ಏನು ಹೇಳಲಿ ಅರ್ಭಾಟ
ಅನುರಾಧಾ ಮಳೆಯು
ತಾಳಲಾರದೆ ಇಳೆಯು ||ಪ||
ಕಟ್ಟಿದ ಕಿಲ್ಲೆ ಕೋಲಾಹಲ
ಕಟ್ಟಿದ ಕಿಲ್ಲೆ ಸಡಲಿ
ಅನುರಾಧ ಮಳೆಯು
ತಾಳಲಾರದೆ ಇಳೆಯು ||೧||
ಗಾಳಿ ದೂಳಿ ಜೋಳದ ರಾಶಿ
ಜೋಳದ ರಾಶಿ ತೇಲ್ಹೋಗಿ
ತೆನಿಸೊಪ್ಪಿ ಮುಳುಗಿ
ತಾಳಲಾರದೆ ಇಳೆಯು ||೨||
ಊರ ದೂರ ಶಿಶುನಾಳ ಶಾರ
ಶಾರ ಶಿಶುನಾಳ ಗ್ರಾಮಕ್ಕ
ಅನುರಾಧ ಮಳೆಯು
ತಾಳಲಾರದೆ ಇಳೆಯು ||೩||
*****