ಸೊಟ್ಪ ಕಾಲಿನ ಪುಟ್ಟ ಗುಬ್ಬಿ
ಖುಷಿ ಕೊಡುತ್ತಿತ್ತು ಸ್ವರ್ಗದಂತೆ
ಮರೆಸುತಿತ್ತು ಅಪ್ಪ ಅಮ್ಮರನ್ನೇ
ಇಪ್ಚವಾಗಿತ್ತು ದೇವರು; ಪೂಜೆಯಂತೆ
ಸಾಕ್ಷಾತ್ಕಾರವಾಗಿತ್ತು ಬೆಳಕಿನಂತೆ
ಹತ್ತಿರವಿತ್ತು ಬಂಧು ಬಳಗದಂತೆ
ಅಂಗಳದಲಿತ್ತು ತುಳಸಿ ದಳದಂತೆ
ಕಳೆದು ಹೋದವೆ ಹಿಂಡು
ಒಂಟಿ ಕಾಲಿನ
ಒಂಟಿ ರೆಕ್ಕೆಯ
ಒಂಟಿ ಕಣ್ಣಿನ ಗುಬ್ಬಿ
ಕುಳಿತವೆ ಎದೆಯ ಮೂಲೆಯಲ್ಲಿ
ಬತ್ತದ ದುಃಖವಾಗಿ?
ಅಮ್ಮ ಅಪ್ಪರಿಗೆ ಮಕ್ಕಳಿದ್ದೇವೆ
ದೇವರು ಧರ್ಮಕ್ಕೆ ಜನರಿದ್ದೇವೆ
ಬಂಧು ಬಳಗ ಜಗದಗಲವಿದೆ
ಡೊಂಕು ಕಾಲಿನ
ಈ
ಪುಟ್ಟ ಗುಬ್ದಿಗೆ ಯಾರಿದ್ದಾರೆ?
*****