ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಹೊಸದೊಂದು ಭಯಂಕರ ಮಾಹಿತಿಯೊಂದನ್ನು ಹೊರಗಡೆವಿದ್ದು ಭವ್ಯ ಭಾರತದಲ್ಲಿಂದು- ಒಟ್ಟು ೧೮೬೬ ನೋಂದಾಯಿತ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆಂದು ಅಧಿಕೃತವಾಗಿ ಘೋಷಿಸಿರುವುದು.
ಕಳೆದ ವರ್ಷ ೨೦೧೪ ಮಾರ್ಚಿನಿಂದ ೨೦೧೫ರ ಜುಲೈವರೆಗೆ ಹೊಸ ಹೊಸ ೨೩೯ ರಾಜಕೀಯ ಪಕ್ಷಗಳೂ ನೋಂದಣಿ ಮಾಡಿಕೊಳ್ಳುವ ಮೂಲಕ ಒಟ್ಟು ಸಂಖ್ಯೆ ೧೮೬೬ ಕ್ಕೇರಿದೆ!
ಈ ಪೈಕಿ ೫೬ ಪಕ್ಷಗಳು ರಾಷ್ಟ್ರೀಯ ರಾಜ್ಯ ಮಟ್ಟದಲ್ಲಿ ಗುರ್ತಿಸಿಕೊಂಡವುಗಳು. ಆದರೆ ಉಳಿದುವುಗಳು ಮಾನ್ಯತೆ ಪಡೆದಿರದ ಆದರೆ ನೋಂದಾಯಿತ ಪಕ್ಷಗಳು ಎಂದು ಆಯೋಗ ಸ್ಪಷ್ಟಪಡಿಸಿದೆ.
೨೦೧೪ರ ಮಾರ್ಚ್ ೫ ರಂದು ಲೋಕಸಭಾ ಚುನಾವಣೆ ಪ್ರಕಟವಾದ ನಂತರ ೨೬ ಹೊಸ ಪಕ್ಷಗಳು ನೋಂದಣಿ ಮಾಡಿಕೊಳ್ಳುವ ಮೂಲಕ ೧೬೨೭ ನೋಂದಾಯಿತ ರಾಜಕೀಯ ಪಕ್ಷಗಳಾದವು ಎಂದು ಆಯೋಗ ಖಚಿತ ಪಡಿಸಿದೆ.
ಈಗಾಗಲೇ ನೋಂದಣಿಯಾದರೂ ಸಕ್ರಿಯವಲ್ಲದ ಈ ಪಕ್ಷಗಳು ಸ್ವಂತ ಚಿನ್ಹೆಯೊಂದಿಗೆ ಸರ್ಧಿಸುವಂತಿರಲಿಲ್ಲ. ಅಂತಹ ಆಶಯವೂ ಅವುಗಳಿಗಿರಲಿಲ್ಲ. ಹಾಗಾಗಿ ಆಯೋಗ ಬಿಡುಗಡೆ ಮಾಡಿದ ಸ್ವತಂತ್ರ ಚಿಹ್ನೆಯ ಪಟ್ಟಿಯಿಂದ ಯಾವುದಾದರೊಂದನ್ನು ಆಯ್ದುಕೊಂಡು ಅವು ಸ್ಪರ್ಧಿಸಬೇಕಿತ್ತು. ಆಯೋಗದಲ್ಲಿ ಅಂತಹ ೮೪ ಚಿನ್ಹೆಗಳು ಲಭ್ಯ ಎಂದೂ ಕುತೂಹಲಕಾರಿ ಅಂಶವನ್ನು ಚುನಾವಣಾ ಆಯೋಗ ವಿವರಿಸಿದೆ.
ಚಪ್ಪಲಿಗಳು, ಬಲೂನ್, ಕಪಾಟ, ಹವಾನಿಯಂತ್ರಕ, ತೆಂಗಿನಕಾಯಿ, ಕಿಟಕಿ, ನೆಲಹಾಸು, ಬಾಟಲಿ, ಬ್ರೆಡ್… ಇವೆಲ್ಲ ಆಯೋಗವು ಬಿಡುಗಡೆ ಮಾಡಿರುವ ಈ ಉಚಿತ ಚಿಹ್ನೆಗಳ ಪಟ್ಟಿಯಲ್ಲಿ ಕೆಲವಾಗಿರುತ್ತವೆಂದು ತಿಳಿಸಿರುವರು.
ರಾಜಕೀಯ ಪಕ್ಷವೊಂದು ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು “ಮಾನ್ಯತೆ ಪಡೆದ” ಎಂದು ಗುರ್ತಿಸಿ ಕೊಳ್ಳಬೇಕಾದರೆ ಆಯೋಗವೇ ನಿಗದಿಪಡಿಸಿದ ಕೆಲವು ಮಾನದಂಡಗಳಿವೆ! ಸತತ ಐದು ವರ್ಷಗಳ ಕಾಲ ಅದು ಚಟುವಟಿಕೆಗಳಿಂದ ಕೂಡಿರಬೇಕು. ಇಲ್ಲವೇ ಚುನಾವಣೆಯಲ್ಲಿ ಯಾವುದೇ ವಿಧಾನಸಭಾ- ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಒಟ್ಟು ಮತಗಳಲ್ಲಿ ಕನಿಷ್ಠ ಶೇಕಡ ೪% ರಷ್ಟಾದರೂ ಮತಗಳನ್ನು ಗಳಿಸಲೇಬೇಕು.
ಈ ತನಕ ಬಿಜೆಪಿ – ಬಿಎಸ್‌ಪಿ- ಕಾಂಗ್ರೆಸ್, ಸಿಪಿಐ, ಸಿಪಿಎಂ, ಎನ್‌ಸಿಪಿಗಳು ರಾಷ್ಟ್ರೀಯ ಪಕ್ಷಗಳೆಂದು ಗುರ್ತಿಸಿಕೊಂಡಿದೆ. ಆದರೆ ದೇಶದಲ್ಲಿ ಒಟ್ಟು ೫೦ ಮಾನ್ಯತೆ ಪಡೆದ ಪಕ್ಷಗಳಿವೆಯೆಂದು ಚುನಾವಣೆ ಆಯೋಗವು ಖಚಿತಪಡಿಸಿದೆ.
*****

















