ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ಧಾರವಾಡ – ನನ್ನ ಭಾರವಾದ ಹೃದಯದಿಂದಿಳಿದ ಕವಿತೆ ಇದು ನಿನ್ನ ಮಡಿಲೊಳಗಿಟ್ಟು ಕೆಲ ಕಾಲ ತೂಗಿ ನಗಿಸಿ – ನನ್ನೊಳಗಿಂದ ಆಳವಾಗಿ ಬದುಕುವ ಕಲೆಯ ಕಲಿಸಿದೆ ನನಗೆ ನಿನ್ನ ನೆನೆಯುತ್ತೇನೆ ಅಹೋರಾತ್ರಿ ಇಲ್ಲಿ ಮೋಡಗಳ ನಡುವೆ ನಡೆದಾಡುವಾಗ ನಗು...

ಬೆಂಕಿಯುದರ ಹಡೆದ ತಂಪು ತೇಜ ಇವಳು ಯಾರ ತಪೋಮಣಿಯೋ! ಯಾವ ಆಟದ ಚೆಂಡೋ! ಗೋಲಿ ಗುಂಡೋ! ಬೈಗು ಬೆಳಗುಗಳಲ್ಲಿ ಲಜ್ಜೆಯೇರಿ ಹಗಲೆಲ್ಲ ಕಾವೇರಿ ಇರುಳೆಲ್ಲ ಇನಿಯನ ಸೆಜ್ಜೆಯೇರಿ ಪ್ರದಕ್ಷಿಣೆಯ ನೇಮವ ಚಾಚೂ ತಪ್ಪದೆ ಪಾಲಿಸಿ ಪ್ರಿಯನನೋಲೈಸಿ ಪ್ರಣಯಕೇಳಿಯಲನವ...

ಶ್ಯಾಮ: “ಏಯ್ ಶೀನ, ನೀನು ಯಾವ ಸಭೆ ಸಮಾರಂಭದಲ್ಲಿ ಇದ್ದರೂ ಹೆಂಗಸರು ಇರುವ ಬಳಿಯೇ ಸುಳಿದಾಡುತ್ತಿರುತ್ತೀಯಲ್ಲಾ ಕಾರಣ ತಿಳಿಯ ಬಹುದೋ?” ಶೀನ: “ಕಾರಣ ಇಷ್ಟೆ; ಹೆಂಗಸರು ಸ್ನೋ ಪೌಡರ್, ಜಡೆಗೆ ಹೂವು, ಲಿಪ್‍ಸ್ಟಿಕ್ ಇತ್ಯಾದಿ ಅ...

ನಮ್ಮ ಕರುನಾಡ ಪಾಲಿಟ್ರಿಕ್ಸ್‌ನಗೆ ಇತ್ತೀಚೆಗೆ ಗೆಸ್ ಮಾಡಿದ್ದೆಲ್ಲಾ ಮಿಸ್ ಆಗ್ತಾ ನೆಡಿಬಾರದ್ದೆಲ್ಲಾ ನಡಿಲಿಕತ್ತದೆ ನೋಡ್ರಿ. ಕಪಿಸೇನೆ ಮುಖಂಡ ಪ್ರಮೋದ ಮುತಾಲಿಕನೆಂಬ ಗಡವ ಮುನಿಸ್ಕೊಂಡು ಬಿಜೆಪಿಗೆ ಡೈವೋರ್ಸ್ ಬರೆದೊಗೆದು ಶಿವಸೇನೆ ಮುದುಕನಿಂದ ತ...

ಏನು ಹೇಳಲಿ ಅರ್ಭಾಟ ಅನುರಾಧಾ ಮಳೆಯು ತಾಳಲಾರದೆ ಇಳೆಯು                 ||ಪ|| ಕಟ್ಟಿದ ಕಿಲ್ಲೆ ಕೋಲಾಹಲ ಕಟ್ಟಿದ ಕಿಲ್ಲೆ ಸಡಲಿ ಅನುರಾಧ ಮಳೆಯು ತಾಳಲಾರದೆ ಇಳೆಯು                 ||೧|| ಗಾಳಿ ದೂಳಿ ಜೋಳದ ರಾಶಿ ಜೋಳದ ರಾಶಿ ತೇಲ್ಹೋಗಿ ತೆನ...

ಬಂದೇ ಬರತಾವ ಕಾಲ ಮಂದಾರ ಕನಸನು ಕಂಡಂಥ ಮನಸನು ಒಂದು ಮಾಡುವ ಸ್ನೇಹಜಾಲ – ಬಂದೇ ಬರತಾವ ಕಾಲ ಮಾಗಿಯ ಎದೆ ತೂರಿ ಕೂಗಿತೊ ಕೋಗಿಲ, ರಾಗದ ಚಂದಕೆ ಬಾಗಿತೊ ಬನವೆಲ್ಲ, ತೂಗುತ ಬಳ್ಳಿ ಮೈಯನ್ನ ಸಾಗದು ಬಾಳು ಏಕಾಕಿ ಎನುತಾವ – ಬಂದೇ ಬರತಾವ ...

ಒಂದೂರಲ್ಲಿ ಕಲ್ಲಣ್ಣ ಮಲ್ಲಣ್ಣ ಎಂಬ ಇಬ್ಬರು ಗರಡಿಯಾಳುಗಳು, ಸಮ ವಯಸ್ಕರು, ಸಮಾನಶೀಲರು ಆಗಿದ್ದರು. ಅವರ ಸ್ನೇಹವೇ ಸ್ನೇಹ, ಹಾಲು ಸಕ್ಕರೆ ಬೆರೆತಂತೆ. ದಿನಾಲು ಗರಡಿ ಮನೆಯಲ್ಲಿ ಕೊಡಿಯೇ ಸಾಮು – ಬೈಠಕುಗಳಲ್ಲದೆ ಲೋಡು ತಿರುಹುವುದು, ಮಲ್ಲಕಂ...

ಭೂಗೋಳ ಶಾಸ್ತ್ರದ ಗುರುಗಳು ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿ “ಯಾರು ಸರಿಯಾಗಿ ಉತ್ತರಿಸಬಲ್ಲಿರಿ ?” ಎಂದು ಕೇಳಿದರು. ಒಬ್ಬ ಶಿಷ್ಯ “ನೀವು ಪ್ರಶ್ನೆ ಕೇಳಿ ಸರ್, ನಾನು ಉತ್ತರ ಹೇಳುತ್ತೇನೆ” ಅಂದ. ಗುರು: &#82...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....