
ಹೌದೆ ನಮ್ಮವ್ವ ನೀನು ಹೌದೆ ಹೌದೆ ಭವದ ಗೊನಿ ಕೊಯ್ದೆ ಮುಕ್ತಿಯ ಮುನಿಗೊಯ್ದೆ ನಮ್ಮವ್ವ ನೀನು ಹೌದೆ ||೧|| ಹಿಡಿದೆ ಧರ್ಮದ ಮಾರ್ಗ ಹಿಡಿದು ಕರ್ಮದ ಬೇರು ಕಡೆದೆ ನಮ್ಮವ್ವಾ ನೀನು ಹೌದೆ ||೨|| ಹೌದೆ ಸ್ವಾಮಿಗೆ ಹೊಚ್ಚೆ ಕೌದಿ ಅವ್ವನ ಗುಡಿ- ಗೊಯ್ದೆ ...
ದೇವಿ ನಿನ್ನ ಸೇವಕನೆಂದು ಸೇವೆ ಮಾಡುವೆನೆಂದು ಇಂದು ನಿನ್ನ ಚರಣಗಳನ್ನು ಹೊಂದುವೆ ಒಂದು ಮಂಮತಿ ನಿನ್ನ ಕಂದನಿಗೆ ಚಂದದಿ ಆನಂದದಿ ನಿನ್ನ ಕಂದನೆಂದು ಸಲಹು ಇಂದು ||ಪ|| ಮಂಗಲಾಂಗಿ ಕುಂಡಲಾಭರಣಿ ಪುಂಡ ದೈತ್ಯರನ ಖಂಡಿಸಿ ಕಡಿದು ತುಂಡ ಮಾಡುತ ಬಂಡ ಬರಿ...
ನಾ ಕಂಡೆನೀಗ ಶಾಕಾಂಬರಿಯಾ -ಶಿಶುನಾಳ ಶರೀಫ್ ನಾ ಕಂಡನೀಗ ಶಾಕಂಬರಿಯಾ ಶಾಂಬವಿ ಶಂಕರಿಯಾ ||ಪ|| ನಾಕದಿಂದಿಳಿದು ಭೂತಳದಿ ಭಕ್ತರನು ನೀ ಕಾಯಬೇಕೆಂದೆನುತ ವಿಲಾಸದಿ ಲೋಕಮಾತೆ ಜಗನ್ಮಾತೆ ಚಾಕಲಬ್ಬಿ ಕೆರೆ ಪೂರ್ವಭಾಗದಲಿ ||೧|| ಸಿಂಹನೇರಿ ಗಮಿಸುವ ದೇವ ...
ಪಾಹಿ ಪರಬ್ರಹ್ಂಣಿ ತ್ರಾಣಿ ಪಾಹಿ ಪರಬ್ರಹ್ಮಣಿ ||ಪ|| ಸೇವಿತ ಕಿಂಕರ ಸದಾ ಪರಜೀವ ಸದ್ಗುರು ಭಾವನಾತ್ಮಳೆ ದೇವಿ ಪರಾತ್ಪರ ಕಾಯ್ವುದೆನ್ನ ಸದಾವಕಾಲದಿ ||೧|| ಶುಂಭ ನಿಶುಂಭ ಸಂಹಾರಿಣಿ ನಿಶುಂಭನ ಡಂಬ ಪರ...
ಮಾನಾಪಮಾನ ನಿನ್ನವಮ್ಮಾ ಎನಗೇನು ಶ್ವಾನನಂತೆ ಬೊಗಳುತಿಹರು ಹೀನ ಜನರೆಲ್ಲರಿವರು ||ಪ|| ಸದಾ ನಿನ್ನ ಧ್ಯಾನದೊಳಿರಲು ಮದಾ ಬಂದಿತೆಂಬುವರಿವರು ಕದನವ ಮಾಡುವರಿವರು ನಿಧಾನವ ತಿಳಿಯದೆಯವರು ಇದು ನಿನ್ನ ಮನಸ್ಸಿಗೆ ಮೃದುವಾದರೊಳಿತಮ್ಮಾ ||೧|| ನಿ...
ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಸದಿರು ತಂಬೂರಿ ||ಪ|| ಸರಸ ಸಂಗೀತದ ಕುರುಹುಗಳರಿಯದೆ ಕರದೊಳ್ಹಿಡಿಬಾಡ ತಂಬೂರಿ ||ಅ.ಪ.|| ಮಧ್ಯದೊಳೇಳು ನಾದದ ತಂಬೂರಿ ಅದ್ನ ತಿದ್ದಿ ನುಡಿಸಬೇಕು ತಂಬೂರಿ ಸಿದ್ಧ ಸಾಧಕರ ಸುವಿದ್ಯೆಕ್ಕ ಒದಗುವ ಬುದ್ಧಿವ...
ಕೋಡುಗನ ಕೋಳಿ ನುಂಗಿತ ನೋಡವ್ವ ತಂಗಿ ||ಪ|| ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ ಆಡಲು ಬಂದ ಪಾತರದವಳ ಮದ್ದಳೆ ನುಂಗಿತ ||೧|| ಒಳ್ಳು ಮನಕಿಯ ನುಂಗಿ ಬೀಸುಕಲ್ಲು ಗೂಟವ ನುಂಗಿ ಕುಟ್ಟಲು ಬಂದ ಮುದಕ...
ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ! ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು! ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ! ಕ್ಷಯ...
ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...
ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...













