Home / I Ma Muthanna

Browsing Tag: I Ma Muthanna

ಧರ್ಮಕ್ಷೇತ್ರದ ಭೂಮಿ ಅಸಮ ಬಲ ಇಕ್ಕಡೆಯೊ- ಳದಮಧ್ಯೆ ಗಂಭೀರ-ಶ್ರೀಕೃಷ್ಣನು. ಕುರುಕ್ಷೇತ್ರ ಕುರುಸೇನೆ ಕೌರವನ ರಣಘೋಷ- ಸೇನಾನಿ ಫಲ್ಗುಣನು ಬಾಣಸಹಿತ. ಕುರುಸೇನಾ ಕಡಲಲ್ಲಿ ತೇಲುತಿಹ ಅರ್ಜುನನ ರಥವೊಂದು-ಸಾರಥಿಯು ಶ್ರೀಕೃಷ್ಣನು; ರೋಷ ಸಹನೆಯ ಮಧ್ಯೆ ಬ...

ವೇದಭೂಮಿಯೊಳಿಹ ಕಡುಸಾಹಸದ ನೆಲೆಗೆ ಮಿ ತಿಯಿಲ್ಲ, ಕೊನೆಯಿಲ್ಲ;  ಪುರುಷ ಸ್ತ್ರೀಯರುವೆಂದು ನೀತಿಯಲಿ ಧೈರ್ಯದಲಿ ಛಲದಲ್ಲಿ ಧರ್ಮ ಭೂ ಮಿದುರೊಳೀ ಭೇದವಿಹುದಿಲ್ಲ;  ವಿಶ್ವವಿದನಂ ತ; ಅನಾದಿಕಾಲದಿಂ ಈ ಕ್ಷೇತ್ರ ಶೌರ್ಯ ಸ- ದನವದು; ಕಡು ಹೇಡಿಗಳಾ ಬೀಡು ...

(ಸೂ: ಜೋದಪುರ ಮತ್ತು ಜಯಪುರ ರಾಜವಂಶಗಳು ಕೃಷ್ಣಾಕುಮಾರಿಯ ಪಾಣಿಗ್ರಹಣ ನಿಮಿತ್ತ ಹೊಡೆದಾಡುವುದು.  ಅವಳ ತಂದೆ, ಭೀಸಿಂಹನ ದೆಸೆಯಿಂದ ಕೃಷ್ಣಾಕುಮಾರಿಯು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವುದು) ಪೇರಾನೆಗಳೆರಡರ ಕಡು ಕಲಹಕೆ ಮರಿಮಿಗವೆ? ರಣಹದ್ದುಗಳೊಡೆದ...

ಬಯಲಲ್ಲಿ ಬಿಸಿಲಲ್ಲಿ ಆ ಬಾ-ಲೆ! ಹಸಿಹುಲ್ಲು ಕುಯ್ದಾಡುವುದು ಕೇಳ್ದೆ!!  ||ಪಲ್ಲ|| ಹಾಡೊಂದು ತನ್ನಪ್ಪ ಮರೆತಽದೊ, ಅವಳಮ್ಮ ಹರೆಯದಲಗಲಿಽದೊ! ‘ಕಿವಿನಿಗುರಿ ಕಂಕೆರಳೀ ನಾ ಕೇಳಿ, ಹೆಣ್ ಬಾಳ ಕಂಡು ಸೋಜಿಗ ತಾಳಿ!  ||ಬಯ|| ತಾನೊರ್ವ ಕೊಡಗೂಸು ಎಂದಽಳು...

ಕವಿಯಾಗಿ ಸಲ್ಲಿಸುವ ಮಧುರಗಾನದ ಸೊಂಪು ನುಣ್ದನಿಗಳಿಂಪಿನಿಂ ಬರೆದು ಪೊಗಳುವ ಮಾತು ಸಾಲುಗಳ ಲೀಲೆಯಲಿ ಬರೆದ ಬಡಗಬ್ಬಿಗನ ನಾಲ್ಪಂಕ್ತಿ ಕವನವದು ಏನು ಕಲ್ಪಿತ ವಾಣಿ! ವೇದಗಳು ಶಾಸ್ತ್ರಗಳು ಕವಿಜಿಹ್ವೆ ಉಕ್ತಿಗಳು ಯಾರ ಹಂಗನು ಕಾಯೆ ಹೇಳಿ ನಲಿವುವೊ ಏನೊ...

ತಿಮ್ಮ ಬೋರ ನಂಜ ಕೂಡಿ ರಾಗಿ ಹಿಟ್ಟು ಕಲಸುವಾಗ ಬಾಯ್ಗೆ ಬಾಯಿ ಮಾತು ಎದ್ದು ಅವರನ್ನವರು ಮರೆತು ಕುಡಿದು ನಂಜ ಕುಪ್ಪಿ ಎತ್ತಿದ- ಬೋರ ಪಾಲು ಕೇಳಿದ! ಹಿಂದಿನಿರುಳು ಬೇಟೆಯಲ್ಲಿ ಕೊಚ್ಚೆ ಹಾರ್ದ ಮೊಲದ ಕಾಲ ಹಿಡಿದು ತಿಮ್ಮ ಅಂತೆ ತಂದು ಮಾಂಸ ತುಂಡು ಮಾ...

ಶ್ರೀರಾಮ ಶ್ರೀರಾಮ ಶ್ರೀರಾಮ ನಾಮವನು ವಿಂದ್ಯಾದ್ರಿ ಗಿರಿದುದಿಯ ಮೇಲಿನಿಂದುರಿಸಿ; ಸಾನಂದ ಸಂಸ್ಕಾರ ಸಾಯುಜ್ಯವನ್ನಿತ್ತ ಶ್ರೀರಾಮ ಭೃತ್ಯನೀ ಮಂಡಲದಿ ಹಾರಿ. ಹಾರಾರಿ ಲೋಕದಾ ಜನದೊಡೆಯ ರಾಮನಾ ಸೇವೆಯನು ಪೂಜೆಯನು ಧ್ಯಾನವನು ಸದಾ; ಧ್ಯಾನದಾ ಬೀಜವನು ಆ...

ನಮ್ಮ ಪ್ರೇಮದ ದಾರಿ ಕೊರಕಲನು ಸಮವಾಗಿ, ದೂರವನು ಹತ್ತಿರಿರಿಸಿ- ಸಂದ ಭಾಗ್ಯದ ಚೆನ್ನುಗನಸನ್ನು ನೆನೆಸನ್ನು ತೋರಿದುಂಗುರವ ಕಳೆದೆ! ಸಂಜೆ ತಾರೆಯ ನೋಡಿ ಅದರ ಕಾಂತಿಯ ಹಳಿದ ಸರಸಿ ಉಂಗುರವವಳು; ಮೊಲ್ಲೆ ಮಲ್ಲಿಗೆ ವರ್ಣದೀಪ್ತಿಯನು ತಾಕಂಡು ಮುಡಿಯಲೆಂದ...

ಬೆಳಗಾಯ್ತು ಬದುಕಿದೆ ಸೂರ್ಯಕಾಂತಿಯ ಕಂಡೆ ಆಲಸ್ಯ ಹರಿದೋಯ್ತು! ಕಂಬನಿ ಆರಿಽತು, ಮೈನಡುಕ ಓಡಿಽತು! ತನುಸ್ವಾಸ್ಥ್ಯವುಳಿಯಿತು ||ಬೆಳ|| ಜನ ಜನವ ತರಿತರಿದು ಕಿರುಕರುಳ ತಿವಿತಿವಿದು ಕೆಂಗಣ್ಣು ಕಿಡಿಕಾರಿ, ಹಿಂದೂ ಇಸ್ಲಾಂಗಳು ದ್ವಂದ್ವಕಾಳಗ ಹೂಡಿ ಸೌ...

ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ ಸುತ್ತಲು ಗಿರಿಸಾಲು. ಬಯಲಿನ ತಪ್ಪಲು ನಿರ್ಝರ ದರಿಗಳು ನಿಡು ಮರ ಗಿಡ ಸಾಲು, ಸೃಷ್ಠಿಯ ರಮ್ಯ ಸೌಂದರ್ಯಗಳು ದೃಷ್ಠಿಯೆ ಬೀಳದ ಆಳದೊಳೆಲ್ಲಿಯು ಹಚ್ಚನೆ ಹೊಲಸಾಲು ಸುತ್ತು ದಿಗಂತವ ಅಪ್ಪುತ ನಿಂತಿಹ ನುಣ್ಣನೆ ಬೆಟ್ಟಗಳು,...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...