Home / I Ma Muthanna

Browsing Tag: I Ma Muthanna

ಸ್ವಪ್ನರಾಜ್ಯದ ಭಾವದೋಜೆಯ ನಡುವೆ ನಡೆದೆನು ತೆಪ್ಪಗೆ, ಮನೋಭೂಮಿಯನುತ್ತು ಅಗಿಯಿತು ತೇಜಪೂರಿತ ಘಟನೆಯು! ಮೆತ್ತಗಾಸಿದ ತಲ್ಪತಳವೇ ನನ್ನ ಯಾತ್ರೆಯ ಭೂಮಿಯು!! ಮೇಲೆ ಭಾನುವು ಬಿಳಿಯ ಮುಗಿಲು ಕೆಳಗೆ ಕೊರಕಲು ದಾರಿಯು; ಹಾದು ನಡೆದೆನು ಏಳುಬೀಳುತ ಏರಿದೆ...

ಯಾರ ಕಂಡು ಹೆದರಿ ಓಡುವೆ? ಯಾರ ಹಿಡಿಯಲು ಸರ್‍ರ ಸಾಗುವೆ? ಒಂದೆ ದಾರಿಯೊಳೆಂದು ನಡೆಯುವೆ- ಎಲ್ಲಿ ನಿಲ್ಲುವಿ ಹೇಳೆಲೊ? ಬೆಟ್ಟು ಅಗಲದ ದಾರಿ ಮಧ್ಯದಿ ಕಡಿದ ಬಯಲಿನ ಹೊಂಡ ನಡುವಲಿ ಕಂಡ ಕಂಡ ತಗ್ಗು ತಳದಲಿ- ಎಲ್ಲಿ ಮುಂದಕೆ ಹರಿಯುವೇ? ಹನಿಯ ಜಿನುಗಿಸಿ...

ತ್ರಿಪುರ ದಹನವದಾಯ್ತು ಲಂಕೆಯನು ಸುಟ್ಟಾಯ್ತು ಎನಿತೆನಿತೊ ರಾಜ್ಯಗಳು ಭಷ್ಮವಾದೊ! ಚಾರಿತ್ರ್‍ಯ ಲೇಖಕನ ಅಂಕೆಸಂಕೆಗಳೆಲ್ಲ ತೋರುವುವು ಭಸ್ಮಾಸುರ ಮಹತ್ವವ!! ಯಾರ ಕಾಣಿಪುದೆಂತು, ಯಾರು ನೋಡುವರೆಂತು ಬೆಂದ ಹೃದಯದ ತಾಪ-ಶೂಲಭೂತ! ಜೀವಧಾರಣನಾತ ಭವ್ಯಜೀವ...

ಭೂಮಿಯ ಒಡೆತನ ಒಬ್ಬನಿಗಾಗಲು ಬಾಳಿನ ಬೇಗುದಿ ಒಬ್ಬನಿಗೆ ಐಸಿರಿಯೊಬ್ಬಗೆ ಶರಣಾಗಲು ಇಹ ಲೋಕವೆ ಅಸಮತೆ ಬೀಡಹುದು. ರಾಜನ ಸಂಪದ ಸಿರಿವಂತನ ಗೆಲು ನೋಡುತ ಸಾಸಿರ ಜನವೃಂದ ಬೆರಗಲಿ ಕುಳಿತೂ ತಮ್ಮಯ ಪಾಡನು ನುಂಗುತ ಕರಗುತ ಕಳೆಯುತ್ತ. ಸಾಹಸ ಬಾಳಿಗೆ ದೈವಿಕ...

ಕನ್ನಡದ ತಿಳಿನೀರ ನಾನೊಂದು ಬೊಗಸೆಯಲಿ ಕುಡಿದು ನೋಡಿದೆನದರ ಸವಿಯನ್ನು ನಾನೊ; ಕುಡಿಕುಡಿದು ಮುದವಾಂತು ನಲ್ಗಬ್ಬ ಸಾರವನು ಬಾಯ್ದುದಿಯೊಳನವರತ ಇರಿಸಲೆಳಸಿದೆನೊ! ಎಷ್ಟು ತತ್ವದ ಗೀತ?  ಎಷ್ಟು ಮೋಹದ ಮಾತು? ವಚನರಾಶಿಯ ಸಾರ, ಪುರಾಣಗಳ ಮೇಳ! ಗದ್ಯ ಪದ್...

ಕಂಡೆನೊ ನಾ! ಬೇವಿನ ಜೀವದ ಈ-ಬಾ-ಳು!! ಈ ಲೋಕ ಈ ರಾಜ್ಯ ಈ ಊರು ಈ ಮನೆ ಕಾಲಾನುಕ್ರಮದಲ್ಲಿ ಜನರಾಶಿ ಒಂದಾಗಿ, ಬಲ್ಲಿದ ಬಡವನ ಶತಕೋಟಿ ಸಂಸಾರ-  ||ಕಂ|| ಸಾಗರ-ಭೂಮಿಯ ನಡೆ ಕಂಡು ಮೊರೆವುದೊ, ಯೋಗ ತಾರಕೆಗಳು ಮಿಣುಮಿಣುಕಿ ನಗುವುದೊ; ಆಗದೀ ಜನಭಾರ ಕಲ್...

ನರ್ತಕಿ ಬಂದಳು ಛಲ್‌ಝಲ್ ನಾದದಿ ಠಮ ಢಮ ತಾಳಕೆ ಕುಣಿಯುತ್ತ ಪಾತರಗಿತ್ತಿಯ ಆ ಕುಣಿತ. ಪಾರ್ಥ ಸುಭದ್ರೆಯ ರಾಧಾಕೃಷ್ಣರ- ನೊಬ್ಬಳೆ ತಾನೆಂದೆಣಿಸುತ್ತ ರಂಗಸ್ಥಳದಲಿ ತಿರುಗುತ್ತ. ತುಟಿಯಿಂದುರುಳುವ ಹಾಡಿನ ತನಿರಸ ಮೌಕ್ತಿಕ ಮಣಿಯಂತುರುಳುವುದು; ತಾಳದ ಓ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...