ದೂರವಾಣಿಯು ಇಂದು ಎಲ್ಲರ ಮನೆಯ ವಾಣಿಯಾಗಿದೆ. ಇದರ ಮುಂದುವರಿದ ಆವಿಷ್ಕಾರಗಳಾದ ಇಂಟರ್ನೆಟ್, ಇ-ಮೇಲ್, ಮೊಬೈಲ್ ಫೋನ್ ಮುಂತಾವುಗಳು ವಿಜ್ಞಾನದ ಕೊಡುಗೆಗಳಾಗಿ ಪರಿಚಿತವಾಗಿವೆ. ಇದರ ಮುಂದುವರೆದ ಅತ್ಯುನ್ನತ ವಿಜ್ಞಾನದ ಕೊಡುಗೆ ಎಂದರೆ ಈಗೀಗಿನ ವಿಡಿಯೋ ದೂರವಾಣಿಗಳು. ಇವು ಏಕಕಾಲ- ದಲ್ಲಿ ಮಾತನಾಡುವವರ ಮುಖ (ಬಿಂಬ) ಮತ್ತು ಜೊತೆಗೂಡಿದೆ ಮಾತುಗಳನ್ನು ಏಕಕಾಲದಲ್ಲಿ ಸಂವಹನ ಮಾಡುತ್ತವೆ. ಒಬ್ಬ ವ್ಯಕ್ತಿಯ ಒಂದು ಕೋಣೆಯಲ್ಲಿ ಟೆಲಿಫೋನ್‌ನಲ್ಲಿ ಮಾತನಾಡುತ್ತ ಇನ್ನೊಂದು ದೂರದ ಸ್ಥಳದಲ್ಲಿ ರಿಸೀವರ್ ಎತ್ತಿಕೊಂಡು ಮಾತನಾಡುತ್ತಿರುವ ಚಿತ್ರಗಳನ್ನು ಪಕ್ಕದಲ್ಲಿಯೇ ಇಟ್ಟ ಪರದೆಯ ಮೇಲೆ ಮೂಡಿಸಬಹುದು. ವಿಡಿಯೋ ದೂರವಾಣಿಯ ಮೇಲೆ ಚಿತ್ರವು ಚಲಿಸುತ್ತಿರಬಹುದು.
ಹೆಚ್. ಇ. ಏವ್ಸ್ ಅವರು 1927 ವಾಷಿಂಗ್ಟನ್ ಡಿಸಿ. ಇಂದ ನ್ಯೂಯಾರ್ಕಿಗೆ ತಂತಿಯಿಂದ ಏಕಮುಖ ಬಿಂಬವನ್ನು ರವಾನಿಸಿದರು. ಅದೇ ವರ್ಷದಲ್ಲಿ ರೇಡಿಯೋದಿಂದ ನ್ಯೂಜೆರ್ಸಿಯಿಂದ ನ್ಯೂಯಾರ್ಕ್‌ವರೆಗೆ ಬಿಂಬವನ್ನು ಕೂಡ ರವಾನಿಸಲಾಯಿತು. ಈ ಪ್ರಯೋಗಗಳ ಗುರಿ ಏನೆಂದರೆ ಗುರುತಿಸಲಾಗುವ ಮನುಷ್ಯನ ನ್ಯೂಯಾರ್ಕ್ ನಗರದಲ್ಲಿ ತಂತಿ ಮಾರ್ಗದ ಮೇಲೆ ಎರಡು ಮಾರ್ಗದ ವಿಡಿಯೋ ದೂರವಾಣಿಯನ್ನು ಪ್ರದರ್ಶಿಸಿದರು. 1936 ರಿಂದ 1940 ರವರೆಗೆ ಜರ್ಮನ್ ಅಂಚೆ ಕಛೇರಿಯಿಂದ ಸ್ಥಳೀಯ ಮತ್ತು ಅಂತರ್ ನಗರಗಳಿಂದ ಸಾರ್ವಜನಿಕ ವಿಡಿಯೋ ದೂರವಾಣಿ ಸೇವೆಯನ್ನು ಒದಗಿಸಲಾಯಿತು. ಬರ್ಲಿನ್, ಲೀಪ್ಸಿಂಗ್, ನ್ಯೂರೆಂಬರ್ಗ್ ಮತ್ತು ಮ್ಯೂನಿಚ್‌ಗಳಲ್ಲಿ ಯಾವುದೇ ಇಬ್ಬರು ದೂರವಾಣಿ ಗ್ರಾಹಕರ ನಡುವೆ ಮೊದಲೇ ಮಾಸ್ಕೋ ಕೀವ್ ಮತ್ತು ಲೆಲಿನ್ ಗಾಡ್‌ಗಳಿಗೂ ಸೇರಿದಂತೆ 8 ನಗರಗಳಲ್ಲಿ ಚಂದಾದಾರರುಗಳಿಗೆ ದೂರ ಸಂಪರ್ಕಗಳನ್ನು ಕಲ್ಪಿಸಲಾಯಿತು.
1960ರ ದಶಕದ ಕೊನೆಯಲ್ಲಿ ಅಮೇರಿಕಾ ದೂರವಾಣಿ ಮತ್ತು ತಂತಿ ಇಲಾಖೆಯು 1980ರ ಹೊತ್ತಿಗೆ ಅಲ್ಲಿ ಶೇಕಡಾ, ಒಂದರಷ್ಟು ಗೃಹ ದೂರವಾಣಿಗಳಲ್ಲಿ ಚಿತ್ರ ದೂರವಾಣಿ ಸೆಟ್ ಇರುತ್ತೆದೆಂದು ಘೋಷಿಸಿದರು. ವಾಣಿಜ್ಯ ವಿಡಿಯೋ ದೂರವಾಣಿ ಬೆಲ್‌ಸಿಸ್ಟಂ ಕಂಪನಿಯಿಂದ 1970ರ ದಶಕದಲ್ಲಿ ಕಾರ್ಯರೂಪಕ್ಕೆ ತರಲಾಯಿತು.
ಈ ವಿಡಿಯೋ ದೂರವಾಣಿಯಲ್ಲಿ ಒಂದು ಕ್ಯಾಮರಾ ಪ್ರದರ್ಶನ ಮೈಕ್ರೋಫ್ರೋನ್ ಮತ್ತು ಮಾತನಾಡುವ ಫೋನ್‌ಗಳಿರುತ್ತವೆ. ಈ ಉಪಕರಣಗಳು ಸ್ವರ ಮತ್ತು ದೃಷ್ಯ ಹೂಡುವಳಿಯನ್ನು ವಿದ್ಯುತ್ ಸಂಕೇತಗಳಾಗಿ ಬದಲಾಯಿಸುತ್ತೆವೆ. ವಿದ್ಯುತ್ ಸಂಕೇತಗಳು ದಹನ ಮಾರ್ಗಗಳ ಮೂಲಕ ಗುರಿಯುಳ್ಳ ಸ್ಥಾನಕ್ಕೆ ಒಯ್ಯಲ್ಪಟ್ಟು ಅಲ್ಲಿ ಅವುಗಳ ಧ್ವನಿ ಮತ್ತು ಚಿತ್ರಗಳಾಗಿ ಬದಲಾವಣೆ ಹೊಂದಿ ಗ್ರಾಹಕರ ಸಮೀಪ ಕುಳಿತಿರುವ ವೀಕ್ಷಕರಿಂದ ಅದನ್ನು
ಕೇಳಬಹುದು ಮತ್ತು ನೋಡಬಹುದು.
ಚಿತ್ರದ ದೂರವಾಣಿ ಕರೆಯನ್ನು ದೂರವಾಣಿ ಕರೆಯ ರೀತಿಯಲ್ಲಿಯೇ ದೂರವಾಣಿ ಸೆಟ್‌ನಿಂದ ಪ್ರಾರರಭಿಸ- ಲಾಗುತ್ತದೆ. ಇದರಲ್ಲಿ ವಿಶೇಷವೆಂದರೆ ದೂರವಾಣಿ ಸಂಖ್ಯೆಯನ್ನು ಡಯಲ್, ಮಾಡುವುದಕ್ಕೆ ಮುಂಚೆ ಒಂದು ವಿಶೇಷ ಕೀಲಿಯನ್ನು ಒತ್ತಬೇಕು. ಚಿತ್ರದ ಗಾತ್ರ, ಎತ್ತರ ಮತ್ತು ವ್ಯತ್ಯಾಸವನ್ನು ಗುಬುಟುಗಳಿಂದ ಸರಿಪಡಿಸಬಹುದು. ಮೂರು ತಂತ್ತಿಜೊತೆಗಳ ಚಿತ್ರ ದೂರವಾಣಿ ಉಪಕರಣವನ್ನು ಸ್ಥಳೀಯ ಕೇಂದ್ರ ಕಛೇರಿಗೆ ಜೋಡಿಸಲಾಗುತ್ತದೆ. ಈ
ಕಛೇರಿಯಿಂದ ಸಂಕೇತವನ್ನು ಅಷೇಕ್ಷಿಸಿದ ಸ್ಥಳೀಯ ಕಛೇರಿಗೆ ಸಂವಹನ ಮಾಡಿ ಅಲ್ಲಿಂದ ಗ್ರಾಹಕ ಚಿತ್ರ ದೂರವಾಣಿಗೆ ಹೋಗುತ್ತದೆ. ಸಂಕೇತಗಳನ್ನು ಅನಲೋಗ್ ಅಥವಾ ಡಿಜಿಟಲ್ ರೂಪದಲ್ಲಿ ಕಳಿಸಬಹುದು.
ಚಿತ್ರ ದೂರವಾಣಿಯಿಂದ ಮಾತನಾಡುವ ವ್ಯಕ್ತಿಗಳು ಒಬ್ಬರಿಗೊಬ್ಬರಿಗೆ ಸಾಮೀಪ್ಯತೆಯ ಭಾವನೆಯೆ ಉಂಟಾಗುತ್ತದೆ. ವಿಡಿಯೋ ದೂರವಾಣಿಗಳ ವಿಸ್ತಾರವಾದ ಉಪಯೋಗವು ಜನರಿಗೆ ರೂಢಿಯಾದಂತಾಗಬಹುದು. ಭಾವಾತಿರೇಕದ ಸಾಮೀಪ್ಯ ಇದರಿಂದ ಉಂಟಾಗುತ್ತದೆ. ಈ ದೂರದ ದೃಶ್ಯ, ದುಬಾರಿಯಾಗಿದೆ. ಸಾಧಾರಣ ದೂರವಾಣಿ ಕರೆಯ ಅನೇಕ ಪಟ್ಟು ಹೆಚ್ಚಾಗಿರುತ್ತದೆ. ಮುಂದೊಂದು ದಿನ ಈ ಸಾಧನೆಗಳಿಗೆ ಈ ಮುರಿದುವರೆದ
ಮಾನವ ಒಗ್ಗಿಕೊಳ್ಳುತ್ತಾನೆ. ಮತ್ತು ಈ ರೀತಿಯ ದೂರವಾಣಿಗಳು ಸಾಮಾನ್ಯವಾಗಲೂಬಹುದು.
*****