ಅರಸಿ ತೀರದೊಲಾಸೆ ಕೆರಳೆ ನಾ ನಿಂತಿರುವೆ
ಮಲೆದೇಗುಲದ ಹೊರಗೆ ತುಂಬನೇ ಬಯಸಿ
ಅರಿವರಿತು ತೀರದಿಹ ಸೊಗಪಟ್ಟು, ತೀರದಿಹ
ಅಳಲ ತಾಳುತ ತೀರದರಕೆಯನೆ ಮೆರಸಿ
“ಅಣು ಬೃಹತ್ತುಗಳಲ್ಲಿ ಕುಗ್ಗಿ ಹಿಗ್ಗದ ತುಂಬೆ
ಸೃಷ್ಟಿಯೆಷ್ಟುಂಡರೂ ತೀರದಿಹ ಸೊದೆಯೇ”
ಎಂದೊಲುಮೆ ತುಂಬಿನೊಳು ನಲ್ಮೆತುಂಬನು ಸೂಸಿ
ಅರಕೆ ತೀರಿದ್ದರೂ ನಲವು ತೀರದೆಯೆ
ಕಂಡ ದೇಗುಲದಿದಿರು ನಿಂತ ಮುನಿಸಂತರನು ನೆನೆದು ನೆನೆದು
ನನ್ನರಕೆ ತುಂಬಿಗಿದೆ ಇಂಬೆಂಬ ನಂಬುಗೆಯೊಳೇ ತೊನೆದು ತೊನೆದು.
*****