Home / ಕವನ / ಕವಿತೆ / ರತ್ನನ್ ಮಾತು

ರತ್ನನ್ ಮಾತು

ನಿನ್ ಕೈ ಕೆಳಗ್ನೋನ್ ನಾನ್ ಅಂದಾಕ್ಸ್ನೆ
‘ಲೋ’ ಅಂತ್ ಏಳ್ ಅನ್ಬೇಕ?
‘ಅಪ್ಪ ಅಣ್ಣ’ ಅನ್ನೋದ್ ಬುಟ್ಟಿ
ದೊಡ್‌ಗಿಡ್‌ತನ ಮೂಲೇಗ್ ಇಟ್ಟಿ
ತಿಳದೋನೇನೆ ಯಿಂಗಂತ್ ಅಂದ್ರೆ
ಮೆಚ್ಕಂತೈತ ಲೋಕ? ೧

ಮೂರ್‍ನೆಯೋನ್ಗೆ ಚಿಕ್ಕೋನ್ ಮಾಡಿ
ದೊಡ್ಮನಸಾದೇಂತ್ ತಿಳದಿ
ಮೋಸ್ ಓಗ್ಬೇಡ. ಚಿಕ್ದು ದೊಡ್ದು
ವೋಗೋದೆಲ್ಲಾ ನಸೀಬ್ ಯಿಡ್ದು!
ಆರ್‍ಕಾಸ್ ರೂಪಾಯ್ ಆಗೋಗ್ತೈತೆ
ಕೊಟ್ರೆ ಸುಣ್ಣ ಬಳದಿ? ೨

ನಸೀಬ್ ಒಂದು ಬಸೀತಾನಿದ್ರೆ
ಮನ್ಸ ದೇವ್ರ್ ಆಗ್ತೌನೆ!
ಕಂಡಿದ್ ನೀರೂ ಯೆಂಡಾಗ್ತೈತೆ!
ಬತ್ಕೊಂಡ್ ವೊಟ್ಟೆ ಗುಂಡಾಗ್ತೈತೆ!
ನಸೀಬ್ ಏನ್ರ ಕೋಟಾ ಆದ್ರೆ
ಎಲ್ಲಾರ್ ಬೆನ್ನೂ ಗೂನೆ! ೩

ತಾಬೇದಾರಿ ಒಂದ್ ಸುಡಗಾಡು!
ಮನ್ಸನ್ ಮಣ್‌ ಮಾಡ್ತೈತೆ!
ತಾಬೇದಾರ್ರು ಮೇಲ್ನೋರ್ ಎದರು
ಯಿಂಗ್ ಅನ್ಬಾರ್‍ದು. ಗೊತ್ತು. ಆದ್ರೂ
ನರಮನ್ಸಾನ್ನೋನ್ ಸೈಸೋಕೂನೆ
ಮಿತಿ ಅಳತೆ ಐತೆ! ೪

ದೊಡ್ಡೋನ್ ನೀನು ಚಿಕ್ಕೋನ್ ನಾನು
ಇದೂ ಇರಬೌದ್, ಯೋಳ್ಕೊ;
ಆದ್ರೂನೂನೆ ‘ಚಿಕ್ಕೋನ್ ನೀನು’
ಅಂತೇಳಂತ ಮೂರೊತ್ತೂನು
ಮೊಟಕೋದ್‌ ಮಾತ್ರ ದೊಡ್ತನಾಲ್ಲ-
ಅನ್ನೊದ್ ಚೆಂದಾಗ್ ತಿಳ್ಕೊ! ೫

ತಿಳದೊರ್‍ಗ್ ಇಂಗೇಂತ್ ಯೋಳಾಕ್ ನಾನ!
ಕುಡಕ! ಅಳ್ಳಿ ಮುಕ್ಕ!
ನನಗೇನ್ ಅಂತ ಜಂಬಾನಿಲ್ಲ.
ಆದ್ರೂನೆ ನನಗಿರೋದೆಲ್ಲ-
ತಿಳದೋರ್‍ಗೂನೆ ಮಂಕ್ ಮುಚ್ಕೋಂತ
ಅನ್ನೊದ್ ಒಂದೇ ದುಕ್ಕ! ೬
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...