ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ಆಶಮಾಡಿ ಪಾಶಕ ಬಿದ್ದಿತೋ ಚಿಗರಿ ದೇಶಕ ತುಂಬ ಜಾಲ ಹಾಕಿದ ಕ್ಷತ್ರಿ  ||ಪ|| ಮೇಯಲಿಕ್ಕೆ ಬಿಟ್ಟುಬಂದಿತು ತನ್ನ ಮರಿ ಮೋಸದಿ ಸಿಲುಕಿತು ಅರಸನ ಕೈಸೇರಿ  ||ಅ.ಪ.|| ಬಿಡರಿ ಸ್ವಲ್ಪ ಕುಡಿಸಿ ಬರುನೆನು ಹಾಲ ಅಗಲಿದಿಯಾ ಅಯ್ಯೋ ಬಾಲಗೋಪಾಲ ಅರಸನಿಗೆ ಕರುಣ ...

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ ಯಾಕೆ ಕಡಲು ದಡ ಮೀರದೆ ನಿಂತಿದೆ ತಾಳಿ; ನೆಲಕೆ ಯಾಕೆ ಮಳೆ ಹೂಡಲೆ ಬೇಕು ದಾಳಿ ನಗುವ ಯಾಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಗುರುವುದು ಬೋಳು ಗಿಡದಿಂದ ಹಸಿರು ಹೇಗೆ ಸೇರುವುದು ದೇಹ ದೇಹದಲಿ ಉಸಿರು; ಯಾವುದು ಈ ವ...

ಬಾಲ್ಕನಿಯಲ್ಲಿ ಕುಳಿತು ಉಯ್ಯಾಲೆ ತೂಗಿಕೊಳ್ಳುತ್ತಿದ್ದವಳಿಗೆ ತನ್ನ ಮನಸ್ಸು ಕೂಡ ಹೀಗೆ ಉಯ್ಯಾಲೆಯಂತೆ ಆಡುತ್ತಿದೆ ಎನಿಸಿತು. ಅತ್ತಲೋ ಇತ್ತಲೋ ದ್ವಂದ್ವತೆಯ ಶಿಖರಕ್ಕೇರಿ ಇಳಿಯಲು ದಾರಿ ಕಾಣದೆ, ಥೂ ನನಗೇಕೆ ಈ ಉಸಾಬರಿ, ತನ್ನಷ್ಟಕ್ಕೇ ತಾನಿರಬೇಕಿತ...

ಮಗಳ ಮನೆಗೆ ಪಕ್ಕದ ಬಡಾವೆಣೆಯಲ್ಲಿ ವಾಸವಾಗಿದ್ದ ತಂದೆ ಬಂದರು. ಕಾಪಿ ಸೇವೆನೆ ಆದನಂತರ ಹೊರಟು ನಿಂತರು. “ಅಪ್ಪಾ, ಒಂದು ನಿಮಿಷ. ಒಳ್ಳೆ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ ಮಾಡಿದ್ದೀನಿ. ನಿನಗೂ ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತೇನೆ. ಸ್...

ಎಲೆಲ್ಲೆಲ್ಲಿ ನೋಡಿದರೂ ಎಲ್ಲಾರೂ ಕಾಣಿಸ್ತಾರೆ, ನಾನೇ ಮಾತ್ರ ಕಾಣ್ಸೋದಿಲ್ಲ| ನಾನಿದ್ದದ್ದೇ ಸುಳ್ಳೋ? ಹೇಳಾಕಿಲ್ಲ. ಇದ್ದೇನೆಂದ್ರೂ-ಇದ್ದಾಂಗಿಲ್ಲ| ಏಸು ವರ್ಷ ಕಳೆದ್ರೂ ಬೆಳದ್ಹಾಂಗಿಲ್ಲ | ಬುದ್ಧಿಯಂತೂ ಬರಲೇ ಇಲ್ಲ| ಹೋಗಿದ್ರೇ ಬರಬೇಕಲ್ಲ| ಹೋದ ಬ...

ನವಾಬಿ ಮಲ್ಲಿಗಿ ಹೂವಿನ ಗಜರಾ ಹಾಕಿದಿ ಗಜರಾ ಪುತ್ತಳಿ ಸರಾ ಬಾಗಲಕೋಟಿ ಬಾವಿ ಸಮಾಲಾ ಸವಣೂರ ಶಾರದೊರಿ ಮಲ್ಲಿಗಿ ಹೂವಿನ ಗಜರಾ  ||೧|| ಇಂಗ್ಲೀಷ ಸರಕಾರ ಕಂಪನಿ ದರಬಾರ ಹೇಳಿದ ವಿಚಾರ ತಾಳಿದ ಸರಕಾರ ಮಲ್ಲಿಗಿ ಹೂವಿನ ಗಜರಾ  ||೨|| ಶಿಶುನಾಳ ಶಾಹೀರ ಅ...

ಇದು ಸೆಕ್ಯುರಿಟಿ ಸೆನ್ಸೇ ಇಲ್ಲದ ಸೆಕ್ಯುಲರ್ ಸ್ಟೋರಿ. ನೀವು ವಿಧುರರಾಗಿದ್ರೆ ಖರ್ಚಿಲ್ದೆ ಲಗ್ನ ಆಗೋ ಅಪರ್ಚಿನ್ಯುಟಿ. ಮದುವೆಗೆ ಹೆಣ್ಣು ಹುಡುಕೋಂಗಿಲ್ರಿ, ಮದುವೆ ಸಲುವಾಗಿ ಖರ್ಚಿನ ತ್ರಾಸಿಲ್ಲ! ಮನೆಯಾಗಿರೋ ಸೊಸೆಗೇ ಡವ್ ಹೊಡೆದ್ರೆ ರೆಡಿಮೇಡ್ ಹ...

ಭೂಪಾರದೊಳಗೆ ಮದೀನಶಹರದೊಳು ವ್ಯಾಪಾರ ಮಾಡುವಾಗೀನ ಗಾಡಿಯೋ          ||ಪ|| ಕೂಪದೊಳು ಹರಿದಾಡುತಿಹ ಜಲ ವ್ಯಾಪಿಸಿತು ಮುದ್ದಿನ ಸಲಾಕೆಯು ರೂಪ ಬೆಂಕಿಯ ಪುಟವಗೊಳ್ಳುತ ತಾಪದಿಂ ಸರಿಸ್ಯಾಡುತಿಹುದೋ                 ||ಆ.ಪ.|| ಸಧ್ಯಕ್ಕೆ ಕಾಶೀಮಸಾಹ...

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ? ಹಾಲು ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ ಬಾಳ ತೇದು ಮಕ್ಕಳಿಗೆ ಬೆರೆದಳಲ್ಲ ಕನಸಿಗೆ! ಗಾಳಿಯಲ್ಲಿ ನೀರಿನಲ್ಲಿ ಮಣ್ಣು ಹೂವು ಹಸಿರಲಿ ಕಾಣದ...

ಕೊಡಗಿನ ಹಳೆಯ ತಲೆಗಳು ಉಪಕಾರ ಸ್ಮರಣೆ ಇಲ್ಲದವರನ್ನು ನಮಕು ಹರಾಮು ನಾಗಪ್ಪಯ್ಯನೆಂದು ಈಗಲೂ ಬಯ್ಯುವುದುಂಟು. ಅವನು ಟಿಪ್ಪುವಿನಿಂದ ಕೊಡಗಿನ ಅಮಲ್ದಾರನಾಗಿ ನೇಮಕನಾದವನು. ಕೊಡಗಿನ ರಾಜ ಲಿಂಗರಾಜೇಂದ್ರನು ತನ್ನ ದಾಯಾದಿ ದೇವಪ್ಪರಾಜನನ್ನು ಮೈಸೂರಿನ ನ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....