ನೇತಾಜಿ ಮತ್ತು ರೋಮೇನ್ ರೋಲಾ*

—————————————-
*ಇದು ೩-೪-೧೯೩೫ ರಂಧು ನೇತಾಜಿ  ಅವರನ್ನು ಭೇಟಿಯಾಗಿ ನಡೆಸಿದ ಚರ್ಚೆ. ನೇತಾಜಿ ಅವರ ಮಾತಿನಲ್ಲೇ ಅನುವಾದಿಸಿದೆ.
——————————————-
ನಾನು ಈಗ್ಗೆ ಎರಡು ವರ್ಷಗಳ ಹಿಂದೆ ಯುರೋಪಿಗೆ ಹೋಗಿದ್ದಾಗ ಪ್ರಖ್ಯಾತರೂ, ಶ್ರೇಷ್ಟ ಚಿಂತಕರೂ, ಭಾರತ ಹಾಗೂ ಅದರ ಸಂಸ್ಕೃತಿಯ ಸ್ನೇಹಿತರೂ ಆಗಿದ್ದ ರೋಮೇನ್ ರೋಲಾ ಅವರನ್ನು ಭೇಟಿಯಾಗಬೇಕೆಂದು ಹವಣಿಸುತ್ತಿದ್ದೆ.

೧೯೩೩ ಹಾಗೂ ೧೯೩೪ ರಲ್ಲಿ ಪರಿಸ್ಥಿತಿಗಳು ನಮ್ಮಿಬ್ಬರ ಭೇಟಿಗೆ ಅವಕಾಶ ನೀಡಲಿಲ್ಲ. ಆದರೆ ಮೂರನೆ ಪ್ರಯತ್ನ ಫಲಿಸಿತು. ನಾನು ತುಂಬ ಉತ್ಸುಕನಾಗಿದ್ದೆ. ಆದರೆ ಆ ನನ್ನ ಉತ್ಸಾಹ, ಕುತೂಹಲ ಫಲಪ್ರದವಾಗಬಹುದೆ ಎಂಬ ಅನುಮಾನವೂ ಸುಳಿಯುತ್ತಿತ್ತು. ಈ ಮನುಷ್ಯನಿಂದ ನಾನು ಸ್ಪೂರ್ತಿ ಪಡೆಯಬಲ್ಲೆನೆ? ಇಲ್ಲಾ ನಿರಾಶನಾಗಿ ಹಿಂದಿರುಗಬೇಕಾದೀತೆ? ಈ ಆದರ್ಶ ವ್ಯಕ್ತಿ, ಕನಸು ಕಾಣುವಾತ ಜೀವನದ ವಾಸ್ತವವನ್ನು ಪ್ರಶಂಸಿಸಬಲ್ಲನೆ? ಯಾವುದೇ ಕಾಲದಲ್ಲಿ ಹೋರಾಡುವ ವ್ಯಕ್ತಿ ಎದುರಿಸುವ ವಾಸ್ತವ ತೊಂದರೆಗಳನ್ನು ಅರಿಯಬಲ್ಲನೆ? ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಇತಿಹಾಸದ ಗೋಡೆಯಲ್ಲಿ ಬರೆದಿರಬಹುದಾದ ಹಣೆ ಬರಹವನ್ನು ಓದಬಲ್ಲನೆ?

ಸ್ಪೂರ್ತಿಯ ಪದಗಳು: ನನ್ನ ಹೃದಯವನ್ನು ತಟ್ಟಿದ ಸ್ಫೂರ್ತಿಯ ಪದಗಳೆಂದರೆ ರೊಮೇನ್ ರೋಲಾ ಅವರು ತಮ್ಮ ೨೨-೨-೧೯೩೫ ರ ಪತ್ರದಲ್ಲಿ ಬರೆದವು.

“ಚಿಂತಕರಾದ ನಾವು ಪ್ರತಿಯೊಬ್ಬರೂ ದಣಿವಿನ ಹಾಗೂ ಇರದ ಸಂದಿಗ್ಧಗಳಲ್ಲಿ ಪ್ರಚೋದಿಸುವ ಸಂದರ್ಭಗಳನ್ನು ಯುದ್ಧವನ್ನೂ ಮೀರಿದ ದೈವದ ಅಥವಾ ಕಲೆಯ ಅಥವಾ ಸ್ವಾತಂತ್ರ್ಯ ಸ್ಫೂರ್ತಿಯ ಅಥವಾ ಬಹು ದೂರದಲ್ಲಿರುವ ಅನುಭಾವ ಆತ್ಮಶಕ್ತಿಯ ಮೂಲಕ ಪರಿಹರಿಸಿಕೊಳ್ಳಬೇಕು. ನಾವು ಹೋರಾಡುವುದಾದರೆ ಈ ವಿಸ್ತಾರದೊಂದಿಗೆ ಹೋರಾಡಬೇಕು”.

ನಾನು ಜಿನೀವಾದ ಸುಂದರ ಸರೋವರದಿಂದ ಎರಡು ಘಂಟೆಗಳ  ಮನೋಲ್ಲಾಸ ನೀಡುವ ಹವಾಮಾನದಲ್ಲಿ ಸ್ವಿಡ್ಜರ್ ಲ್ಯಾಂಡಿನ ಸುಂದರ ಮೋಹಕ ದೃಶ್ಯಗಳ ನಡುವೆ ಪಯಣಿಸಿದೆ

ಕಾರು  ಫ್ರೆಂಚ್‌ ವಿದ್ವಾಂಸ ವಾಸಿಸುತ್ತಿದ್ವ ‘ವಿಲ್ಲಾ ಓಲ್ಗಾ’ ಮುಂದೆ ನಿಂತಿತು. (ಆಗ ರೋಮೇನ್ ರೋಲಾ ಅವರು ಸ್ವಿಡ್ಜರ್ ಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದರು). ಅದು ಅತ್ಯಂತ ಸುಂದರವಾದ ಸ್ಥಳ. ಸುತ್ತಲೂ ಬೆಟ್ಟ ಗುಡ್ಡಗಳಿಂವ ಆವೃತವಾಗಿತ್ತು. ಆ ಮನೆಯಿಂದ ಸುಂದರ ಸರೋವರ ಆಕರ್ಷಣೀಯವಾಗಿ ಕಾಣುತ್ತಿತ್ತು. ಅಲ್ಲಿ ನಮ್ಮ ಸುತ್ತ ಶಾಂತಿ ನೆಲೆಸಿತ್ತು. ಸೌಂದರ್ಯ ತುಂಬಿತ್ತು. ಅದ್ಭುತವಾಗಿತ್ತು. ಏಕಾಂತ ಧ್ಯಾನಕ್ಕೆ ಅದು ಸೂಕ್ತ ಸ್ಥಳವಾಗಿತ್ತು.

ನಾನು ಕರೆಗಂಟೆಯನ್ನು ಒತ್ತಿದೆ, ಜೀವಂತಿಕೆಪುಟಿವ ಮುಖದ, ಕರುಣೆಯನ್ನು ಹೊತ್ತ ಕುಳ್ಳ ಸ್ತ್ರೀಯೊಬ್ಬರು ಬಾಗಿಲನ್ನು ತೆರೆದರು. ಅವರು ರೋಮೆನ್‌ ರೋಲಾ ಅವರ ಸಹಧರ್ಮಿಣಿ. ಆಕೆ ನಮ್ಮನ್ನು ಶುಭ ಕೋರುವಷ್ಟರಲ್ಲಿ ನಮ್ಮ ಮುಂದಿದ್ದ ಮತ್ತೊಂದು ಬಾಗಿಲು ತೆರೆದುಕೊಂಡಿತು.  ಅಲ್ಲಿ ಒಬ್ಬ ಎತ್ತರದ ಆಕೃತಿಯ ಕಳೆಗುಂದಿದಮುಖಭಾವದ ಆದರೆ ತೀಕ್ಷ್ಣ ಒಳನೋಟವುಳ್ಳ ವ್ಯಕ್ತಿ ಹೊರ ಬಂದರು.  ಇದೇ ನಾನು ಅನೇಕ ಚಿತ್ರಗಳಲ್ಲಿ ನೋಡಿದ್ದು. ಮಾನವನ ದುಃಖಗಳನ್ನು ಹೊತ್ತ ಮುಖ. ಆ ಕಳೆಗುಂದಿದ ಮುಖದಲ್ಲಿ ದುಃಖದ ಛಾಯೆ ಮೆತ್ತಿಕೊಂಡಿತ್ತು. ಆವರೆ ಅದು ಸೋಲನ್ನು ಒಪ್ಪಿಕೊಳ್ಳು- ವಂಥ ಮುಖವಾಗಿರಲಿಲ್ಲ.  ಮಾತನಾಡಲು ಶುರ ಮಾಡಿದ ಕ್ಷಣದಲ್ಲೆ ಅವರ ಮುಖ ರಂಗೇರಿತು. ಕಣ್ಣುಗಳಲ್ಲಿ ಅಪರೂಪದ ಬೆಳಕು ಚಿಮ್ಮಿತು. ಆಡಿದ ಮಾತುಗಳಲ್ಲಿ ಜೀವಂತಿಕೆ ಮತ್ತು ಭರವಸೆ ಗರ್ಭೀಕರಿಸಿಕೊಂಡಿತ್ತು.

ಭಾರತದ ಸಂದರ್ಭ: ಪರಸ್ಪರ ಶುಭಾಷಯಗಳನ್ನು ಹೇಳಿ ಭಾರತದ ಬಗ್ಗೆ, ಭಾರತದ ಗೆಳೆಯರ ಬಗ್ಗೆ ಉಭಯ ಕುಶಲೋಪರಿಯಾದ ನಂತರ ಗಾಢ ಚರ್ಚೆಗೆ ತೊಡಗಿದೆವು. ರೊಮೇನ್ ರೋಲಾ ಇಂಗ್ಲೀಷ್ ಮಾತನಾಡಲಿಲ್ಲ. ನಾನು ಫ್ರೆಂಚ್ ಮಾತನಾಡುವಂತಿರಲಿಲ್ಲ. ನಮಗೆ ಅನುವಾದರಾಗಿ ಶ್ರೀಮತಿ ರೋಲಾ ಅವರು ಬಂದರು.

ನನ್ನ ಉದ್ದೇಶ ಇತ್ತೀಚಿನ ಭಾರತದ ಸಂದರ್ಭದಲ್ಲಿ ಆಗಿರುವ ಬೆಳವಣಿಗೆಯನ್ನು ಕುರಿತು ಚರ್ಚಿಸಿ ಅವರಿಂದ ಪ್ರಪಂಚದ ಸದ್ಯದ ಸಮಸ್ಯೆಗಳ ಕುರಿತ ಅವರ ಅಭಿಪ್ರಾಯ ತಿಳಿದುಕೊಳ್ಳುವುದಾಗಿತ್ತು. ಆದ ಕಾರಣ ನಾನು ಕಂಡಂತೆ ಭಾರತದ ಸಮಸ್ಯೆಗಳನ್ನ ಅವರ ಮುಂದೆ ವ್ಯಕ್ತಪಡಿಸಬೇಕಾಗಿತ್ತು. ಕಳೆದ ೧೪ ವರ್ಷಗಳಲ್ಲಿ ಚಳವಳಿಯ ನೆಲೆಗಟ್ಟಾಗಿರುವುದು ಒಂದು ಸತ್ಯಾಗ್ರಹ ಅಥವಾ ಅಹಿಂಸಾ ಚಳವಳಿ ಹಾಗೂ ಮತ್ತೊಂದು ಬಂಡವಾಳಶಾಹಿಗಳು, ಕಾರ್ಮಿಕರು, ಭೂ ಮಾಲಿಕರು, ರೈತರು ಮುಂತಾದ ವರ್ಗಗಳನ್ನೊಳಗೊಂಡ ಯುನೈಟೆಡ್ ಫ್ರಾಂಟ್. ಸತ್ಯಾಗ್ರಹ ಚಳವಳಿಯಿಂದ ಈ ಕೆಳಕಂಡಂತೆ ನಿರ್ಣಯವಾಗಬಹುದೆಂಬುದು ಭಾರತದ ಭರವಸೆ. ಅದು ಭಾರತದೊಳಗೆ ಆಡಳಿತವನ್ನು ಕ್ರಮೇಣ ನಿರುಪಯೋಗ ಪಡಿಸಬಹುದು. ಭಾರತದ ಹೊರಗೆ ಅದು ಸತತ್ಯಾಗ್ರಹದ ನೈತಿಕಶಕ್ತಿ ಬ್ರಿಟಿಷರ ಅಂತಃಸ್ಸಾಕ್ಷಿಯನ್ನ ಜಾಗೃತಗೊಳಿಸಬಹುದು. ಈ ರೀತಿ ಯಾವ ರಕ್ತಪಾತವೂ ಇಲ್ಲದೆ ಭಾರತದ ಸಮಸ್ಯೆ ಸುಲಭವಾಗಿ ಭಾರತ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಬಹುದೆ? ಆ ಭರವಸೆ ನಿಷ್ಪಲವಾಗಿದೆ. (ನಿಜ. ದೇಶೀಯತೆ ಭಾರತದಲ್ಲಿ ಶೂನ್ಯವಾಗುತ್ತಾ ಈಗ ಅದು ಪಾಶ್ಚಾತ್ಯೀಕರಣಗೊಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ -ಜಹೊನಾ) ಭಾರತದ ಒಳಗೆ ಸತ್ಯಾಗ್ರಹ ಅಹಿಂಸಾ ಚಳವಳಿಯನ್ನ ನಿರ್ಮಾಣ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಉನ್ನತ ಸೇವೆಗಳಲ್ಲಿ, ನಾಗರಿಕ ಮತ್ತು ಸೈನಿಕ ಸೇವೆಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಹೀಗಾಗಿ ರಾಜರ ಆಡಳಿತ ಯಥಾವತ್ತಾಗಿ ಸಾಗಿದೆ. ಭಾರತದ ಹೊರಗೆ ಗಾಂಧೀಜಿಯವರ ನ್ಶೆತಿಕ ಹೋರಾಟದಿಂದ ಕೆಲವು ಉನ್ನತ ಮನಸ್ಸಿನ ಬ್ರಿಟಿಷ್ ವ್ಯಕ್ತಿಗಳು ಪ್ರಭಾವಿತರಾಗಿರಬಹುದು. ಆದರೆ ಭ್ರಟಿಷ್ ಜನತೆ ಮಾತ್ರ  ದ್ವಿರುದ್ಧವಾಗಿದ್ದಾರೆ, ಸ್ವಾರ್ಥಿಗಳಾಗಿದ್ದಾರೆ. ಅವರ ಮೇಲೆ ನೈತಿಕತೆ ಯಾವ ಪ್ರಭಾವವನ್ನೂ ಬೀರಿಲ್ಲ.

ಈ ಸೋಲು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಗಳಿಸಲು ಆತ್ಮಶೋಧ ಮಾಡಿಕೊಳೃಬೇಕಾಗಿದೆ. ಕಾಂಗ್ರೆಸ್‌ನ ಒಂದು ವರ್ಗ ಮಹಾತ್ಮಾಗಾಂಧಿಯವರ ಹಾಗೂ ಸಂಪ್ರದಾಯಶೀಲರ ಸತ್ಯಾಗ್ರಹ ಮಾರ್ಗದಿಂದ ಹೊರಳಿ ಗ್ರಾಮೀಣ ಆರ್ಥಿಕ ಬದಲಾವಣೆಯ ನೆಲೆಯಲ್ಲಿ ಹೋರಾಟಕ್ಕೆ ಹೊರಳಬಹುದು. ಆದರೆ ಮತ್ತೊಂದು ತೀವ್ರವಾದಿ ವರ್ಗ ನಿರಾಶೆಯಿಂದ ಹೊಸ ತಾತ್ವಿಕ ನೆಲೆಯಲ್ಲಿ ನಿಂತು ಕಾಂಗ್ರೆಸ್ ಸಮಾಜವಾದಿ ಪಕ್ಷವಾಗಿ ಒಂದಾಗಿ ಕ್ರಿಯೆಗೆ ಸಜ್ಜಾಗುತ್ತಿದೆ.

ಸತ್ಯಾಗ್ರಹ ಸೋಲಿನ ನೋವು: ಈ ದೀರ್ಘ ಪ್ರಸ್ತಾವನೆಯ ನಂತರ ರೋಲಾ ಅವರ ದೃಷ್ಟಿಕೋನಗಳೇನು? ಯುನೈಟೆಡ್ ಫ್ರಾಂಟ್ ಒಡೆದು ಗಾಂಧೀಜಿಯವರ ಸತ್ಯಾಗ್ರಹದಿಂದ ಹೊರಳಿ ಹೊಸ ಚಳುವಳಿ ಪ್ರಾರಂಭವಾದರೆ ಆಗ ಏನಾಗಬಹುದೆಂದು ನಾನು ಕೇಳಿದೆ.

“ಗಾಂಧೀಜಿಯವರ ಸತ್ಯಾಗ್ರಹದಿಂದ ದೂರವಾದರೆ ಅದು ದುರದೃಷ್ಟ ನನಗೆ ದುಃಖವಾಗುತ್ತದೆ. ಮೊದಲ ಜಾಗತಿಕ ಯುದ್ಧದ ಕೊನೆಯಲ್ಲಿ ಇಡೀ ಪ್ರಪಂಚ ರಕ್ತದ, ದ್ವೇಷದ ಮಡುವಿನಲ್ಲಿ ಬಿದ್ದಿದ್ದಾಗ ಹೊಸ ಸಿದ್ಧಾಂತದೊಂದಿಗೆ ಗಾಂಧೀಜಿಯವರು ಹೊರ ಹೊಮ್ಮಿದರು. ಇಡೀ ಪ್ರಪಂಚಕ್ಕೆ ಅವರು ಹೊಸ ಭರವಸೆಯ ಬೆಳಕಾಗಿ ಬಂದರು”. ಎಂದು ರೋಲಾ ಅವರು ಹೇಳಿದಾಗ ನಾನು ನನ್ನ ಅನುಭವದಿಂದ ಹೇಳುತ್ತೇನೆ. ಈ ಭೌತಿಕ ಪ್ರಪಂಚಕ್ಕೆ ಗಾಂಧೀಜಿಯವರ ಮಾರ್ಗ ತಮಾಷೆಯಾಗಿದೆ. ಅವರು ರಾಜಕೀಯ ನಾಯಕಠಾಗಿ ಅವರ ವಿರೋಧಿಗಳೊಂದಿಗೆ ವ್ಯವಹರಿಸುವಾಗ ತೀರ ನೇರನಡೆಯವರಾಗಿದ್ದಾರೆ. ಒಂದು ವೇಳೆ ಸತ್ಯಾಗ್ರಹ ಸೋತರೆ ರಾಷ್ಟ್ರೀಯ ಅಂದೋಲನ ಬೇರೆ ಮಾರ್ಗದಲ್ಲಿ ಕ್ರಮಿಸುವುದರಲ್ಲಿ ರೋಲಾ ಅವರು ಆಸಕ್ತಿ ತಾಳುವರೆ? ಎಂದು. “ಏನೇ ಆದರೂ ರಾಷ್ಟ್ರೀಯ ಅಂದೋಲನ ಮುಂದುವರಿಯಬೇಕು” ಎಂದು ರೋಲಾ ಖಡಾ ಖಂಡಿತವಾಗಿ ಹೇಳಿ “ಭಾರತದ ಬಹಳಷ್ಟು ಯುರೋಪಿನ ಸ್ನೇಹಿತರು ನನಗೆ ಹೇಳಿರುವುದೇನೆಂದರೆ ನಾವು ಭಾರತ ಸ್ವಾತಂತ್ರ್ಯಕ್ಕೆ ಬೆಂಬಲಿಸುತ್ತಿರುವುದು ಪೂರ್ಣವಾಗಿ ಗಾಂಧೀಜಿವರ ಅಹಿಂಸಾ ತತ್ವಕ್ಕಾಗಿ” ಎಂದರು.

ಜೀವನದ ನಿಜಾಂಶಗಳು: ರೋಲಾ ಅವರು “ನಾನು ಅವರ ನಿಲುವನ್ನು ಒಪ್ಪುವುದಿಲ್ಲ. ಸತ್ಯಾಗ್ರಹ ಚಳವಳಿ ಸೋತರೆ  ವಿಷಾದಿಸುತ್ತೇನೆ. ಆದರೆ ಅದು ಸೋತದ್ದೆ ಆದರೆ ಜೀವನದ ನಿಜಾಂಶಗಳು ನೆಲೆ ಪಡೆಯಲೇ ಬೇಕು. ಆಗ ಅನ್ಯಮಾರ್ಗದಲ್ಲಿ ಸ್ವಾತಂತ್ರ್ಯ ಗಳಿಸುವುದನ್ನು ನಾನು ನೋಡಲಿಚ್ಚಿಸುತ್ತೇನೆ ಎಂದರು. ಅವರ ಆ ಉತ್ತರ ನನ್ನ ಹೃದಯಕ್ಕೆ ಸಾಂತ್ವನ ನೀಡಿತು. ಇಲ್ಲಿ ಒಬ್ಬ ಆದರ್ಶವಾದಿ ಇದ್ದಾನೆ. ಆತ ಗಾಳಿಯಲ್ಲಿ ಕೋಟೆ ಕಟ್ಟಲು ಇಚ್ಚಿಸುವುದಿಲ್ಲ. ಆತನ ಬೇರುಗಳು ನೆಲದಲ್ಲಿ ಆಳವಾಗಿ ನೆಟ್ಟಿವೆ. ಭಾರತದ ಸಂದರ್ಭದಲ್ಲಿ ಪೂರ್ಣ ವಿವರ ಗೊತ್ತಿಲ್ಲದ ಕಾರಣ ರೋಲಾ ಅವರು ಯಾವ ಸ್ಪಷ್ಪ ಅಭಿಪ್ರಾಯವನ್ನು ಕೊಡಲು ಸಾಧ್ಯವಾಗಲಿಲ್ಲ.

ಆರ್ಥಿಕ ಸಮಸ್ಯೆಗಳ ನಿಲುವು: ನಾನು ಮುಂದುವರೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಗಳಿಸುವಲ್ಲಿ ಸೋತರೆ, ಆಗ ಉಗ್ರವಾದಿಗಳು ರೈತರ ಹಾಗೂ ಕಾರ್ಮಿಕರ ಪರವಾಗಿ ಮುಂದೆ ಹೊರ ಹೊಮ್ಮಿದರೆ ಆಗ ರೋಲಾ ಅವರ ನಿಲುವು ಯಾವುದು? ಎಂದು ಕೇಳಿದೆ. ಅದಕ್ಕೆ ರೋಲಾ ಅವರ ಉತ್ತರ ಸ್ಪಷ್ಟವಾಗಿತ್ತು. “ಆರ್ಥಿಕ ಆಧಾರದ ಮೇಲೆ ಕಾಂಗ್ರೆಸ್ ಹೋರಾಟ ಮಾಡಬೇಕು. ನಾನು ಈಗಾಗಲೇ ಗಾಂಧೀಜಿಯವರಿಗೆ ಈ ಸಮಸ್ಯೆ ಕುರಿತು ನೀವು ಮನಸ್ಸು ಮಾಡಬೇಕೆಂದು ಕಾಗದ ಬರೆದಿದ್ದೇನೆ” ಎಂದರು.

ಅವರ ನಿಲುವನ್ನು ಕುರಿತು ಹೇಳುತ್ತಾ “ಒಂದು ಪಕ್ಷ ಕಾಂಗ್ರೆಸ್‌ನ ಒಳಗೆ ಒಡಕುಂಟಾದರೆ ನಾನು ಎರಡು ರಾಜಕೀಯ ಪಕ್ಷಗಳ, ಎರಡು ತಲೆಮಾರುಗಳ ನಡುವೆ ಆಯ್ಕೆ ಮಾಡಿಕೊಳ್ಳಲು ಇಚ್ಚಿಸುವುದಿಲ್ಲ. ಇದಕ್ಕಿಂತ ನನಗೆ ಮುಖ್ಯವಾದದ್ದು ಉನ್ನತ ಪ್ರಶ್ನೆಗಳು. ನನಗೆ ರಾಜಕೀಯ ಪಕ್ಷಗಳು ಮುಖ್ಯವಲ್ಲ. ನನಗೆ ಪ್ರಪಂಚದ ಕಾರ್ಮಿಕರ ಸಮಸ್ಯೆ-ಬಹಳ ಮುಖ್ಯವಾದುದು. ಮಾನವಸಮಾಜ ಮುಂದುವರೆಯಬೇಕಾದರೆ ಕಾರ್ಮಿಕ ಹಿತಾಸಕ್ತಿ ಅತಿಮುಖ್ಯ. ಇದರ
ಪರವಾಗಿರುವವರ ಪರ ನಾನಿರುತ್ತೇನೆ. ಅಲ್ಲಿ ಗಾಂಧಿಯಾಗಲೀ ಮತ್ತಾರೇ ಆಗಿರಲಿ ಮುಖ್ಯರಲ್ಲ. ಸಮಾಜವನ್ನು ನಿರ್ಮಿಸುವ ಕಾರ್ಮಿಕರು, ಶ್ರಮಜೀವಿಗಳು ಮುಖ್ಯ” ಎಂದರು. ಇದನ್ನು ಕೇಳಿ ನನಗೆ ಆನಂದವೂ, ಆಶ್ಚರ್ಯವೂ ಆಯ್ತು. ಕಾರ್ಮಿಕರ ಹಿತಕ್ಕೆ ಇಷ್ಟು ತೆರೆದ ಹೃದಯದಿಂದ ಮಾತನಾಡುವರೆಂದು ನಾನು ಭಾವಿಸಿರಲಿಲ್ಲ.

ದೀರ್ಘ ಚರ್ಚೆಯಿಂದಾಗಿ ಆಯಾಸವಾಗುತ್ತಿದ್ದುದನ್ನು ಗುರುತಿಸಿದೆ. ಅವರ ಅನಾರೋಗ್ಯ ಸ್ಥಿತಿಯ ಬಗ್ಗೆ ನನಗೆ ಅರಿವಿತ್ತು. ಆಗ ಟೀ ಕುಡಿಯೋಣ ಎಂದಾಗ ಸಮಾಧಾನವಾಯ್ತು. ಎಲ್ಲರೂ ಮತ್ತೊಂದು ಕೊಠಡಿಗೆ ಹೋದೆವು.

ಟೀ ಕುಡಿಯುತ್ತ ಯಾವ ಅಡಚಣೆಯೂ ಇಲ್ಲದೆ ನಮ್ಮ ಚರ್ಚೆ ಮುಂದುವರೆಯಿತು. ಎರಡೂವರೆ ಘಂಟೆಯ ಚರ್ಚೆಯಲ್ಲಿ ಅನೇಕ ಸಮಸ್ಯೆಗಳನ್ನು ಕುರಿತು ಚರ್ಚಿಸಿದೆವು. ಕಾಂಗ್ರೆಸ್ ಸಮಾಜವಾದಿ ಪಕ್ಷ ರಚನೆಯ ಬಗ್ಗೆ ರೋಲಾ ಅವರಿಗೆ ಆಸಕ್ತಿ ಮೂಡಿತು. ನೆಹರೂ ಮತ್ತು ಇತರ ನಾಯಕರ ನಿರಂತರ ಕಾರಾಗ್ರಹ ವಾಸದ ಬಗ್ಗ ಅವರ ಆಸಕ್ತಿ ಗಾಢವಾದುದು. ಗಾಂಧೀಜಿಯವರ ಬರಹ ಮತ್ತು ಭಾಷಣಗಳ ಬಗ್ಗೆ ಅವರಿಗಿದ್ದ ಆಸಕ್ತಿ ಆಶ್ಚರ್ಯಕರವಾದುದು. ಉದಾಹರಣೆಗೆ ಅವರ ಕಡತದಿಂದ ಒಂದು ಕಾಗದವನ್ನು ತೆಗೆದು ತೋರಿಸಿ ಗಾಂಧೀಜಿಯವರೆ ಸಮಾಜವಾದದ
ಬಗ್ಗೆ ಅವರಿಗಿದ್ದ ಸಹಾನುಭೂತಿಯನ್ನು ತೋರಿಸಿದರು. ಗಾಂಧೀಜಿಯವರ ಬಗ್ಗೆ ಹಾಗೂ ಅವರ ಚತುರತೆ ಬಗ್ಗೆ ದೀರ್ಘವಾಗಿ ಚರ್ಚಿಸಿದೆವು. ಗಾಂಧೀಜಿ ಆರ್ಥಿಕ ಸಮಸ್ಯೆ ಕುರಿತು ಸ್ಪಷ್ಟ  ನಿಲುವನ್ನು ತೆಗೆದುಕೊಳ್ಳುವುದಿಲ್ಲ ಎಂದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಬರುವ ಪ್ರಶ್ನೆಗಳಿಗೆ ಎಲ್ಲವೂ ಸುವರ್ಣಮಯ ಎಂದು ಅವರು ತಾತ್ಕಾಲಿಕವಾಗಿ ನಂಬುತ್ತಾರೆ. ಗಾಂಧಿಜಿಯವರ ನಾಯಕತ್ವದಲ್ಲಿ, ವ್ಯೂಹ ರಚನೆಯಲ್ಲಿ ಇರುವ ತಪ್ಪುಗಳ ಬಗ್ಗೆ ಹೊಸ
ಪೀಳಿಗೆಯವರ ಅಭಿಪ್ರಾಯವನ್ನು ಹೇಳಿದೆ. ಉದಾಹರಣೆಗೆ ತನ್ನ ನಿಲುವೇ ಸರಿ ಎನ್ನುವ ಅವರ ಮೊಂಡುವಾದ, ರಾಜಕೀಯ ಎದುರಾಳಿಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕೆನ್ನುವುದನ್ನು ವಿರೋಧಿಸುವುದು, ಬ್ರಿಟಿಷರ ಹೃದಯ ಪರಿವರ್ತಿಸುತ್ತೇನೆಂಬ ಅವರ ನಂಬಿಕೆಗಳು ಇತ್ಯಾದಿ. ಇವು ನಮಗೆ ತೃಪ್ತಿ ತಂದಿಲ್ಲ. ಇಡೀ ಪ್ರಪಂಚದಲ್ಲಿ ಭಾರತಕ್ಕೆ ಗಾಂಧೀಜಿಯವರ ಕೊಡುಗೆಯನ್ನು, ಭಾರತದ ಘನತೆಯನ್ನು ಹೆಚ್ಚಿಸುವುದರಲ್ಲಿ ವಹಿಸಿದ ಪಾತ್ರವನ್ನ ಅಲ್ಲಗಳೆ- ಯುವಂತಿಲ್ಲ. ಅವರೆ ನಾವು ನಮ್ಮ ಮಾತೃಭೂಮಿಯನ್ನು ಯಾವುದೇ ವ್ಯಕ್ತಿಗಿಂತ ಹೆಚ್ಚಾಗಿ ಪ್ರೀತಿಸುತ್ತೇವೆ ಎಂದೆ.

ಅಂತರ ರಾಷ್ಟ್ರೀಯತೆ: ನಿಮ್ಮ ಇಡೀ ಜೀವನದ ಹೋರಾಟ ಹಾಗೂ ಕಂಡುಕೊಂಡ ಸಿದ್ದಾಂತಗಳನ್ನು, ನಿಲುವುಗಳನ್ನು ಸಾರ ರೂಪದಲ್ಲಿ ಹೇಳಬಹುದೆ ಎಂಡು ನಾನು ಕೇಳಿದೆ. ಆ ಮೂಲಭೂತ ತತ್ವಗಳನ್ನು ಕುರಿತು ರೋಲಾ ಹೇಳಿದರು:-
* ಅಂತರ ರಾಷ್ಟ್ರೀಯತೆ -ಯಾವ ತಾರತಮ್ಯವೂ ಇಲ್ಲದೆ ಎಲ್ಲ ಜನಾಂಗಗಳಿಗೆ ಸಮಾನ ಹಕ್ಕುಗಳು. * ಶೋಷಣೆಗೆ ಒಳೆಗಾಗಿರುವ ಕಾರ್ಮಿಕರಿಗೆ ನ್ಯಾಯ- ನಾವು ಎಲ್ಲಿ ಶೋಷಕರು, ಶೋಷಿತರು ಇರುವುದಿಲ್ಲವೋ ಆ ಸಮಾಜವನ್ನು ಕಟ್ಟಬೇಕು. ಅಲ್ಲಿ ಎಲ್ಲರೂ ಎಲ್ಲರಿಗಾಗಿ ಕಾರ್ಮಿಕರೆ ಆಗಿರಬೇಕು. * ತುಳಿತಕ್ಕೆ ಒಳಗಾಗಿರುವ ಎಲ್ಲ ರಾಷ್ಟ್ರೀಯ ವಾದಗಳಿಗೂ ಸ್ವಾತಂತ್ರ್ಯ. * ಪುರುಷರಿಗಿರುವಂತೆ ಸ್ತ್ರೀಯರಿಗೂ ಸಮಾನ ಹಕ್ಕುಗಳು. ಇವುಗಳಲ್ಲಿ ಕೆಲವನ್ನು ಕುರಿತು ವಿಸ್ತರಿಸಿ ಮಾತನಾಡಲು ಇಚ್ಚಿಸಿದರು.

ಚರ್ಚೆ ಅಂತ್ಯಕ್ಕೆ ಬರುತ್ತಿದ್ದ ಕಾರಣ ನಿಮ್ಮ ಈ ಅಭಿಪ್ರಾಯಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಆಶ್ವರ್ಯವನ್ನುಂಟು ಮಾಡಬಹುದು ಎಂದೆ.

ಅದು ವಿದ್ಯುತ್ ಹರಿದಂತೆ ಅವರನ್ನು ಚಿಂತನೆಗೆ ಸೆಳೆಯಿತು. ಮೊದಲ ಜಾಗತಿಕ ಯುದ್ಧದ ನಂತರ ಅವರು ಹೊಸಸಮಾಜದ ನಿರ್ಮಾಣಕ್ಕಾಗಿ ಹಂಬಲಿಸುತ್ತಿದ್ದರು.

ರೋಲಾ ಅವರ ಇತ್ತೀಚಿನ ಚಿಂತನೆಗಳು:- ರೋಲಾ ಹೇಳಿದರು ನನ್ನ ಒಳಗಿನ ಹೋರಾಟಗಳು ವಿಸ್ತರಿಸಿಕೊಳ್ಳುತ್ತಿವೆ. ನ್ಯಾಯಯುತವೂ, ಮಾನವೀಯವೂ ಆದ ಸಮಾಜ ನಿರ್ಮಾಣಕ್ಕಾಗಿ ನಮ್ಮ ನಿಮ್ಮೆಲ್ಲರ ಪ್ರಯತ್ನಗಳು ನಡೆಯಬೇಕಾಗಿದೆ. ಹಾಗೆ ನಾವು ಮಾಡದೆಹೋದರೆ ಸಮಾಜ ಅಂತ್ಯಗೊಳ್ಳುತ್ತದೆ. ನಮ್ಮ ಹಳೆಯ ರೀತಿಯ ಗುಲಾಮರನ್ನಾಗಿಸುವ, ಶೋಷಣೆ ಮಾಡುವ ಸಮಾಜವನ್ನು ಪರಿವರ್ತಿಸಬೇಕೆಂದು ಇಡೀ ನನ್ನ ಜೀವನದಲ್ಲಿ ಯತ್ನಿಸುತ್ತಿದ್ದೇನೆ. ವಿಶ್ವ ಕಾಂಗ್ರಸ್‌ನಲ್ಲಿ ಇದೇ ನನ್ನ ಪಾತ್ರ. ಎಲ್ಲ ರಾಜಕೀಯ ಶಕ್ತಿಗಳು ಸರ್ವಾಧಿಕಾರದ ವಿರುದ್ಧ, ಯುದ್ಧದ ವಿರುದ್ಧ ನಿಲ್ಲಬೇಕು. ವಿಶ್ವ ಭಾತೃತ್ವವನ್ನು ಎತ್ತಿ ಹಿಡಿಯಬೇಕು. ಈ ನಿಟ್ಟಿನಲ್ಲಿ ಅಹಿಂಸಾ ಮಾರ್ಗದ ಚಳುವಳಿ ಮೈದಳೆಯುತ್ತಿರುವುಮ ಆಶಾದಾಯಕವಾಗಿದೆ. ಅದನ್ನ ನಾವು ಬಳಸಬೇಕು, ಬೆಳೆಸಬೇಕು.

ಆಗ ನಾನು ಕೇಳಿದೆ ನಿಮ್ಮ ಈ ವಿಚಾರಗಳನ್ನು ಪ್ರಪಂಚ ತಿಳಿದುಕೊಳ್ಳುವ ಬಗೆ ಹೇಗೆ? ಆಗ ರೋಲಾ ಹೇಳಿದರು. ಈ ನಿಟ್ಟಿಗೆ ನಾನು ಎರಡು ಕೃತಿಗಳನ್ನು ನೀಡಿದ್ದೇನೆ. ೧. ಹದಿನ್ಶೆದು ಪರ್ಷದ ಹೋರಾಟ  ೨.ಶಾಂತಿಗಾಗಿ ಕ್ರಾಂತಿಯ ಮಾರ್ಗ. ಇವೆ ಆ ಕೃತಿಗಳು, ಶಾಂತಿ, ಅಹಿಂಸೆ, ಸಹಕಾರ ಇವು ಹಳೆಯ ಬದುಕನ್ನು ಬದಲಾಯಿಸಲು  ಬೆಳಕುಗಳು ಎಂಬುದನ್ನ ಅವುಗಳಲ್ಲಿ ಚಿತ್ರಿಸುತ್ತಿದ್ದೇನೆ ಎಂದರು. ಬಹುಶಃ ಈ ಎರಡೂ ಕೃತಿಗಳು ಮನುಕುಲಕ್ಕೆ  ಪರಿಣಾಮಕಾರಿ ಯಾಗಿ ಪರಿಣಮಿಸಬಲ್ಲವು.

ಯೂರೋಪಿಗ ದೊಡ್ಡ ಅಪತ್ತು

ನಮ್ಮ ಚರ್ಚೆ ಹೆಚ್ಚು ಪ್ರಚಲಿತವಿದ್ದ ಯುರೋಪಿನ ಯುದ್ಧವನ್ನು ಕುರಿತು ಮಾತನಾಡದೆ ಮುಗಿಯಲಿಲ್ಲ. ತುಳಿತಕ್ಕೆ ಒಳಗಾಗಿರುವ ಜನರಿಗೆ ರಾಷ್ಟ್ರಗಳಿಗೆ ಕಳಂಕ ಕೇಡಲ್ಲ ಎಂದು ನಾನೆಂದೆ. ಅದಕ್ಕೆ ರೋಲಾ ಅವರು ಆದರೆ ಯುರೋಪಿಗೆ ಯುದ್ಧ ದೊಡ್ಡ ವಿಪತ್ತಾಗಿದೆ. ಅದು ಕಡೆಗೆ ನಾಗರೀಕತೆಯನ್ನೇ ನಾಶಮಾಡಿಬಿಡುತ್ತದೆ. ರಷ್ಯಾಕ್ಕೆ  ಅನಿವಾರ್ಯ ಅಗತ್ಯವಾಗಿದೆ. ಏಕೆಂದರೆ ಅದರ ಸಾಮಾಜಿಕ ಪುನರ್ ನಿರ್ಮಾಣಕ್ಕೆ ಶಾಂತಿಯ ಮಾರ್ಗ ಅತ್ಯುಪಕಾರಿ.

ನಾನು ಅವರನ್ನು ಬೀಳ್ಕೊಳ್ಳುವ  ಅವರ ಸೌಜಸ್ಮಕ್ಕೆ ಹಾಗೂ ಅವರು ವ್ಯಕ್ತಪಡಿಸಿದ ಚಿಂತನೆಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಿದೆ. ಅವರು ಭಾರತದ ಬಗ್ಗೆ, ಭಾರತದ ಧ್ಯೇಯದ ಬಗ್ಗೆ ಒಳಗೊಂಡಿರುಪ ಮೌಲ್ಯಗಳ ಬಗ್ಗೆ  ಅತ್ಯಾಶ್ವರ್ಯವಾಯ್ತು.

ನಾನು ಅವರ ಮನೆಯಿಂದ ಹೊರ ಬಂದಾಗ ಸರೋವರದ ಮೇಲೆ ಸೂರ್ಯನ ರಶ್ಮಿಗಳು ಪ್ರತಿಫಲಿಸುತ್ತಿದ್ದವು. ನಮ್ಮ ಸುತ್ತ ಹಿಮ ಆವರಿಸಿದ ಪರ್ವತಗಳು ಸೌಂದರ್ಯದಿಂದ ಕಂಗೊಳಿಸುತ್ತಿವು. ಬೀಸುವ ಗಾಳಿ ಆನಂದದಾಯಕವಾಗಿತ್ತು. ಈ ಮಹಾನ್ ಚಿಂತಕ ಭಾರತದ ಹಾಗೂ ಭಾರತದ ಸ್ವಾತಂತ್ರ್ಯದ ಪರ ನಿಲ್ಲುವರೆಂಬ ಭರವಸೆ ನನ್ನಲ್ಲಿ ಮೂಡಿತ್ತು. ಆ ಒಂದು ಭಾವನೆಯಿಂದ ಸಂತಸ  ವ್ಯಕ್ತಿಯಾಗಿ ನಾನು ಜಿನೀವಾಕ್ಕೆ ಹಿಂದಿರುಗಿದೆ.
-೨೦೦೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಕ್ಷಗಾನ ಹಿಮ್ಮೇಳ
Next post ಏನೊ ಏನೋ ಕೇಳಿದಂಗಾಯ್ತು

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…