ಸಾವಿನ ಕಪ್ಪು ಛಾಯೆ

ಕಾರ್ಖಾನೆಗಳಿಂದ ಹೊರ ಬರುವ ಹೊಗೆ, ವಾಹನಗಳಿಂದ ಬರುವ ಪೆಟ್ರೋಲಿನ ವಾಸನೆಗೆ ಉಸಿರುಗಟ್ಟಿಸುವ ಧಗೆ ದುರ್ಗಂಧದ ಅಲೆಗೆ ಹೆದರಿ ಓಡೋಡಿ ಸುಸ್ತಾಗಿ ಶುದ್ಧ ಗಾಳಿ ಸಿಗದೆ ಕಲುಷಿತಗೊಳಿಸಿದ ಕೃತಕ ನಾಗರೀಕತೆಯ ರಣ ಹದ್ದಿನ ಗೂಡಿಗೆ ವಿಧಿಯಿಲ್ಲದೇ...

ಒಂದು ಹಳೆಯ ಕತೆ

ಒಂದು ಎತ್ತಿನಿಂದ ಒಂದು ಹೆಣ್ಣಿನಿಂದ ಅಂಬೋರು ಹಗ್ಗ ಹಿಡಿದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ ಏನಿದ್ದರೂ ಈಗಲೆ ಎಂದು. ನವನಾರು ಸಂದೆಲ್ಲಾ ಜಾಲಾಡಿ, ಸುಳಿ ಸುದ್ಧ, ತಲೆಬಾಲನೋಡಿ ದನ ಕರುವ ಎಚ್ಚರಿಕೆಯಿಂದ ಆರಿಸಿ ತರುವವರು ಇನ್ನು...

ಗರತಿ

ಮಂಗಳ ಸೂತ್ರಕ್ಕೆ ಮೂರ್‍ಹೊತ್ತು ಪೂಜಿಸಿ ಕಣ್ಣಿಗೊತ್ತಿಕೊಳ್ಳುವ ನಮ್ಮೂರ ಗರತಿ ಗಂಡನಿಲ್ಲದ ಹೊತ್ತು ಪಕ್ಕದ ಮನೆಯವನ ಒಳಗಿಟ್ಟುಕೊಂಡು ಬಾಗಿಲಿಗೆ ಚಿಲಕ ಜಡಿದದ್ದು ಕಂಡು ಬೆರಗಾಗಿ ನಿಂತೆ *****

ವಂಚಿತೆ

ನಾಳೆ ಬೆಳೆ ಅಂದರೆ.... ಇವತ್ತೇ ಬೆಳೆದೆನಮ್ಮಾ ಹೆಣ್ಣಾಗಿ ನಿಂತೆನಮ್ಮಾ... ಹೆಣ್ಣಾಗಿ ನಿಂತೆನಮ್ಮಾ.! ಒಳ್ಳೆದಿರಲಿ ಕೆಟ್ಟದ್ದಿರಲಿ ಕಾಲ ಎಂಗೆ ನಿಲ್ಲುತ್ತಮ್ಮಾ! ಕಾಲ ಎಂಗೆ ನಿಲ್ಲುತ್ತಮ್ಮಾ! ಏನೇನೋ ತೊಳಕೆ ಏನೇನೋ ಕನಸು ಇನ್ನಂತಾಕಾಲ ಇನ್ನೆಲ್ಲಿ ಬರಬೇಕಮ್ಮಾ... ಇನ್ನೆಲ್ಲಿ...

ಪರಿಸರ ಗೀತೆ

ಬದುಕಿನ ದೀರ್ಘ ಪಯಣದಲ್ಲಿ ಹೊಳೆದಂಡೆಗೆ ಕುಳಿತು ನೀನು ಯೋಚಿಸುವೆ ಏನನ್ನು? ನೀನೆಲ್ಲಿ ಹೋದರೂ ಹಿಂದೆಯೇ ಬರುತ್ತವೆ ನಿನ್ನ ಭೂತದ ನೆನಪುಗಳು. ಘೋರ ರಾತ್ರಿ ಕಳೆದು ಮುಂಜಾವಿನ ನಸುಕು ನಿನ್ನ ಗೋಳನ್ನು ಮೀರಿ ಉದಯಿಸುತ್ತಿರುವ ಸೂರ್ಯ...

ನಿರಾಶಿತೆ

ಕರ್ತವ್ಯದ ನೆಪದಲ್ಲಿ ಅತ್ಯಾಚಾರ ಮಾಡುವ ಹೆತ್ತವರು ಕತ್ತೆಯೊಂದಕ್ಕೆ ಗಂಟು ಹಾಕಿದರೂ ಏನು ಮಾಡುವುದು ಹಣೆ ಬರಹವೆಂಬ ತಲೆ ಬುಡವೇ ಇಲ್ಲದ ಬುದ್ಧಿಗೇಡಿ ತತ್ವಕ್ಕೆ ಶರಣಾಗದೆ ನಿಷ್ಠೆ, ಒಳ್ಳೆತನದ ಸೋಗು ಹಾಕಿ ಬೆಂಕಿ ಬಿದ್ದ ಹತ್ತಿಯಂತೆ...

ಕೈಗಾರೀಕರಣ ಮತ್ತು ಸೈತಾನ

ನೀವು ಕೇಳುತ್ತೀರಿ ವಿಂಡ್ಸರ್ ಮ್ಯಾನರ್ ರಸ್ತೆ ಬದಿಯಲ್ಲಿರುವ ಡೇರಿ ಹೂಗಳ ಮೇಲೆ ಕಪ್ಪು ಎಣ್ಣೆ ಸವರಿದವರ್‍ಯಾರೆಂದು? ಗುಲಾಬಿ, ಹೂಗಳ ಬಣ್ಣ ಕಪ್ಪಾಗಿರುವುದು ಯಾಕೆಂದು ವಿಸ್ತರಣೆಯ ನೆಪದಲ್ಲಿ ಕೈಗಾರಿಕೀಕರಣ ಶಾಸ್ತ್ರದಲ್ಲಿ ಹುದುಗಿರುವ ಸಂಸ್ಕೃತಿ ಇದುವೆಯೇ? ಎಂದು....

ಬೀಳ್ಕೊಡುಗೆ

ಮುಗಿಯಿತು ಬಾಳಿನ ಒಂದು ಮಜಲು ಅವರು ಕರೆದೊಯ್ಯಲು ಬಂದಿಹರು ಹೊರಡ ಬೇಕಾಗಿದೆ ಹೊಸ ಜಾಗಕೆ ಹೊಸ ಬಾಳನು ನಡೆಸಲು ಕಸಿ ಮಾಡಿದ ಸಸಿ ತೆರದಿ ಇಲ್ಲಿಗೆ, ಇನ್ನು ಮೇಲೆ ನಾನೊಬ್ಬ ಅತಿಥಿಯಾದೆನೆಂದು ತಿಳಿದಾ ಇವಳಿಗೆ,...

ದುರಂತ

ವರ್ಷಗಳೇ ಕಳೆದವು ಭೂಪಾಲದ ಬಿಕ್ಕುಗಳು ನಿಂತು ಹೋಗಲಿಲ್ಲ. ರೋದನ ಶಾಂತವಾಗಲಿಲ್ಲ. ಕಾರ್ಖಾನೆಗಳು ಉಗುಳಿದ ಕಪ್ಪನೆಯ ವಿಷಗಾಳಿ ಕೊಲೆಯಾಯ್ತು ಊರೆಲ್ಲಾ ಸ್ಮಶಾನವಾಯ್ತು. ರಹಸ್ಯ ರಾತ್ರಿಯಲಿ ಕರಾಳ ಕೈಗಳು- ಛಸನಾಲಾ ದುರಂತದ ಗಣಿಯಿಂದ ಇಣುಕುತ್ತಿರುವ ಅಸಹಾಯಕ ನೋಟಗಳು...

ಹತಭಾಗಿನಿ

ಪಡ್ಡೆ ಕರುವಂತೆ ಎಗ್ಗಿಲ್ಲದೆ ತಿಂದು, ತಿರುಗಿ ಕೊಂಡಿದ್ದೆನೆಗೆ ಮದುವೆಯೆಂಬ ಮೂಗುದಾಣ ಬಿಗಿದು ಸಂಸಾರ ದಾರಂಭಕ್ಕಿಳಿಸಿದರು. ಮುಂದರಿಯದ ನನಗೆ ಮದುವೆ ಯಾತನೆ ಯಾಯಿತು ಗಿಳಿಬಾಳು ಕರಗಿ ಹೋಯಿತು ಮೈ ಮನಸೆಲ್ಲಾ ಜರ್ಜರಿತವಾಯಿತು. ಪರಿಸರ ರೂಪಾಂತರ ಹೊಂದಿತು-...