ನಮ್ಮೂರಲೊಬ್ಬ ಕತೆಗಾರರಿರುವರು
ಇರುಳೂ ಹಗಲೂ ಕತೆ ಹೇಳುವರು
ಯಾತಕೆ ಎಂದರೆ ಗೋಳಾಡುವರು
ಪಾತರದವರೇ ವರಾತದವರು
ಕದ ತಟ್ಟಿ ಬರುವ ಕತೆಗಳಿದ್ದಾವೆ
ಕಿಟಿಕಿಲಿ ನುಗ್ಗುವ ಕತೆಗಳಿದ್ದಾವೆ
ಕನಸಲಿ ಬಿಡದವು ನೆನಸಲಿ ಬಿಡುವುವೆ?
ಹೇಳಿ ಮುಗಿಸಿದರೂ ಎದ್ದೆದ್ದು ಬರುತಾವೆ
ಹೂಂಗುಟ್ಟಿ ನಮಗೂ ಸಾಕಾಗಿ ಹೋಯ್ತು
ಮೈತುಂಬ ಕಂಬಳಿ ಹೊದ್ದೂ ಆಯ್ತು!
ಇನ್ನೇನು ನಿದ್ದೆ ಎಂದರೆ ಎಲ್ಲಿದೆ?
ಸ್ವತಾ ಕತೆ ಮುಂದೆ ಕೈಕಟ್ಟಿ ಕೂತಿದೆ!
*****