ದೇವತೆಗಳು ನಕ್ಕಾಗ

ದೇವತೆಗಳು ನಕ್ಕಾಗ

ಬೆಂಗಳೂರಿನ ಪಶ್ಚಿಮಕ್ಕೆ - ಒಂದೆಡೆ ಬಯಲು, ಅಲ್ಲಲ್ಲಿ ಒಂದೊಂದು ಮರ. ಉಬ್ಬಿದ ಬಯಲುಗಳು ಅಲ್ಲಿ ಇಲ್ಲಿ ಇಳಿದು ಓರೆಯಾಗಿ ಕೂಡುವೆಡೆಗಳಲ್ಲಿ ಹಸುರು ಮೆರೆದಿದೆ. ತೆಂಗಿನ ಮರಗಳು, ಇತರಮರಗಳು, ಅವುಗಳ ನಡುವೆ ಸಣ್ಣ ಪುಟ್ಟ ಹಳ್ಳಿಗಳು,...
ಪ್ರೀತಿ ಎಂದರೆ

ಪ್ರೀತಿ ಎಂದರೆ

ಆ ಕೇಸಿನ ತೀರ್ಪನ್ನು ಜಜ್ಜು ಸಾಹೇಬರು ನಾಳೆ ನೀಡಬೇಕು. ಸಾಹೇಬರಿಗೆ ಎಷ್ಟು ಯೋಚಿಸಿದರೂ ಪರಿಹಾರ ಹೊಳೆಯುತ್ತಿರಲಿಲ್ಲ. ಮನೆಯಲ್ಲಿ ಎಲ್ಲರೂ ಮಲಗಿ ನಿದ್ರಿಸುತ್ತಿದ್ದರೆ ಇವರು ಮಹಡಿ ಮೇಲಿನ ತಮ್ಮ ಅಧ್ಯಯನ ಕೊಠಡಿಯಲ್ಲಿ ಕತ್ತಲಲ್ಲಿ ಬುದ್ಧನಂತೆ ಕೂತಿದ್ದರು....
ಗೊಂದಲ

ಗೊಂದಲ

ಈ ಊರಿಗೆ ನೀವು ಅಪ್ಪಿತಪ್ಪಿ ಬಂದೀರಿ. ಯಾವುದೋ ಗುಂಗನಾಗ ಬರಬರಾನ ದಾರಿಗಡ್ಡ ಚಾಚಿದ ಜಾಲಿ ಕಂಟಿ ನಿಮ್ಮ ಅಂಗಿ ಪರಚಿ ಬರಮಾಡಿಕೊಂಡಿತು. ಗಕ್ಕನ ನಿಂತು ಜಗ್ಗಿದ್ದನ್ನ ಬಿಡಿಸೋ ಪಜೀತಿ ನೋಡಿದ ಮಂದಿ ಹುಳ್ಳುಳ್ಳಗ ನಗಾಕ...
ದಲಿತಾವತಾರ

ದಲಿತಾವತಾರ

ಆಸ್ಪತ್ರೆ ಸವಾಗಾರ್‍ದಾಗೆ ನಿಂಗಿ ಮಲಗವ್ಳೆ. ಅವಳ್ನ ಕುಯ್ದು ಅದೇನೋ ಪರೀಕ್ಷೆ ಮಾಡಿ ಮತ್ತೆ ಹೊಲಿಗೆ ಹಾಕಿ ಕೊಡ್ತಾರಂತಪ್ಪ. ಅಲ್ಲಿಗಂಟ ಮಣ್ಣು ಮಾಡಂಗಿಲ್ಲ. ಇದನ್ನೆಲ್ಲಾ ಯೋಳಾಕೆ ಹೊಂಟಿರೋದು ನಿನ್ಗೆನಪ್ಪ ನಿನ್ಗೆ. ಮಟಮಟ ಮಧ್ಯಾನದಾಗೆ ಪೊಲೀಸಿನೋರು ಹಳ್ಳಿಲಿಂದ...
ಕ್ಷಮೆ

ಕ್ಷಮೆ

ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ ಮಾತನಾಡಲು ಬರುತ್ತಿತ್ತು. ಆದರೆ ಮಲೆಯಾಳಂ ಭಾಷೆ...
ನೆಳಲೆಮಠದ ಶ್ರೀಗಳು

ನೆಳಲೆಮಠದ ಶ್ರೀಗಳು

"ಎಲ್ಲವೂ ಮುಳುಗಿಹೋಯಿತೆ?" ಎಂದರು ಸ್ವಾಮಿಗಳು. ಪಾರುಪತ್ತೆ ಗಾರರು ತಂದ ಸುದ್ದಿಯಿಂದ ದಂಗಾದ ಅವರು, ಮಧ್ಯಾಹ್ನದ ಭೋಜನ ಮುಗಿಸಿ ಗಾದಿಗೆ ಒರಗಿ ಅರ್ಧ ನಿದ್ರೆ ಅರ್ಧ ಎಚ್ಚರದ ಮಂಪರಿನ ಸುಖದಲ್ಲಿದ್ದವರು, ತಟ್ಟನೆ ಎದ್ದು ಕುಳಿತಿದ್ದರು. "ತಂತಿಯಲ್ಲಿರುವುದು...
ಪ್ರಾಮಾಣಿಕ

ಪ್ರಾಮಾಣಿಕ

ತುಂಬಿದ ಬಸ್ಸು. ಮಾಸ್ತರರು ಬಹಳ ಪ್ರಯಾಸಪಟ್ಟು ಹೊರಗಿನಿಂದಲೇ ಕೈಚೀಲವನ್ನು ಎದುರಿನ ಸೀಟಿನಲ್ಲಿ ಮೊದಲೇ ಹಾಕಿದ್ದರಿಂದ ಸೀಟಿಗೆ ಸಮಸ್ಯೆಯಾಗಿರಲಿಲ್ಲ. ಸೆಕೆ ವಿಪರೀತವಾಗಿದ್ದುದರಿಂದ ಮಾಸ್ತರರು ಆಗಾಗ ಬೆವರು ಒರೆಸಿಕೊಳ್ಳುತ್ತಾ ಪರಿಚಿತರು ಯಾರಾದರೂ ಇದ್ದಾರೆಯೇ ಎಂದು ಕೊರಳು ತಿರುಗಿಸಿದರು....
ಇಲ್ಲಿಯವರೆಗೆ ನಾನು

ಇಲ್ಲಿಯವರೆಗೆ ನಾನು

ದೇವಸ್ಥಾನದ ಜಗಲಿಯ ಮೇಲೆ ಮಲಗಿದ್ದ ನಾನು ಇಲ್ಲಿಗೆ ಬಂದಾದರೂ ಹೇಗೆ ಮಲಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹೊಟ್ಟೆಯಲ್ಲೆಲ್ಲಾ ವಿಚಿತ್ರ ಬಾಧೆ, ಎದೆಯಲ್ಲಿ ನಗಾರಿ ಬಾರಿಸಿದಂತಹ ಸದ್ದು, ಪ್ರಯಾಸಪಟ್ಟು ಕಣ್ಣು ತೆರೆದರೆ ಬೀದಿ ದೀಪ ಕಾಣುತ್ತದೆ. ಎರಡು...
ದಣಿದ ದಾರಿ

ದಣಿದ ದಾರಿ

‘ಅಗದೀ ಹರಕತ್ತ ಐತಿ, ನಿಮ್ಮಣ್ಣಗ ಕೇಳಿ ಒಂದೈದು ಸಾವಿರ ಇಸ್ಕೊಂಬಾ’ - ಎಂದು ನನ್ನ ಗಂಡ ತವರಿಗೆ ಕಳಿಸಾಕ ಮೊದಲ ವರಾತ ಹಚ್ಚಿದ್ದರು. ಮತ್ತ ಮತ್ತ ಒತ್ತಾಯಿಸೋ ಗಂಡನ ಹಿಂಥಾ ಮಾತು ಬಿಸೇ ತುಪ್ಪ...
ಅಸಹಾಯಕ

ಅಸಹಾಯಕ

ಬಹುಮುಖ್ಯವಾದ ಫೈಲುಗಳನ್ನು ಅಟೆಂಡ್ ಮಾಡಿ ಸಾಹೇಬನ ಟೇಬಲ್ಲಿಗೆ ಕಳಿಸಿದರೂ ಮನಸ್ಸಿಗೆ ಉಲ್ಲಾಸವಿಲ್ಲ. ತಲೆತುಂಬಾ ನನ್ನ ಶ್ರೀಮತಿಯೇ ತುಂಬಿಕೊಂಡಿದ್ದಾಳೆ. ಅವಳಿಗದೆಂತಹ ಕಾಯಿಲೆಯೋ ಅರ್ಥವಾಗುತ್ತಿಲ್ಲ. ಪರಿಚಿತ ಡಾಕ್ಟರ ಬಳಿ ತೋರಿಸೋಣವೆಂದು ದಮ್ಮಯ್ಯ ಬಿದ್ದರೂ ಬರಲಿಲ್ಲ. ಮಂಜುನಾಥ ಮೆಡಿಕಲ್...