ನೀವು ಯಾವಾಗಲಾದರೂ ಈ ಕಡೆ ಬಂದರೆ
ಬ್ರಿಕ್ಸ್ & ಟೈಲ್ಸ್ ಕಂಪೆನಿಯ ಕಾರ್ಮಿಕರನ್ನು ಒಮ್ಮೆ ಗಮನಿಸಿ.
ಸುಟ್ಟ ಇಟ್ಟಿಗೆಗಳಂತೆ, ಬಿರುಕು ಬಿಟ್ಟ ಹಂಚಿನಂತೆ,
ಉಗಿಬಂಡಿಯ ಬೆಂಕಿ ಹೊಗೆಯಿಂದ ಸೀದು ಕರಕಲಾದ
ಆನೆ ತರಡಿನ ಮರದ ಕೊಂಬೆಗಳಂತೆ ಅಲ್ಲಲ್ಲಿ ಕಾಣಸಿಗುತ್ತಾರೆ.
ಸಂಜೆ ವೇಳೆ ಬಿಡಾರಗಳ ಹತ್ತಿರ ಫುಲ್‌ಬಾಟ್ಳಿ ವೋಡ್ಕಾ ಹೀರುತಾ,
ಕೀಳು ಅಭಿರುಚಿಯ ಸಿನಿಮಾ ಹಾಡುಗಳನ್ನು ಆಲಿಸುತಾ,
ಸೆಕ್ಸ್ ಪುಸ್ತಕಗಳನ್ನು ಸವಿಯುತಾ ಅವರು ಮೈ ಹಾಸಿರುವುದನ್ನು
ನೋಡಿದರೆ; ಭೂತಕಾಲದ ಅವರ ವಂಶಸ್ಥರ ಗುಣಿಗಳೇನೊ
ಎಂಬ ಗುಮಾನಿ ಹುಟ್ಟುತ್ತದೆ.
ನಿಮಗೇನಾದರೂ ಕೇಳಬೇಕು ಅಥವಾ ಹೇಳಬೇಕೆನಿಸಿದಲ್ಲಿ-
ಅಲ್ಲಿ ನಿಂತಿರುತ್ತಾರಲ್ಲ ಮರಕ್ಕೊಬ್ಬೊಬ್ಬ ಕಣ್ಣುಗಳಿಲ್ಲದ, ಕಿವಿಗಳಿಲ್ಲದ;
ಮಾತೇ ಬಾರದ ಮೂಗ ಕ್ರಿಮಿನಲ್‌ಗಳು.
*****