ಪ್ರಣಾಳ ಶಿಶುಗಳಿಂದರೆ ಗಾಜಿನ ಬಾಟಲಿಗಳಲ್ಲಿ ಸ್ತ್ರೀ ಅಂಡಾಣು ಗಂಡಿನ ಅಂಡಾಣುಗಳನ್ನು ಗರ್ಭಕೋಶದ ಹೊರಗೆ ಫಲೋತ್ಪತ್ತಿ ಮಾಡಿ, ಭ್ರೂಣವನ್ನು ಉಂಟುಮಾಡಿ ಶಿಶುಗಳನ್ನು ಪಡೆಯಲಾಗುವುದಕ್ಕೆ ಪ್ರಣಾಳ ಶಿಶು ಎಂದು ಕರೆದರೂ ಸಹ ಈ ವಿಜ್ಞಾನವು ಈ ಮಾನವನಿಗೆ ಎಟಕಲಿಕ್ಕಿಲ್ಲವೆಂದು ವಿಜ್ಞಾನಿಗಳೇ ಅಭಿಪ್ರಾಯಪಡುತ್ತಾರೆ.
ವಾಸ್ತವವಾಗಿ ಹೆಣ್ಣಿನ ಅಂಡಾಣುಗಳನ್ನು ಗಂಡಿನ ವೀರ್ಯಾಣುಗಳೊಂದಿಗೆ ಒಂದು ಗಾಜಿನ ಪಾತ್ರೆಯಲ್ಲಿ ಫಲೋತ್ಪಾದನೆ ಮಾಡಿ ಸಾಮಾನ್ಯ ಗರ್ಭಧಾರಣೆಯಂತೆ ಮಗುವು ಬೆಳೆಯಲು ತಾಯಿಯ ಗರ್ಭಕೋಶದೊಳಕ್ಕೆ ಇದನ್ನು ಇಡಲಾಗುವುದು. ಭ್ರೂಣವು ಆ ಗರ್ಭಕೋಶದಲ್ಲಿ ೯ ತಿಂಗಳು ಬೆಳವಣಿಗೆ ಹೊಂದಿ ನಂತರ ಜನಿಸುತ್ತದೆ. ಇಂತಹ ಮಗುವಿಗೆ (ಮಾತ್ರ) ಇಂದು ಪ್ರಣಾಳ ಶಿಶು ಎನ್ನಲಾಗುತ್ತದೆ. ಪ್ರತಿ ಹತ್ತು ಹೆಂಗಸರಲ್ಲಿ ಒಬ್ಬರು ಬಂಜೆಯಾಗಿರುತ್ತಾರೆಂದು ತಜ್ಞರ ಅಭಿಪ್ರಾಯ. ಸಾಮಾನ್ಯವಾದ ಕಾರಣವೇನೆಂದರೆ ಅಂಡಕೋಶಗಳಿಂದ ಗರ್ಭಕೋಶಕ್ಕೆ ಇರುವ ಮಾರ್ಗದಲ್ಲಿನ ಎರಡು ಅಂಡಾಶಯದ ನಾಳಗಳು
ತಡೆಯಲ್ಪಡುತ್ತವೆ. ಇಂತಹ ಸಂದರ್ಭಗಳಲ್ಲಿ ಗಂಡಿನ ವೀರ್ಯಾಣುವು ಹೆಣ್ಣಿನ ಅಂಡಾಣುವನ್ನು ತಲುಪುವುದಿಲ್ಲವಾದ್ದರಿಂದ ಗರ್ಭಧಾರಣೆ ಸಾಧ್ಯವಿಲ್ಲ ಆಗ ಆ ಹೆಣ್ಣು ಬಂಜೆಯಾಗುತ್ತಾಳೆ. ಆಗ ಇಂಥವರು ಮೂಢ ನಂಬಿಕೆಗಳಿಗೆ ಬಲಿಯಾಗುತ್ತಾರೆ. ಮರ ಸುತ್ತುವುದು, ದೇವರಿಗೆ ಹರಕೆ ಹೊರುವುದು, ನಾಗರಪ್ರತಿಷ್ಠೆ ಮಾಡುವುದು, ಉರುಳುಸೇವೆ ಮಾಡುವುದು, ನವಗ್ರಹ ಪೂಜೆ, ತೀರ್ಥಯಾತ್ರೆ ದೇವರ ತೀರ್ಥವನ್ನು ತಲೆಯ ಮೇಲೆ ಪೂಜಾರಿಗಳಿಂದ ಕೊಡಗಟ್ಟಲೆ ಹಾಕಿಸಿಕೊಳ್ಳುವುದನ್ನೂ ಮಾಡಲಾಗುತ್ತದೆ. ಬಂಜೆಯಾದವಳು ಅಶುಭದ ಸಂಕೇತವೆಂದು ಜರಿಯುತ್ತಾರೆ. ಹೀಗೆಲ್ಲ ಮಾಡುವುದರಿಂದ ಮಕ್ಕಳಾಗದಿದ್ದರೆ ಜಗತ್ತಿನಲ್ಲಿ “ಬಂಜೆ” ಎಂಬ ಪದವೇ ಇರುತ್ತಿರಲ್ಲಿಲ್ಲ. ಪ್ರಾಪ್ತ ವಯಸ್ಕಳಾಗುವ ಹೆಣ್ಣಿನ ಹಾರ್ಮೋನುಗಳಲ್ಲಿ ಉಂಟಾಗುವ
ವ್ಯತ್ಯಾಸಗಳಿಂದ ನಾಳಗಳು ತಡೆಯಲ್ಪಡುತ್ತವೆ ಎಂಬ ವಾಸ್ತವವನ್ನು ನಮ್ಮ ಗ್ರಾಮೀಣ ಜನ ಅರಿಯುವುದೇ ಇಲ್ಲ.
ಕೊನೆಗೊಂದು ದಿನ ಈ ಪ್ರನಾಳ ಶಿಶುವಿನ ಜನನದ ಸಂಶೋಧನೆಯನ್ನು ಶರೀರ ವಿಜ್ಞಾನಿ ರಾಬರ್ಟ್ ಎಡ್ವರ್ಡ್ ಮತ್ತು ಪ್ರಸೂತಿ ಶಾಸ್ತ್ರಜ್ಞ ಪ್ಯಾಟರಿಕ್ ಎಂಬ ಬ್ರಿಟಿಷ್ ತಂಡವು ವರ್ಷಗಳ ಪ್ರಯೋಗದ ನಂತರ ಯಶಸ್ಸು ಪಡೆಯಿತು. ಹೆಂಗಸಿನಿಂದ ಆಂಡಾಣುಗಳನ್ನು ಹೊರತೆಗೆದು ಒಂದು ಗಾಜಿನ ಪಾತ್ರೆಯಲ್ಲಿ ಜೀವಂತವಾಗಿಟ್ಟು ಗಂಡಿನ ವೀರ್ಯಾಣುಗಳ ಜೊತೆಯಲ್ಲಿ ಗರ್ಭಧಾರಣೆ ಮಾಡಿಸಿ ನಂತರ ಹೆಂಗಸಿನ ಗರ್ಭಕೋಶದೊಳಕ್ಕೆ ಸ್ಥಾಪಿಸುವಂತಹ
ವಿಧಾನವಮ್ನ ಇವರು ಕಂಡು ಹಿಡಿದರು. ೧೯೭೮ರಲ್ಲಿ ಈ ಸಂಶೋಧಕ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಸಫಲರಾದರು. ಒಂದು ಅಂಡಾಣುವಿನ ಜೊತೆಯಲ್ಲಿ ಒಂದು ವೀರ್ಯಾಣುವು ಫಲೋತ್ಪಾದನೆಯಾಗುವ ವಿಧಾನಕ್ಕೆ ಇನ್ ವಿಟ್ರೋ ಗರ್ಭಧಾರಣೆ ವಿಧಾನ ಎಂದು ಹೆಸರು. ಗರ್ಭನಾಳವು ತುಂಬ ಕಿರಿದಾಗಿರುವ ಹೆಂಗಸರಿಗೆ ಮಾತ್ರವಲ್ಲದೇ ತನ್ನ ಗಂಡನ ಬೀಜಾಣುಗಳಲ್ಲಿ ಸಾಕಷ್ಟು ಶಕ್ತಿ ಇಲ್ಲದಿರುವಂತಹ ಸ್ಥಿತಿಯಲ್ಲಿ ಕೂಡ ಈ ವಿಜ್ಞಾನದಿಂದ ಮಗುವನ್ನು
ಪಡೆಯಬಹುದು. ಆದರೆ ಆ ಹೆಂಗಸಿನ ಗಂಡನ ವೀರ್ಯಾಣುವಿನಿಂದಲ್ಲದೇ ಬೇರೆ ಗಂಡಸಿನ ವೀರ್ಯಾಣುವಿನೊಂದಿಗೆ ಅಂಡವು ಫಲೋತ್ಸದಿಸಿದರೆ ಆಗ ಸಾಮಾಜಿಕ, ನೈತಿಕ, ಕಾನೂನಿನ ತೊಂದರೆಗಳು ಉದ್ಭವಿಸಬಹುದೆಂಬ ಕಾರಣವು ಸಮಾಜ ನೀತಿಯಾಗಿದೆ.
ಗರ್ಭಧರಿಸಿದ ಅಂಡವನ್ನು ದ್ರವ ಸಾರಜನಕ ಉಷ್ಟತೆಯಲ್ಲಿ ಕಾಪಾಡಿ ಇಡಲಾಗುತ್ತದೆ. ಬೇಕೆನಿಸಿದಾಗ ಅವುಗಳನ್ನು ಹೆಂಗಸಿನ ಗರ್ಭಕೋಶದಲ್ಲಿ ಇಡಲಾಗುತ್ತದೆ. ಇದು ಮುಂದುವರೆದ ಸಂಶೋಧನೆಯಾಗಿದ್ದು ದುಬಾರಿ ಖರ್ಚಿನ ಕೆಲಸವಾಗಿದೆ. ಇದಕ್ಕಾಗಿ ಬೇರೆ ಹೆಂಗಸಿನ ಗರ್ಭಕೋಶದಲ್ಲಿ ಬೆಳೆಸಿ, ಮಗುವನ್ನು ಹೆತ್ತು ಕೊಡುವ ಬಾಡಿಗೆ ತಾಯಂದಿರೂ ಇದ್ದಾರೆ. ಅತಿ ಹೆಚ್ಚಿನ ಬಾಡಿಗೆ ಶುಲ್ಕವನ್ನು ಬೇಡಿಕೆಯ ಮೇರೆಗೆ ಬದಲಿ ತಾಯಂದಿರನ್ನು ಬಾಡಿಗೆ ಕೊಡುವ
ಸಂಸ್ಥೆಗಳೂ ಇವೆಯಂತೆ.
ಗಂಡನಲ್ಲಿ ತಾಯಿಯಲ್ಲಿ ನ್ಯೂನ್ಯತೆಗಳಿದ್ದು ಎಂದಿಗೂ ಮಕ್ಕಳಾಗುವುದಿಲ್ಲ ಎಂಬ ವಾದಕ್ಕೆ ವಿಜ್ಞಾನವು ಇಂತಹ ಪ್ರಣಾಳ ಶಿಶುಗಳ ಕೊಡುಗೆಯನ್ನು ನೀಡಿದೆ. ಇದು ನಮ್ಮ ದೇಶಕ್ಕೆ ವ್ಯಾಪಕವಾಗಿ ಇನ್ನೂ ಬಂದಿರುವುದಿಲ್ಲ.
*****
ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು