ಪಕ್ಕದ ಸೀಟಿನಾಕೆ

ತಾನೊಂದು ರಂಭೆ ಅಂದುಕೊಂಡಂತಿದೆ
ನನ್ನ ಪಕ್ಕದ ಸೀಟಿನಾಕೆ
ಪಾರ್ಲರ್ ದಿಂದ ನೇರ ವಿಮಾನಕ್ಕೇರಿದ
ಮೂವತ್ತರ ಬೆಡಗಿ
ಥೇಟ್ ಐಟಮ್ ಸಾಂಗ್ ಗರ್ಲ್
ಗುಲಾಬಿ ಬಣ್ಣ ತಲೆತುಂಬ ಹುಚ್ಚೆದ್ದ ಕೂದಲು
ಉದ್ದನೆಯ ಉಗುರು ಮೇಲೆ ಕಪ್ಪುಬಣ್ಣ
ಕೂತಲ್ಲಿ ಕೂರಲಾರೆ ನಿಂತಲ್ಲಿ ನಿಲ್ಲಲಾರೆ
ಪರಿಚಯಿಸಿಕೊಂಡು
ಗಹಗಹಿಸಿ ನಕ್ಕು ವಿಮಾನದೊಳಗೂ
ಗಾಗಲ್ ಏರಿಸಿ ಓಡಾಟ;
ತಾಸಿಗೊಮ್ಮೊಮ್ಮೆ ಕಪ್ಪು ಟೀ
ಉದ್ದನೆಯ ಸಿಗಾರ್ ಬಣ್ಣ ಬಣ್ಣಗಳ ಡ್ರಿಂಕ್ಸ್
ಅರ್ಧ ತಾಸಿಗೊಮ್ಮೊಮ್ಮೆ ಗಲ್ಲಕೆ
ರೋಜು ರೂಹು ಲಿಪ್ಸ್ಟಿಕ್ ಮೇಲೆ ಲಿಪ್ಸ್ಟಿಕ್
ಎದ್ದು ಸುತ್ತಾಟಕೆ ಹೊರಟರೆ
ಸೀಟು ತುಂಬೆಲ್ಲಾ ಪಾರ್ಲರ್ ಚಿಲ್ಲಾಪಿಲ್ಲಿ.

ಪೈಲೆಟ್ ಮೈಮುಟ್ಟಿ ಕೈಹಿಸುಕಿ
ಏನೇನೋ ಹೇಳುತ್ತಾನೆ
ಇವಳ ಗಹಗಹಿಕೆಯ ನಗು ಬುಲ್ಡೋಜರ್
ಗಗನ ಸಖಿಯರು ಹೊಗಳಿರಬಹುದು ರೂಪ
ಮೈಯೆಲ್ಲಾ ಥಳಕಾಟ ತುಳುಕಾಟ
ಪಯಣಿಗರಿಗೆ ಬಿಸಿಬಿಸಿ ತುಪ್ಪ
ಸುಟ್ಟ ಮುಖ ಬಿರಿಬಿರಿ ನೋಟ.

ಸಿಗಾರ್ ಗೊಗ್ಗುಕೆಮ್ಮು ಕುಡಿತವಾಸನೆ
ಮಾತುಮಾತಿಗೆ ಸಾರಿ ಎಕ್ಸಕ್ಯೂಜ್
ಕಿಟಕಿ ತೆರೆಯದೆ ನೆಮ್ಮದಿಯಾಗಿ ಉಸಿರಾಡದೆ
ನಾನು ಒಳಗೊಳಗೇ ಒದ್ದಾಡಿ ಸುಮ್ಮನೆ

ಪಾರದರ್ಶಕ ಉಡುಪಿನೊಳಗೆ
ಬಿರಿದ ತೊಡೆ ಎದೆ ತೋಳು
ಮಾಗಿ ಚಳಿ ಬಡಿದ ಪಯಣಿಗರು
ವಿಸ್ಕಿಗೂ ಬೆಚ್ಚಗಾಗದೆ
ಸುಮ್ಮನೆ ವಿಮಾನದೊಳಗೆ ಸುತ್ತಾಟ
ನೋಡಿದ್ದೇ ಈಕೆಯನ್ನು ಹೆಜ್ಜೆ ನಿಧಾನ

‘ನಶೆ ಏರಿ ನಿದ್ರಿಸಿದ ರಂಭಾ-ಅಬ್ಬಾ’
ಸಖಿಯ ಸಹಾಯ ಕೋರಿ
ಮೈ ಕೈ ಮುಚ್ಚಿ ಲೈಟ್ ಆಫ್ ಮಾಡಿದೆ
ಸುತ್ತಾಡುವವು ಎಲ್ಲೋ ಮಾಯ.

ಆರೆಂಟು ತಾಸಿನ ಪಯಣ
ನೋಡಿದ್ದೇ ನೋಡಿದ್ದು ಆಕೆಯ ಡೌಲು
ತಪ್ಪಿಸಿಕೊಂಡೆ ಕಿಡಕಿಯಾಚೆಯ ಚೆಲುವ

ಕ್ಷಣಗಣನೆ ಪ್ಯಾರಿಸ್ಸಿಗೆ ಇಳಿಯಲು
ಭರಾಟೆಯ ಮೇಕಪ್ಪು ಘಾಟಿ ಸುವಾಸನೆ
ಸಾಕಪ್ಪಾ ಸಾಕಾಗಿತ್ತು ಕಿರಿಕಿರಿಯ ಸಹವಾಸ
ಬರ್ರನೆ ಮುಂಗೈ ಎಳೆದು ಮುದ್ದುಕೊಟ್ಟು ನಡೆದಳು
ಮೆಲ್ಲನೆ ಕೇಳಿದೆ ಸಖಿಗೆ, ಯಾರಿವಳು?
ಫ್ರೆಂಚ್ ಮಾಡೆಲ್ “ಪ್ರಾನ್ಸಿ ಜಾಕೋಬ್”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿವೇದನೆ
Next post ಕಸಬರಿಗೆ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…