Home / ಕವನ / ಕವಿತೆ / ಬೇರೊಬ್ಬರ ಮಕ್ಕಳಿಗಾಗಿ

ಬೇರೊಬ್ಬರ ಮಕ್ಕಳಿಗಾಗಿ

ಮೋರೆ ಮರೆಯಾಯ್ತಿನ್ನು ಮೇಲೆ, ಕಣ್ಣುಗಳೆಂತು
ಯಾರಿಗೂ ಮೋಹನವ ಮಾಡಲಾಪವು! ಕಂದ
ಕಾರಿಬಾರಿಗಳಂತೆ ಸರಿಮಾಡಿದ ಸುಖವು
ಎಲ್ಲಡಗಿತೀಗ ಎಲ್ಲ?

ನಾರಾಯಣಾ ! ಅಹಹ ! ಎಂಥ ಕೋಮಲ ಜೀವ!
ವಾರಿಜದವೋಲ್ ಮಂಜಿನಿಂದ ಮರಣವು ಬಂತೆ !
ಪಾರಿಜಾತದ ಹೂವಿನಂತೆ ಮುಟ್ಟಿದ ಒಡನೆ
ಬಾಡಿ ಅಸು ಬಿಟ್ಟಿತಲ್ಲೆ !

ನೀಟುಗಾರರನೆಲ್ಲ ನಾಡೆ ನಾಚಿಸುವಂಥ
ಮಾಟಮಾಡುವ ಕಣ್ಣು, ಮಾಟವಾಗಿಹ ಮೊಗವು
ಚಾಟು ವಚನಗಳಿಂದ ಬೇಟ ಮನವನು ಮರುಳು-
ಮಾಡಿ ಗಡ ಒಡನೆ ಕೂಡಿ

ಓಟದಿಂ ನೋಟದಿಂ ಚಾಪಲ್ಯವಂ ತೋರಿ
ತಾಟಿನಿಂದಾಟದಿಂ ಜಿಂಕೆಗೂ ಮೀಟಾಗಿ
ನಾಟಕದವೋಲ್ ತಾಸಿನೊಳು ತೀರಿಹೋದೆಯಾ?
ಹಾಯ್‌ಹಾಯ್‌ಸಾವ ಸೊಗಸೆ !

ಇಂಥ ಮರಣದ ಹಾಡು, ಮೇಲೆ ಕೇಳ್ವುದು ನಾರಿ-
ಯಂಥ ಕರುಣೆಯ ಹೃದಯ, ಇನ್ನು ಅದಕ್ಕೂ ಹೆಚ್ಚು
ಕಂಠಿಯೊಳಗಿನ ಹವಳದಂತಿರುವ ಕರುಳೆರಡು
ಕಳಕೊಂಡ ತಾಯಿ ಕೇಳೆ

ಅಂತರಂಗಕೆ ಬೆಂಕಿಹತ್ತಿ ಹರಿದಿತು ಚಿತ್ತ
ಕಂಠದೊಳಗಿಂಧೊರಟ ಕಂಬನಿಯು ಕಣ್ಣಿನೊಳು
ಕುಂಠಿತಂ ಆಗೆ, ಕಣ್ ಬಿರಿಬಿರಿಯೆ ಬಿಟ್ಟು ನಿಟ್ಟು-
ಸರಿ ಕಿವಿಗೊಟ್ಟಳಾಗ್ಗೆ
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...