ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,
ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ
ಎಂಬ ಅಣ್ಣಗಳಿರಾ ನೀವು ಕೇಳಿರೊ, ಹೇಳಿಹೆನು.
ಕಾಮವಿಲ್ಲದವಂಗೆ ಕಳವಳ ಉಂಟೆ?
ಕ್ರೋಧವಿಲ್ಲದವಂಗೆ ರೋಷ ಉಂಟೆ?
ಲೋಭವಿಲ್ಲದವಂಗೆ ಆಸೆಯುಂಟೆ?
ಮೋಹವಿಲ್ಲದವಂಗೆ ಪಾಶ ಉಂಟೆ?
ಮದವಿಲ್ಲದವಂಗೆ ತಾಮಸ ಉಂಟೆ?
ಮತ್ಸರವಿಲ್ಲದವಂಗೆ ಮನಸಿನಲ್ಲಿ ಮತ್ತೊಂದು ನೆನೆವನೆ?
ಇವು ಇಲ್ಲವೆಂದು ಮನವ ಕದ್ದು ನುಡಿವ ಅಪಶಬ್ದವರ ಮಾತ ಮೆಚ್ಚುವನೆ
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ?
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ