
ಅದೇಕೆ ಶರಧಿ ನೀ ಹೀಗೆ ಉಕ್ಕಿ ಆರ್ಭಟಿಸುವೆ ಎದೆಯಾಳದ ಭಾವಗಳ ಹರಿಬಿಡುವೆಯಾ ಹೀಗೆ ನೀ ಎಷ್ಟೆ ಉಕ್ಕಿದರೂ ವೇಗೋತ್ಕರ್ಷದಿ ಬೋರ್ಗರೆದರೂ ನಿಲ್ಲಲಾರೆ ನೀ ಕೊನೆಗೂ ದಡದಿ ಉಕ್ಕಿದಷ್ಟೆ ವೇಗದಿ ಹಿಂದಕ್ಕೋಡುವೆ ಪುಟಿದೆದ್ದ ಚಂಡಿನಂತೆ ಗುರುತ್ವಾಕರ್ಷಣೆಯ ಮ...
ಇಲ್ಲ ಅಕ್ಕಪಕ್ಕದ ಪರಿವೆ ಬೇಕಿಲ್ಲ ಕಣ್ಕಾಪಿನಾಚೆಯ ಗೊಡವೆ ಉದ್ದಾನು ಉದ್ದ ಕಣ್ಣು ಹಾಯ್ದಷ್ಟು ದೂರ ದಾರಿ ಮಲಗಿದೆ ಹೀಗೇ… ನೇರ ಏರುಪೇರಿಲ್ಲ. ಅಡೆತಡೆಗಳೂ ಇಲ್ಲ ಚೌಕಟ್ಟು ಮೀರಿ ನೋಡುವಂತಿಲ್ಲ ತನ್ನ ಪರಿಧಿಯೊಳಗೆ ಕಂಡದ್ದೇ ಸತ್ಯ ಮಿಕ್ಕಿದ್ದೆ...
ತುಂಬಿದ ಕಪ್ಪನೆ ನೇರಿಳೆಯಂತೆ ಮಿರಿ ಮಿರಿ ಮಿಂಚುವ ಮಗುವೊಂದು ಚಿಂದಿಯನುಟ್ಟಿದೆ, ಚರಂಡಿ ಬದಿಗೆ ಮಣ್ಣಾಡುತ್ತಿದೆ ತಾನೊಂದೆ ದಾರಿಯ ಎರಡೂ ದಿಕ್ಕಿಗೆ ವಾಹನ ಓಡಿವೆ ಚೀರಿವೆ ಹಾರನ್ನು, ಮಗುವಿನ ಬದಿಗೇ ಭರ್ರನೆ ಸಾಗಿವೆ ನೋಡದಂತೆ ಆ ಮಗುವನ್ನು! ಅರೆ ಕ...
ನೀಲಿ ಗುಲಾಬಿ ಹಳದಿ ಕಪ್ಪು ಬಣ್ಣಗಳ ಮೋಡಿನ ಬಟ್ಟೆ ತೊಟ್ಟು ಹೊರಟ ನಿನ್ನ ಅದೆಷ್ಟೋ ಸಲ ಕಣ್ಣು ಕವಿಚಿ ನೋಡಿದ್ದು ಹಸಿರೇ ಹಸಿರು. ಹಸಿರು ಕುದುರೆಯನೇರಿ ಬಿಸಿಲು ಕೋಲುಗಳನು ದಾಟಿ ಆಕಾಶದಾರಿಯಲಿ ಹಾಯ್ದು ನಿನ್ನ ಕಾಣಲು ಕಣ್ಣ ಕಿಟಕಿ ತೆರೆದರೆ ಕಣ್ತುಂ...
ಹಿತ್ತಲ ಬಾಗಿಲು ಬಹು ದಿನಗಳಿಂದ ಮುಚ್ಚಿಯೇ ಇತ್ತು ಇಂದು ಅದೇಕೋ ಬಿಸಿಲು ಹೆಚ್ಚಾಯಿತೆಂದು ತೆಗೆಯಬೇಕಾಯಿತು ಉಸಿರುಗಟ್ಟಿದಂತಿದ್ದ ಆ ಕೋಣೆಯೊಳಗೆ ಸ್ವಲ್ಪ ಗಾಳಿ ಸ್ಚಲ್ಪ ಬೆಳಕು ಸುಳಿದಾಡಿದಂತೆನಿಸಿ ಜೀವ ನಿರಾಳವಾಯ್ತು ಕಂಪ್ಯೂಟರ್ ಪರದೆಯನ್ನೇ ವಿಶ್...
ಕೆಸರಲಿ ಕಾಯುವ ಕಮಲದ ಕೆನ್ನೆಗೆ ಬಾನಿನ ಹನಿಮುತ್ತು ಮಿಸುಕಲು ಬಾರದ ಬೆಟ್ಟದ ನೆತ್ತಿಗು ಹೂಬಿಸಿಲಿನ ಸುತ್ತು ಬಿರಿಯಲು ಕಾದಿಹ ಮೊಗ್ಗಿನ ಬದಿಗೇ ದುಂಬಿಯ ದನಿಹೊರಳು ಕಾಯಿಯ ನೆತ್ತಿಯ ತಾಯಿಯ ಹಾಗೆ ಕಾಯುವ ಎಲೆನೆರಳು ಕಾಡಿನ ಮಡಿಲಲಿ ಸಾವಿರ ಜೀವ ಎಲ್ಲ...
ಪುಟ್ಟಹಕ್ಕಿ ರೆಕ್ಕೆ ಬಿಚ್ಚಿ ಹುಡುಕಾಡುತ್ತಿದೆ ಅಷ್ಟ ದಿಕ್ಕಿಗೂ ಸುದ್ದಿ ಕಳಿಸಿ ಹಸಿರ ರೆಂಬೆ ಕೊಂಬೆಗಾಗಿ ಕಾಯುತ್ತಿದೆ ಹಕ್ಕಿ ಮೇಲೆ ದಿಟ್ಟಿ ಕೆಳಗೆ ಹಾರುವ ಹಕ್ಕಿಗೂ ಕನಸು ಸ್ವಂತ ಸೂರಿನ ಬದುಕು ರೆಕ್ಕೆ ಬಿಚ್ಚಿದಂತೆ ಕನಸಬಿಚ್ಚಿದ ಹಕ್ಕಿಗೆ ಮಧು...
ಆರದಿರಲಿ ಆಸೆ ಉರಿಗೆ ಬೀಳದಿರಲಿ ಕನಸು, ನೋಯದಿರಲಿ ಭಾರ ಹೊತ್ತ ಬಡವರ ಹೂಮನಸು. ಯಾರ ಅನ್ನ ಎಲ್ಲೋ ಬೆಳೆವ ರೈತನ ಬಲದಾನ ಯಾರ ಭಾರ ಏಕೋ ಹೊರುವ ಕೂಲಿಯವನ ಮಾನ ಬೀದಿ ಗುಡಿಸಿ ಕೊಳೆನೆಲದಲಿ ಮಲಗುವವನ ನೇಮ ಕಾಯುತ್ತಿವೆ ನಮ್ಮ, ಅವರೆ ಈ ನಾಡಿನ ಪ್ರಾಣ ಗು...













