ಕಂಡೆನೊ ನಾ! ಬೇವಿನ ಜೀವದ ಈ-ಬಾ-ಳು!!
ಈ ಲೋಕ ಈ ರಾಜ್ಯ ಈ ಊರು ಈ ಮನೆ
ಕಾಲಾನುಕ್ರಮದಲ್ಲಿ ಜನರಾಶಿ ಒಂದಾಗಿ,
ಬಲ್ಲಿದ ಬಡವನ ಶತಕೋಟಿ ಸಂಸಾರ- ||ಕಂ||
ಸಾಗರ-ಭೂಮಿಯ ನಡೆ ಕಂಡು ಮೊರೆವುದೊ,
ಯೋಗ ತಾರಕೆಗಳು ಮಿಣುಮಿಣುಕಿ ನಗುವುದೊ;
ಆಗದೀ ಜನಭಾರ ಕಲ್ಭೂಮಿ ಆಳುವುದೊ- ||ಕಂ||
ತತ್ವಗಳೊಂದೆಡೆಽ ಉದ್ಧಾರ ಕಾಯ್ವುವು,
ನೀತಿಗಳ್ ಬಿರುಗಾಳಿ ಅಲೆಯೊಳು ಸಾಗ್ವುವು;
ಮಾತು ಮಾತಿನ ಜೀವ, ತೋರಲಿದರೆ ಜೀವ- ||ಕಂ||
ಅವಸರದ ಆಲಾಪ, ದಣೀದ ದೇಹಿಯ ತಾಪ,
ಭುವನತ್ರಯದ ಪಾಪ, ಸಮ್ಮಿಳಿತ ಮಾಕೂಪ,
ಭವ ಸರಸಿಜನದು ಸರಸತಿಯರ ಶಾಪ- ||ಕಂ||
ಮನುಜನ ಮನಶ್ಶಕ್ತಿ ಮರುಳಾಗಿ ಕಲ್ಲಂತೆ,
ತನುಮನವೆಲ್ಲವು ಸ್ವಾರ್ಥಕ್ಕೆ ಮರೆಹೋಗಿ
ಜನಗಣವು ಪಶುಗಣವಾದ ವೈಚಿತ್ರ್‍ಯವೊ- ||ಕಂ||
ರಂಗುರಂಗಿನ ತಳಕು, ಬಣ್ಣ ಬಣ್ಣದ ಬೆಳಕು;
ಶೃಂಗಾರ ಸಂಪತ್ತು ನಗುಸರಸ ಸವಿಮಾತು;
ಭೃಂಗಕುಂತಲ ‘ಷೋಕು’, ಕೃತಕ ಜೀವದ ಮಂಕು- ||ಕಂ||
ಜನ ಜನಿತ ಜನಮೋಹ, ಜೀತ ಜೀತದ ಜೀವ,
ಗಣನೀಯ ಗಂಭೀರ, ಚಂಚಲ ವ್ಯವಹಾರ,
ದಣಿದ ಬಾಳಿನ ಸಾರ ಸಾಕು ಸಾಕು ಸಾಕೀ ಹಾರ! ||ಕಂ||
ಒಂದಿಽನ ನಾನೊಂದು ಪೂಗಿಡವ ನಟ್ಟೆನೊ,
ಮುಂದಾರು ದಿನ ಕಳೆದು ನಾನೋಡಿ ಅತ್ತೆನೊ;
ಅಂದಿಽತು ನನಗಽದು ‘ಚಿಗುರೆಽಲೆ ಕೊಡೆ’ನೆಂದು- ||ಕಂ||
ಹಸುರಾಂತ ವನಶೋಭೆ ನೀಲಾಕಾಶದ ಪ್ರಭೆ,
ಹಸುಗೂಸು ಹುಸಿ ಸೊಬಗು ಪಂಚಭೂತದ ಬೆಡಗು,
ನಸುನಗುತ ಒಲಿದಽರು ವಿರಸ ಪ್ರಕೃತಿಯದೊ- ||ಕಂ||
ಜನಕೋಟಿ ಈ ಜಗದಿ ಸಂಸಾರವೆಂದೆಂದು
ಮುನಿಜನವು ಕವಿಗಣವು ಹಾಡಿ ಪಾಡಿದರಂದು,
ಋಣಮುಕ್ತ ಜೀವಽದ ಪಾಡನ್ನು ಹಾಡುತ್ತ; ||ಕಂ||
ಲೋಕವು ದಿನಕೊಂದು ರೂಪವ ಪಡೆವುದೊ,
ಸಾಕಿಽದ ಕೋಳಿಯ ಬೆಳೆಸಂತೆ ಬದಲಾಗೆ;
ಈ ಕರ್ಮ ಜಾಲಕ್ಕೆ ಪ್ರಾಣಗಳರ್ಪಿಸಿ- ||ಕಂ||
ಸಲ್ಲಲಿತ ಸುಖಶಾಂತಿ-ರಣರಂಗ ಭಯಕ್ರಾಂತಿ;
ಮಲ್ಲಳಿಯ ಇನಿವಾಡು-ಸಂಸಾರ ಒಳಪಾಡು,
ಬಲ್ಲವರ ವಿದ್ವತ್ತು-ಲೋಕನಾಶಕೆ ಹೇತು! ||ಕಂ||
*****