ ವರ್ಣಗಾಥೆ

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ ಅನ್ನದ ಅಗುಳು ಕಲಾವಿದ ಕೊಂಚ ಕೊಂಚ ಬಲಗೈಯೂರಿ ಒತ್ತತೊಡಗಿದ ಕುಂಚ. ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು ಎನ್ನುತ್ತ ಕವಿತೆ ಬರೆಯತೊಡಗಿದ. ಅದು ಬರಿಯ ಒಂದು ನೋಟವಲ್ಲ ಒಂದು...

ಕಂಬನಿಯ ಲವಣ

ನಲ್ಮೆಯ ಗೂಡು ನಾದಮಯ ನಲ್ಲನಾ ನುಡಿಯೂ ಪ್ರೇಮಮಯ ಸಂಚರೀಪ ವಾಂಛೆಗೆ ಅಳುಕುವುದು ಮೈ ಮನ, ಎನ್ನೋಲವು ಆ ಒಲವ ಬೇಡುವುದು ಅನುದಿನ. ಈ ಹೊತ್ತು ಅವನಿರದೆ ತಿಂಗಳನು ಬಂದಿರಲು, ಹುಣ್ಣಿಮೆಯು ಹಗೆಯಾಗಿ ಕೊಲ್ಲುತಿರಲು ಹೇಗೋ...

ಅರಿವಿನ ವಾಟೆ

ಬದುಕು ಬಂಡಿಹಬ್ಬ ಹಂಗಿಸುವವ ಕೊರಡುರಾಶಿಗಳ ದಿಬ್ಬ ಕಾಮ, ಕ್ರೋಧ, ಲೋಭ ಮೋಹ ಮದ, ಮತ್ಸರಗಳು ಅರಿಗಳಲ್ಲ ಅರಿತುಕೊಳ್ಳಲು ಆಯುಧಗಳು. ನಿಮ್ಮ ಆತ್ಮಗಮನಕ್ಕೆ ಬದುಕಿಗೆ ಕಾಮನೆಗಳಿಲ್ಲದಿರೆ ಕಾಡು ಈ ಮನೆ ಕಾಮವೆಂದರೆ ವೃಷ್ಟಿ ಸಂಕುಲ ಜೀವ...

ನಾಭಿಯ ನುಡಿ

ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು. ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ- ನೆಲ ನುಡಿಯ ಬಲ್ಮೆಗೆ ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ. ಹೊಂಬಣ್ಣವೆಂದು ಕನ್ನಡವ ಮೆಲ್ಲುತ್ತ ಹಾಡಿದರು ಕುಡಿಯುತ್ತ ತೇಗಿದರು ಕನ್ನಡದಲೇ ಮಿಂದರು ಜನಪದರು ಕಾಯಕದ...

ಕಾಳಿ

ನಿತ್ಯ ಜುಳುಜುಳು ಝೇಂಕಾರ ಆಡೊಂಬಲ ನಿನಗೀ ನೆಲ ಓಂಕಾರ ಕೃಷ್ಣವರ್ಣ ಜಲಕನ್ಯೆಯ ವೈಯಾರ ಕಾಳಿ ನಿನಗಿದೋ ಅನ್ವರ್ಥ ಶೃಂಗಾರ ಸವಾಲು ಸಾಸಿರ ಎದುರಿಸಿ ಕರುಣೆ ಹೊನ್ನ ಬದುಕಿಗೆ ದಾನದ ಸ್ಫುರಣೆ ನಮ್ಮಯ ಮನದಲಿ ನಿನ್ನದೇ...

ಜೋಕೆ

ತುಂಬಿಲ್ಲವಿನ್ನು ಜೋಳಿಗೆ ಮತ್ತದು ಎಂದಿಗೂ ತುಂಬದು ಅವರಿವರು ಅಷ್ಟಷ್ಟು ಕೊಟ್ಟಷ್ಟು ತೃಷೆ ಮಿಗುವುದೇ ಹೊರತು ಇಂಗದದು ಜೋಕೆ? ಕರೆದು ನೀಡುವೆನೆನುವ ಮಂದಿ ನಂಬಿ ನಿಂತಿರೋ, ಹೊಂಚಿದ್ದು ತಲೆ ಮೇಲೆ ಮೆಣಸು ಅರೆಯದೆ ಬಿಡರು ಜೋಕೆ?...

ಅಮ್ಮ

ಎಲ್ಲರಂತೆ, ಎಲ್ಲದರಂತೆ, ಸಹಜವೆಂಬಂತೆ ಸೂರ್ಯ ಚಂದ್ರರಿಲ್ಲವೇ, ಮಿನುಗುವ ತಾರೆಗಳಿಲ್ಲವೇ ಹಾಗೆ ಸಂತಸ ನೀಡುತ್ತಿಲ್ಲವೇ ಅಂತೆ ನೀನು ನನಗಾಗೇ ಎಂದು ತಿಳಿದೆ ನಿನ್ನಾಳ, ಅದರೊಳಗೊಂದರ್ಥ, ಒಂದಾಸೆ, ಹೊರಡದ ಹೊರಡಿಸಲಾಗದ ತುಮುಲ ತುಡಿತ ಇತ್ತೆಂದು ಅರಿವಾಗಲೇ ಇಲ್ಲ...