Home / ಕವನ / ಕವಿತೆ / ನಾಟ್ಯ ಶಾಲೆ

ನಾಟ್ಯ ಶಾಲೆ

ಒಂದು ಕ್ಷ್ನಣವಾದರೂ ಬಗೆದೆ ಯಂತ್ರಾಗಾರವದು ನರಕವೆಂದು.
ಎಣಿಸಲಾರೆನರೆನಿಮಿಷ ಸಹ ನಾಟ್ಯಶಾಲೆಯಿದು ಸ್ಪರ್ಗವೆಂದು.
ಇಂದ್ರನ ರಾಜ್ಯವಿದಲ್ಲ,-ಇಂದ್ರಿಯಗಳ ರಾಜ್ಯವಿದು,
ಮಿಟಿಮಿಟಿ ಸ್ವರ್ಗ, ತ್ರಿಶಂಕುವಿನಮರಪುರಿ!
ದಾರಿ ತಪ್ಪಿ ನಡೆದ ಮಾನವನು ಮೇರೆದಪ್ಪಿ ಹೆಜ್ಜಿಯಿಕ್ಕಿ
ಸುಖವ ದೊರಕಿಸಲೆಂದು ಹೂಡಿರುವ ಮೋಸವಿದು,-ಆತ್ಮವಂಚನೆಯೆಲ್ಲ!
ಮೇನಕೆಯ ರಂಗಭೂವಿಯಿದು: ಎಚ್ಚರಿಕೆ! ಜೀವವೆ!

‘ರಾತ್ರಿ’ಯೆಂಬ ಹೆಸರಾಂತು ಬಣ್ಣ ಬಡೆದುಕೊಂಡು
ಗಂಡಿನೊಡನೆ ಬತ್ತಲೆಗುಣಿತವ ಕುಣಿವ ಹೆಣ್ಣೆ!
ತಿಳಿದಿಲ್ಲ ನೀನು ರಾತ್ರಿಯದೆಂಥ ಧಾತ್ರಿಯೆ೦ಬುದನು.
ಮುಗಿಲಿನಲ್ಲಿ ನಕ್ಷತ್ರಗಳಕ್ಷೋಹಿಣಿಯನಾಡಿಸುವ ಮಾತಾಯಿಯ ನೋಡು!
ಸಮುದ್ರವೆರಗುವದು ಬಂದವಳಡಿಗೆ;
ಕಾಲಿಡು ಹಡಗದ ಹೊರಗೆ. ತೆರೆಗಳು ತರಿದೊಗೆಯುವವು ನಿನ್ನನ್ನು ಹಿಂಡಿ.
ಮೈಮುಚ್ಚುವ ಬದಲು, -ತೆರೆಯುವ ಕಾಳಿಂದಿ ಸೀರೆಯೊಂದನುಟ್ಟು
ಅದರಂಚಿಗೆ ನಾಲ್ಕು ಮುತ್ತುರತುನಗಳ ಹೊಂದಿಸಿ
ಕ್ಷಯ ಹತ್ತಿದ ಚಂದ್ರನಂತೆ ಬಣ್ಣವೇರಿದ ಮೊಗೆ ತೋರಿಸಿದಲ್ಲಿ
ರಾತ್ರಿಯಾದೆಯಾ ನೀನು? ಅಪರಾತ್ರಿ! ತೊಲಗಿಲ್ಲಿಂದ!

ನೂರು ದಿವಸ ಒಳಿತಾಗಿ ಬಾಳಿ ಮೂರು ದಿವಸ ಹೋಳಿಯಾಡಿದಂತೆ
ಒಂದು ದಿವಸದ ಮೋಜಿಗಾಗಿ ನಿರ್ಮಿತವಾದ ನಾಟ್ಯಪದ್ಧತಿಯಿದು
ಒಲಿಯುತಿದೆ,- ಕೊಳೆಯುತಿಹನು ಮಾನವನದರ ಗೋಜಿಗೆ ಹೋಗಿ.
ಸಮಾಜವೆಲ್ಲ ನಾಟ್ಯಶಾಲೆಯಾಗಿ ಸಂಸಾರವೆ ವಿರಳವಾಗಿದೆಯೀಗ.
ದಿನದ ಬಾಳೆಲ್ಲ ಹೋಳಿಯಾಗುತಿದೆ, ಪ್ರೇಮವು ಕಾಮವಾಗುತಿದೆ.
ಗಂಡಾದರೆ ಸಾಕು ಗಂಡನವ! ಹೆಣ್ಣಾದರೆ ಸಾಕು! ಹೆಂಡತಿಯವಳು!
ಇಲ್ಲಿಗಿಳಿದಿದೆ ಸಂಕರ: ಇದಕಿಂತ ಭಯಂಕರವೇನು?
ಮನೆಗೊಂದು ರಾಮಾಯಣವಿರಲು, -ಬರೆಯುವನೆಂತು ನವವಾಲ್ಮೀಕಿ?
ಓಣಿಗೊರ್ವ ಅಹಲ್ಯೆಯಿರಲು,-ಉದ್ದರಿಸುವನೆಂತು ಪತಿತಪಾವನ!
ತುಂಬುತಿದೆ ಕೊಡ, ಹೊಮ್ಮುತಿದೆ ಗಾನ,-ಒತ್ತರಿಸುತಿದೆ ನಾಟ್ಯ:
ಜಗವೆಲ್ಲ ಭ್ರಮಿಸಿ ಬೇಸತ್ತು ಮತ್ತಾತ್ಮ ಹತ್ಯಕಣಿಗೊಂಡು
ಔತಣವನೀಯುತಿದೆ ಪ್ರಳಯಾಗ್ನಿ ಪುರುಷನಿಗೆ!
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...