ನನ್ನೀ ಬಾಳಿನ ಪೂಜಾ ಪಾತ್ರೆಯ

ನನ್ನೀ ಬಾಳಿನ ಪೂಜಾ ಪಾತ್ರೆಯ
ನಿನ್ನಡಿಗಿಡುವೆನು ದೇವ;
ಬರಿದಾಗಿರುವೀ ಪಾತ್ರೆಯ ತುಂಬಿ
ತುಳುಕಲಿ ಭಕ್ತಿಯ ಭಾವ

ದಾರಿ ತಿಳಿಯದೆ ಗುರಿಯನರಿಯದೆ
ಅಲ್ಲಸಲ್ಲದಕೆ ದುಡುಕಿ,
ತಂದು ತುಂಬಿದೆ ಮನದ ಬಿಂದಿಗೆ
ಕೊಳೆತ ಹಣ್ಣುಗಳ ಹುಡುಕಿ.

ಈಗ ತಿಳಿಯುತಿದೆ ಬೆಳಕು ಸುಳಿಯುತಿದೆ
ಮಾಡಿದ್ದೆಲ್ಲವು ವ್ಯರ್ಥ;
ಉರಿದು ಆರುವ, ಒಡನೆ ತೀರುವ
ಗಳಿಕೆಗೇನಿದೆ ಅರ್ಥ?

ನೆಲಸಿದೆ ನಿನ್ನ ಕಣ್ಣ ಕಾಂತಿಯಲಿ
ಸಕಲ ಜೀವಲೋಕ;
ಅಂಥ ನಿನ್ನನೇ ಮರೆತು ಬಾಳಿದೆನು
ಹಾಡಿದಂತೆ ಮೂಕ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೩೯
Next post ಈ ಗುಬ್ಬಿಗಾರು ಜೊತೆ?

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…