ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ಇತಿಹಾಸ ನಮ್ಮನ್ನು ಒಗೆಯುತ್ತದೆ ಅದರ ಕಸದ ತೊಟ್ಟಿಗೆ ಕೊಳೆತ ಹಣ್ಣು ಹರಿದ ಚಪ್ಪಲಿಗಳ ಕಸದ ತೊಟ್ಟಿಗೆ ಬೀದಿ ನಾಯಿಗಳು ಬಾಯಿಡುವ ಕಸದ ತೊಟ್ಟಿಗೆ ಆ ಕಸದ ತೊಟ್ಟಿಯನ್ನು ಸಿಮೆಂಟಿನಿ೦ದ ಮಾಡಲಾಗಿದೆ ಕಸದ ತೊಟ್ಟಿ ಎ೦ದು ಕೆಂಪಕ್ಷರಗಳಲ್ಲಿ ಬರೆಯಲಾಗಿದೆ ‘...

ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ, ಕಣ್ಣ ಮುಂದೆ ಸುಳಿಯೆ ನೀನು, ಕಾಲದಾ ತೆರೆ ಸರಿದು ತಾನು, ಜನುಮ ಜನುಮ ಜ್ಞಾಪಕ. ನಿನ್ನ ಬೊಗಸೆಗಣ್ಣಿಗೆ, ಕೆನ್ನೆ ಜೇನು ದೊನ್ನೆಗೆ, ಸಮ ಯಾವುದೇ ಚೆನ್ನೆ ನಿನ್ನ ಜಡೆ ಹರಡಿದ ಬೆನ್ನಿಗೆ? ನಿನ್ನ ಕನಸು ಬಾಳಿಗ...

ದೊಡ್ಡವೀರ ರಾಜ ಕೊಡಗೆಂಬ ನಾಡನ್ನು ಕಟ್ಟಿದ ಕಲಿ. ಅವನ ಎಳವೆ ತುಂಬಾ ಯಾತನಾಮಯವಾಗಿತ್ತು. ಆತನ ಅಪ್ಪ ಲಿಂಗರಾಜೇಂದ್ರ ಸತ್ತ ತಕ್ಷಣ ಇಡೀ ಕೊಡಗನ್ನು ಹೈದರಾಲಿ ತನ್ನ ವಶಕ್ಕೆ ತೆಗೆದುಕೊಂಡ. ಲಿಂಗರಾಜೇಂದ್ರನ ಅಷ್ಟೂ ಮಂದಿ ರಾಣಿಯರನ್ನು ಮತ್ತು ಮಕ್ಕಳನ್...

ತಮಿಳುನಾಡಿನ ಮಂದಿ ಭಾಳ ಎಮೋಷನಲ್ರಿ. ಸಿನೆಮಾನೂ ಹಂಗೆ ಇರ್ತಾವೆ. ವಿಲನ್ನು ಒಬಾನೆ ಅಲ್ಲ ಹೀರೋನೂ ಒದರ್ತಾನೆ, ಹೀರೋಯಿನ್ನೂ ಚೀರ್ತಾಳ. ಭಾಷೆನೆ ಹಂಗೈ ಬಿಡ್ರಿ ಗಟ್ಟಿ ಭಾಷೆ ಗಟ್ಟಿಜನ. ಹಂಗಿಲ್ಲದಿದ್ರೆ ಬೆಂಗಳೂರ್‍ನ ತಮ್ಮದೇ ಮಾಡ್ಕೊಂಡು ಕನ್ನಡಿಗರನ...

ನೀವು ಯಾವಾಗಲಾದರೂ ಈ ಕಡೆ ಬಂದರೆ ಬ್ರಿಕ್ಸ್ & ಟೈಲ್ಸ್ ಕಂಪೆನಿಯ ಕಾರ್ಮಿಕರನ್ನು ಒಮ್ಮೆ ಗಮನಿಸಿ. ಸುಟ್ಟ ಇಟ್ಟಿಗೆಗಳಂತೆ, ಬಿರುಕು ಬಿಟ್ಟ ಹಂಚಿನಂತೆ, ಉಗಿಬಂಡಿಯ ಬೆಂಕಿ ಹೊಗೆಯಿಂದ ಸೀದು ಕರಕಲಾದ ಆನೆ ತರಡಿನ ಮರದ ಕೊಂಬೆಗಳಂತೆ ಅಲ್ಲಲ್ಲಿ ಕಾ...

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ || ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ ತವರಿನೆದೆಗೆ ತಂಪೆರೆಯುವ ಮೇಘದ ಪ್ರೀತಿಯ ಧಾರೆಯಲಿ || ಲೋಕಕೆ ಹೊದಿ...

ನಾಲ್ವರು ಅಣ್ಣತಮ್ಮಂದಿರಿದ್ದರು. ಅವರದು ಸಾಹುಕಾರ ಮನೆತನ. ಸಾಲಿ ಓದಿದ್ದರು. “ಈಸು ದಿನ ನಾವು ಸಲುಹಿದೆವು. ಇನ್ನು ತಮ್ಮ ಹಾದಿ ತಾವು ಹಿಡೀಲಿ” ಎಂದು ತಾಯ್ತಂದೆಗಳು ನಾಲ್ಕೂ ಮಕ್ಕಳಿಗೆ ನಾಲ್ಕು ಸಾವಿರ ರೂಪಾಯಿ ಮತ್ತು ನಾಲ್ಕು ಕುದು...

ಕೆಲಸದಾಕೆ: “ನಾಳೆಯಿಂದ ನಿಮ್ಮನೆ ಕೆಲಸಕ್ಕೆ ಬರುವುದಿಲ್ಲ ತಾಯೀ” ಯಜಮಾನಿ: “ಯಾಕೆ ಬರೋದಿಲ್ಲಮ್ಮಾ?” ಕೆಲಸದಾಕೆ: “ನನ್ನ ಮೇಲೆ ನಿಮಗೆ ಕೊಂಚವೂ ನಂಬಿಕೆ ಇಲ್ಲ” ಯಜಮಾನಿ: “ಯಾರು ಹೇಳಿದ್ದು ಹಾಗಂತ...

ಗೋಡ್ರು ಪ್ರೀತಿಗಿಂತ ದ್ವೇಷದ ವೆಯಿಟೇಜೇ ಜಾಸ್ತಿ. ತಮ್ಗೆ ಪ್ರೀತಿಯಾತೋ ಒಂದು ಕಾಲ್ದಾಗೆ ಆಪೋಸಿಟ್ ಆಗಿ ಯಲಕ್ಷನ್ಗೆ ನಿತ್ಕಂಡ ಸಿಂಧ್ಯನ್ನ ಸಡನ್ನಾಗಿ ಮಂತ್ರಿ ಮಾಡಿದರು.  ಎಲ್ಡೆಲ್ಡು ಖಾತೆ ಕೊಟ್ಟರು. ಮೂಲ್ಯಾಗಿದ್ದ ಪ್ರಕಾಸುನ್ನ ಕರ್ಕಂಬಂದು ಮಂತ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....