Home / ಕವನ / ಕವಿತೆ / ಹುಟ್ಟಗರತಿಯ ಕಾಣಲಿಲ್ಲಾ

ಹುಟ್ಟಗರತಿಯ ಕಾಣಲಿಲ್ಲಾ

ಹುಟ್ಟಗರತಿಯ ಕಾಣಲಿಲ್ಲಾ ಕೊಟ್ಟ್ಯಾದಿಯಲ್ಲಾ
ಹುಟ್ಟಗರತಿಯ ಕಾಣಲಿಲ್ಲಾ ||ಪ||

ಹುಟ್ಟಗರತಿಯ ಕಾಣಲಿಲ್ಲಾ
ಪಟ್ಟಗುಡುಮ ರಂಡೆ ನೀನು
ಪಟ್ಟದಯ್ಯನವರಿಳಿಯ ಬಂದರೆ
ಎಟ್ಟಿ ಮಾತುಗಳಾಡುತೀದಿ ||೧||

ಮಾನವಂತರ ಮನೆಯೊಳ್ಹುಟ್ಟಿ
ಆದೆಲ್ಲ ಕೊಟ್ಟಿ ಅಪಕೀರ್ತಿ ಅವಗ ತಂದಿಟ್ಟಿ
ಮಾನ ಹೋದ ಬಳಿಕ ಇನ್ನು ಏನು ಕೊಟ್ಟರ ಬಂದೀತ್ಹೇಳ
ಜ್ಞಾನವು ಳ್ಳವರಿಳಿಯ ಬಂದರೆ ಹೀನ ಮಾತುಗಳಾಡತೀದಿ ||೨||

ಹರೆಯದಾಗ ತಿಳಿಯಲಿಲ್ಲಾ ಹರಿದಾಡಿದೆಲ್ಲಾ
ಮುರಕು ಮಾಡಿ ಮೂಳನಾದೆಲ್ಲಾ ಪರಕಾದಿಯೆಲ್ಲಾ
ಗರತಿ ಲಕ್ಷಣ ಹೋದಮ್ಯಾಲಿನ್ನು ತಿರುಗಿ ಗರತ್ಯಾಗಬಹುದೆ ?
ಇರಲಿ ನಿಮ್ಮಯ ಶಾಂತಿಗುಣವು ಸೂಳಿಗೆ ಗರತೆನ್ನಬಹುದೆ? ||೩||

ಗಂಡ ಪುಂಡನಾಗಲಿಲ್ಲ ಸಂಡನಾದನಲ್ಲಾ
ಕಂಡು ನಿನ್ನಾಳುತಾನಲ್ಲಾ
ಲಂಡ ಬಾಲದ ಮಂಗನಂತೆ ಗಂಡನ ಕುಣಿಸ್ಯಾಡುತೀ
ಕಂಡು ನಾವು ತಿಳಿಯಬಂದರೆ ಬಂಡಮಾತುಗಳಾಡುತೀದಿ ||೪||

ಸೀಗಿಹಳ್ಳಿಮಠದ ನಾರಿವಳಾ ಬಾಜಾರಿ ಇವಳಾ
ಯಾರು ಮಠಕ ಬಂದರ ಸೇರದವಳಾ
ಊರ ಸರಕಾರಕ್ಕೆ ಹೇಳಿ ಭಾರಿ ದಂಡಾ ಕೊಡಿಸಬೇಕು.
ಧೀರ ಶಿಶುವಿನಾಳಧೀಶನ ನೂರಬಿಸ್ತಿ ಅರಿಯಳಿವಳು ||೫||

*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...