ಬರೆದವರು: Thomas Hardy / Tess of the d’Urbervilles
ಗುರುವಾರ ಎಂಟು ಗಂಟೆಗೆ ಬೇಟೆಗಾರರ ಗುಂಪು ಹೊರಟತು. ಆನೆಗಳ ಮೇಲೆ ಕೆಲವರು : ಕೆಲವರು ಕುದುರೆಗಳ ಮೇಲೆ. ಕ್ಯಾಂಪಿ ನಿಂದ ಸುಮಾರು ಏಳೆಂಟು ಮೈಲಿಯ ದೂರದಲ್ಲಿರುವ ಕಾಡಿನಲ್ಲಿ ಕಾಡು ಕೋಣ, ಆನೆ, ಇವುಗಳನ್ನು ಬೇಟೆಯಾಡಿ ಬರಬೇಕೆಂದು ರಾಜ ಕುಮಾರನ ಇಷ್ಟ.
ಸುಮಾರು ಒಂದು ಗಂಟಿಯ ಹೊತ್ತು ಹಾದಿ ನಡೆದು ಷಿಕಾರಿ ದಾರರು ಕಾಡಿನ ಬಳಿ ಬಂದರು. ರಾಜಕುಮಾರನು ಆನೆಯಿಂದ ಇಳಿದು ಕಾಲು ನಡೆಯಲ್ಲಿ ಹೋಗಬೇಕೆಂದು ಹಟಹಿಡಿದನು. ಇತರರು ಯತ್ನವಿಲ್ಲದೆ ಒಪ್ಪಬೇಕಾಯಿತು. ಆತನ ಹಿಂದೆ ಆಫ್ರಿಕಾ ಖಂಡ ದಲ್ಲೆಲ್ಲಾ ಬೇಟೆಯಾಡಿ ಪ್ರಸಿದ್ಧರಾಗಿದ್ದ ಬೇಟೆಗಾರರ ತಂಡಕ್ಕೆ ತಂಡವೇ ಹೊರಟಿತು. ಮಹಾರಾಜರೂ, ಅವರ ಪರಿವಾರದವರೂ, ನಾಯಕನೂ ಅವರ ಹಿಂದೆಯೇ ಹೊರಟರು.
ನಡುವಿನುದ್ದ ಎದೆಯುದ್ದ ಬೆಳೆದಿದ್ದ ಹುಲ್ಲಿನಲ್ಲಿ ಎಲ್ಲರೂ ಇಬ್ಬಿ ಬ್ಬರಾಗಿ ಹೋಗುತ್ತಿದ್ದಾರೆ. ಮೈಯೆಲ್ಲ ಕಣ್ಣಾಗಿದೆ; ಮೈಯೆಲ್ಲ ಕಿವಿಯಾಗಿದೆ. ಆ ನಿಶೃಬ್ಬವಾದ ಕಾಡಿನಲ್ಲಿ ಗಾಳಿಯೊಮ್ಮೆ ಬೀಸಿದರೆ. ಸುಯ್ಯ್ ಎಂದು ಹುಲ್ಲು ಸದ್ದು ಮಾಡಿದಕ್ಕೆ ದೂರದ ಬಿದಿರು ಮೆಳೆ ಗಳು ಒಂಕ್ಳೊಂದು ಬಡಿದು ಲಟಲಟ ಎಂದು ಸದ್ದಾಗುತ್ತದೆ. ಸುಯ್ಯ್ ಎಂಬ ಶ್ರುತಿಯೂ ಲಟಲಟದ ತಾಳವೂ ಸೇರಿ, ವನದೇವಿಯು ತನ್ನ ಮನೆಗೆ ಬಂದ ಮಾನವನನ್ನು ಸ್ವಾಗತಿಸುವುದಕ್ಕಾಗಿ ಹಾಡುವ ಗೀತೆಯೋ ಎನ್ನುನಂತಿದೆ. ಗಾಳೆಗೊಮ್ಮೆ ತಲೆವಾಗಿ ಮೇಲಕೆ ಏಳುವ ಹುಲ್ಲಿನ ಕಾವಲು, ಯಾವುದೋ ಸಮುದ್ರ ನಿಶ್ಶಬ್ದವಾಗಿ ಹರಿದು ಬಂದು ವನಭೂಮಿಯ ಮೂಲೆಯೊಂದರಲ್ಲಿ ನಿಂತಿದೆಯೆಂಬಂತಿದೆ. ಆ ವಿಸ್ತಾರವಾದ ಕಾವಲು ಹಣ್ಣಾಗಿ ಒಣಗುವುದರಲ್ಲಿರುವ ಹುಲ್ಲು ಚಿನ್ನದ ಬಣ್ಣವನ್ನು ತಳೆದಿದೆ. ಅಲ್ಲಲ್ಲಿ ಇರುವ ಮರದ ಗುತ್ತಿಗಳು ಹೊಸ ಚಿಗುರು ಮುಡಿದು ಮೆರೆಯುತ್ತ ನಿಂತಿವೆ. ಒಂದೊಂದು ಗಿಡ ಎಲ್ಲೋ ಒಂದೊಂದು ಹೂವು ಬಿಟ್ಟು, ಅಂದ ಚೆಂದಗಳರಿಯದ ಹಳ್ಳಿಯ ಹುಡುಗಿಯರ. ನಡುವಿನ ಪ್ರೌಢೆಯಂತಿದೆ. ಅಂತೂ ಎಲ್ಲ ರೀತಿಯಲ್ಲೂ ಮನೋಗ್ರಾಹಿಯಾದ ನೋಟ. ಎಂಥವರಿಗಾದರೂ ಕೊಂಚ ರಾಮರಸ ಕುಡಿದಂತಾಗಬೇಕು ಅಂತಹ ದೃಶ್ಯ ಸೌಂದರ್ಯ.
ಆದರೂ ಯಾರೂ ಸೌಂದರ್ಯದ ಕಡೆ ಮನಸ್ಸು ಕೊಟ್ಟಿಲ್ಲ. ಎಲ್ಲರಿಗೂ ಯಾವ ಮೃಗ ಎತ್ತ ಕಡೆಯಿಂದ ನುಗ್ಗುವುದೋ ಎಂದು ನಿರೀಕ್ಷೆ ಅಲ್ಲಲ್ಲಿ ಮರಗಳ ಮೇಲೆ ಜನ ಹತ್ತಿ ಸುತ್ತಮುತ್ತ ನೋಡು ತ್ತಿದ್ದಾರೆ. ಬೈನಾಕ್ಯುಲರ್ಸ್ ಹಿಡಿದಿದ್ದವನೊಬ್ಬನು ಸುಮಾರು ಒಂದು ಮೈಲಿ ದೂರದಲ್ಲಿ ಒಂದು ಗುಂಪು ಕಾಡೆಮ್ಮೆಗಳು ಹೋಗುತ್ತಿರುವುದನ್ನು ಗುರುತಿಸಿದನು. ಎಲ್ಲರೂ ಅತ್ತ ಕಡೆಗೆ ತಿರುಗಿದ್ದಾರೆ. ರಾಜಕುಮಾರ, ಅವನ ಮಗ್ಗುಲಲ್ಲಿ ಮಹಾರಾಜರು. ಆವರ ಹಿಂದೆ ಇನ್ನಿಬ್ಬರು ಯೂರೋಪಿಯನ್ ಷಿಕಾರಿದಾರರು. ಅವರ ಹಿಂದೆ ನಾಲ್ಕು ಹೆಜ್ಜೆ ದೂರದಲ್ಲಿ ಇನ್ನು ನಾಲ್ವರು – ಅವರಲ್ಲಿ ನಾಯಕನೂ ಒಬ್ಬ – ಉಳಿದ ವರು ಇನ್ನು ಸುಮಾರು ಹತ್ತಿಪ್ಪತ್ತು ಗಜ ದೂರದಲ್ಲಿ ಬರುತ್ತಿದ್ದಾರೆ.
ಅಲ್ಲಿ ಒಂದು ಹಳ್ಳ ! ಅಲ್ಲಿಳಿದು ಮೇಲಕ್ಕೆ ಹತ್ತಿದರೆ ಒಂದು ದಿಣ್ಣೆ ಸುಮಾರು ನೂರು ಚದರ ಗಜ ಇರಬಹುದು. ಅಲ್ಲಿಗೆ ಹೋಗಿ ಅಲ್ಲಿರುವ ಇನ್ನೊಂದು ದಿಣ್ಣೆಯನ್ನು ಬಳಸಿಕೊಂಡು ಹೋದರೆ, ಅಲ್ಲಿ ಕಾಡಮ್ಮೆಗಳ ಗುಂಪು.
ಹಿಂದಿನವರಿಗೆ ಸನ್ನೆಗಳಾಯಿತು. ಅವರು ಹಾಗೇ ದಿಣ್ಣೆಯನ್ನು ಬಳಸಿಕೊಂಡು ಹೊರಟರು. ಇಲ್ಲಿ ಈ ಎಂಟು ಜನ ಮಾತ್ರ ಹಳ್ಳವಿಳಿದು ದಿಣ್ಣೆ ಹೆತ್ತಿ ಹೋಗುವುದು ಎಂದು ಹೊರಟರು, ಎಲ್ಲರ ಮನಸ್ಸು ಮುಂದಿನ ದಿಣ್ಣೆಯನ್ನು ಬಳಸಿ ಹೋಗುವುದರಲ್ಲಿದೆ.
ಮಹಾರಾಜರ, ರಾಜಕುಮಾರ, ಅವರ ಹಿಂದಿನ ಇಬ್ಬರು ಸರದಾರರು ದಿಣ್ಣೆ ಹತ್ತುತ್ತಿದ್ದಾಗ ಬಲಗಡೆಗೆ ಸುಮಾರು ಫರ್ಲಾಂಗ್ ದೂರದಲ್ಲಿ ಏನೋ ಮರ ಮುರಿದ ಸದ್ದಾಯಿತು. ಏನೆಂದು ತಿರುಗಿ ನೋಡುವುದರಕೊಳಗಾಗಿ ಮೊನೆಯಾಗಿ ತಿವಿಯುವಂತಹ ಭಯಂಕರ ವಾದ ತೀವ್ರವಾದ ಗುಡುಗಿನಂತಹ ದನಿಯೊಂದು ದಿಕ್ಕುದಿಕ್ಕುಗಳನ್ನೆಲ್ಲಾ ತುಂಬಿ ಭೇದಿಸಿಕೊಂಡು ಬಂತು. ಆ ತೀವ್ರ ಧ್ವನಿಯನ್ನು ಕೇಳಿದರೆ ಎಂತಹ ನುರಿತ ಪಳಗಿದ ಷಿಕಾರಿದಾರನಿಗೂ ಎದೆಯೊಡೆಯಬೇಕು. ಆ ಧನಿಯ ಹಿಂದೆಯೇ ಹಾಗೆಯೇ ಮತ್ತೆ ಘೀಳಿಡುತ್ತ ಒಂದು ಪರ್ವತದಂತಹ ಆನೆಯು ನುಗ್ಗಿ ಬಂತು.
ನಾಲ್ವರು ದಿಣ್ಣೆಯ ಮೇಲೆ ನಿಂತಿರುವುದು ಅದಕ್ಕೆ ಚೆನ್ನಾಗಿ ಕಾಣುತ್ತಿದೆ. ಅದು ಆರ್ಭಟಸಿಕೊಂಡು ಅತ್ತ ಬರುತ್ತಿರುವುದೂ ಎಲ್ಲರಿಗೂ ಕಾಣಿಸುತ್ತಿದೆ. ಸುತ್ತಮುತ್ತಿನಲ್ಲಿ ಆಸರೆಯಾಗುವಂತಹ ಮರವಿಲ್ಲ: ಬಂಡೆಯಿಲ್ಲ. ಓಡಿ ತಲೆನ ಮರೆಸಿಕೊಳ್ಳವಂತಿಲ್ಲ. ಮೃತ್ಯು ಬರುತ್ತಿದೆ. ಮಾನವನೋ ಮೃಗವೋ ಅಂತೂ ಬಲಿಯಾಗ ಬೇಕು. ಸನ್ನಿವೇಶವನ್ನು ನೋಡಿದರೆ, ಮಾನವನೇ ಮೃಗಕ್ಕೆ ಬಲಿಯಾಗಬೇಕು.
ಹಿಂದಿನ ಪರಿವಾರ ನೂರು ಗಜಕ್ಕೆ ಮೀರಿದ ದೂರದಲ್ಲಿದೆ. ಅವರೂ ಆನೆಯನ್ನು ನೋಡಿದ್ದಾರೆ. ಆದರೇನು? ಅಲ್ಲಿಂದ ಹೊಡೆಯು ವಂತಿಲ್ಲ. ಓಡಿಬರುವುದು ಸಾಧ್ಯವಿಲ್ಲ. ಹಾಗೂ ಕೆಲವರು ರಾಜ ಕುಮಾರನ ರಕ್ಷಣೆಗೆ ಓಡಿಬರುತ್ತಿದ್ದಾರೆ.
ಹಳ್ಳದಲ್ಲಿದ್ದ ನಾಲ್ದರು ಆ ವೇಳೆಗೆ ದಿಣ್ಣೆಯಮೇಲಕ್ಕೆ ಬಂದರು. ಆನೆಯು ಹೆಜ್ಜೆಗೊಮ್ಮೆ ಆರ್ಭಟಿಸುತ್ತಾ ಸೊಂಡಿಲೆತ್ತಿಕೊಂಡು ಓಡಿ ಬರುತ್ತಿದೆ. ಒಮ್ಮೆ ಘೀಂಕರಿಸಿದರೆ ಮರಗಳೂ, ಬಂಡೆಗಳೂ ಬಿರಿಯ ಬೇಕು. ಭೂಮಿಯು ಬಾಯ್ಬಿಡಬೇಕು ಹಾಗೆ ಆರ್ಭಟಸಿಕೊಂಡು ಸರ್ರನೆ ಹಳ್ಳಕ್ಕೆ ಹರಿಯುವ ಹುಚ್ಚು ಹೊಳೆಯ ಪ್ರವಾಹದಂತೆ ನುಗ್ಗಿ ಬರುತ್ತಿದೆ.
ದಿಣ್ಣೆಗೆ ಇನ್ನೂ ನೂರು ಗಜದಲ್ಲಿದೆ, ಭಾರಿಯ ಆನೆ. ಕಪ್ಪಗೆ ಟಾರ್ ಚೆನ್ನಾಗಿ ಬಳೆದ ಬಂಡೆಯಂತೆ ಆ ಹತ್ತು ಗಂಟೆಯ ಬಿಸಿಲಿನಲ್ಲಿ ಮೆರೆಯುತ್ತಿರುವ ಆ ಆನೆ. ಅಬ್ಬಾ! ಆ ಕೊಂಬು ಮುಂದೆ ಚಾಚಿ ಕೊಂಡಿದ್ದರೆ, ಆದು ಮೃತ್ಯುವಿನ ಭದ್ರಾಸನದಂತಿದೆ, ಬರುತ್ತಿದೆ. ಬರುತ್ತಿದೆ ಮುಂದೆ ಮುಂದೆ ಬರುತ್ತಿದೆ. ಪಕ್ಕದಿಂದಲ್ಲ: ಎದುರಿಂದ. ನಾಲ್ವರೂ ರೈಫಲ್ಗಳನ್ನು ಎತ್ತಿದ್ದಾರೆ ಎಲ್ಲವೂ ಜೋಡಿನಲ್ಲಿಯವು. ಆಯಕಟ್ಟಿನ ಸ್ಪಳದಲ್ಲಿ ಏಟುಬಿದ್ದರೆ ಆ ಆನೆಯೆಂಬ ಬೆಟ್ಟವೂ ಅಲ್ಲಿಯೇ ಬಿದ್ದು ಪ್ರಾಣಬಿಡಬಲೇಬೇಕು. ನಿಜ! ಆದರೆ, ಆದಕ್ಕೆ ಗುರಿತಪ್ಪಿದರೆ? ರಾಜಕುಮಾರ, ಬ್ರಿಟಿಷ್ ಚಕ್ರಾಧಿಪತ್ಯದ ಮುಂದಿನ ಚಕ್ರವರ್ತಿ! ಸೂರ್ಯನು ಮುಳುಗದ ಸಾಮ್ರಾಜ್ಯದ ಯುವರಾಜ ಸಾರ್ವಭೌಮ ಏನಾದರೂ ಆದರೆ!
ಇನ್ನು ಐವತ್ತೇ ಗಜ! ಗಂಟೆಗೆ ಅರವತ್ತು ಮೈಲಿ ಹೋಗುವ ಎಕ್ಸ್ಪ್ರೆಸ್ ವೇಗವಾದರೂ ಕಡಿಮೆ! ಆ ಮುನ್ನುಗ್ಗುತ್ತಿರುವ ಮಹಾ ಮೃಗದ ವೇಗ! ಅಬ್ಬಾ ! ಹೆಜ್ಜೆ ಹೆಜ್ಜೆಗೆ ಒಂದೊಂದು ಮಾರು ಕಡಿಮೆಯಾಗುತ್ತಿದೆ. ಆದಷ್ಟು ಬೇಗ ಓಡುತ್ತಿದೆ ಆ ಹಾಳು ಆನೆ! ಮಿಂಚು! ಮಿಂಚು! ಆದರೆ ಇದು ಮಿಂಚಲ್ಲ. ಮಿಂಚಿನ ಬಳ್ಳಿಯನ್ನು ಕೊಂಬುಗಳುತೆ ಚಾಚಿಕೊಂಡು ಮಿಂಚಿನ ವೇಗದಿಂದ ಹಕ್ಕಿಯಂತೆ ಹಾರಿಬರುತ್ತಿದೆ; ಏರಿ ಬರುತ್ತಿದೆ. ಅದು ಇರಲಿ. ಅದರ ಕೂಗು ಅದರ ಆರ್ಭಟ ಅದಕ್ಕೆ ಹಾದಿ ಬಿಡಿಸುತ್ತಿದೆ. ಆರ್ಭಟ ಆರ್ಭಟವೂ ಗುರಿಯಿಟ್ಟು ಹೊಡೆದ ಫಿರಂಗಿ ಗುಂಡುಗಳಂತೆ ಬಂದು ರಾಜಕುಮಾರ ನನ್ನು ಝಾಡಿಸುತ್ತಿದೆ ಇಬ್ಬರೂ ಔಡುಕಚ್ಚಿ ಬರುವ ಮೃತ್ಯುವನ್ನೆದುರಿ ಸಲು ಸಿದ್ಧವಾಗಿದ್ದಾರೆ. ಮಹಾರಾಜರು ರಾಜಕುಮಾರನನ್ನು ಥಟ್ಟನೆ ಎಳೆದು ತಮ ಬೆನ್ನಿಗೆ ಹಾಕಿಕೊಂಡು ರೈಫಲನ್ನು ಅನೆಯಕಡೆ ತಿರುಗಿಸಿ ದ್ದಾರೆ. ಆನೆ ಇನ್ನು ಒಂದು ನೂರಡಿ ದೂರದಲ್ಲಿರಬಹುದು. ಹಾಗೆ ಓಡೋಡಿ ಬರುತ್ತಿರುವ ಆನೆಗೆ ಆ ದೂರ ಒಂದು ದೂರವೆ ?
ಅಷ್ಟರಲ್ಲಿ ಒಬ್ಬನು ಮುಂದೆ ನುಗ್ಗಿಬಂದ ; ಮಿಕ್ಕವರು ಆನೆಗಿನ್ನೂ ಗುರಿಯಿಡುವುದರಲ್ಲಿದ್ದಾರೆ. ಅಂತೂ ಎಲ್ಲರೂ ರಾಜರ ಬಳಿಗೆ ಬಂದಿ ದ್ದಾರೆ. ಎಲ್ಲರೂ ರೈಫಲ್ಗಳನ್ನು ಅನೆಯಕಡೆ ತಿರುಗಿಸಿದ್ದಾರೆ.
ಮುಂದೆ ನುಗ್ಗಿದವನು ಮಿಂಚಿನ ವೇಗದಿಂದ ನೆಲಕ್ಕೆ ಬಗ್ಗಿ ಮಂಡಿಯೂರಿ ಸೊಂಡಿಲನ್ನೆತ್ತಿ ಕೊಂಡು ಬರುತ್ತಿರುವ ಆನೆಗೆ ಗುರಿಯಿಟ್ಟ. ಧನ್ ಎಂತು. ಆರ್ಭಟಸುತ್ತಿದ್ದ ಆನೆಯ ಆರ್ಭಟ ಅರ್ಥದಲ್ಲಿ ನಿಂತಿತು. ಮರುಕ್ಷಣ, ಆ ಮೊದಲಿನ ಧನ್ ಧ್ವನಿಯ ಕೊನೆಯ ಮೊಳಗು ಮುಗಿ ಯುವುದರೊಳಗಾಗಿ ಇನ್ನೊಂದು ಧನ್ ಕೇಳಿಸಿತು. ಆನೆಯ ಆರ್ಭಟದ ಧ್ವನಿ ಮುಗಿಯುವುದರೊಳಗಾಗಿ ಹಾಗೆಯೇ ಧೊಪ್ಪನೆ ಕೆಳಬಿತ್ತು. ಬಂಡೆಯು ಉರುಳಿದಂತಾಯಿತು. ನುಗ್ಗಿ ಬರುತ್ತಿದೆ ಮೊರೆಯುತ್ತಿದ್ದ ಪ್ರವಾಹ ಅಲ್ಲಿಯೇ ರೆಪ್ಪೆ ಹೊಯ್ಯುವಷ್ಟರಲ್ಲಿ ಶೀತದಿಂದ ಹೆಪ್ಪುಗಟ್ಟಿ ಕೊಂಡು ಶಿಲೆಯಾಗಿ ನಿಶ್ಶಬ್ದವಾಗಿ ನಿಂತಂತಾಯಿತು. ಮತ್ತೆ ನಾಲ್ಕೈದು ಧನ್ಗಳು ಕೇಳಿಸಿದವು. ಆದರೆ ಆ ಗುಂಡುಗಳು ಮಾತ್ರ ಆನೆಯ ಮೇಲಿನ ಚರ್ಮವನ್ನು ಸವರಿಕೊಂಡು ಹೋದುವು.
ಆನೆಯು ಕೆಳಕ್ಕೆ ಉರುಳಿದುದನ್ನು ನೋಡಿ, ಮನಸ್ಸಿಗೆ ಧೈರ್ಯವಾದ ಮೇಲೆ ಮಹಾರಾಜರು ರಾಜಕುಮಾರನನ್ನು ನೋಡಿದರು. ಆತನು ಮುಸಿ ನಗುತ್ತಾ ಮುಂದಿದ್ದವನನ್ನು ತೋರಿಸಿದನು. “ಅವನು ಆನೆಯನ್ನು ಹೊಡೆದು ನಮನ್ನು ಬಚಾಯಿಸಿದನು.” ಎಂದು ಹೇಳಿ ನೇರವಾಗಿ ಹೋಗಿ, ಅವನನ್ನು ಹಿಡಿದು ಕುಲುಕಿ, “ನಾಯಕ್, ನಮ್ಮ ದುಡುಕು ನಮ್ಮನ್ನು ತಿನ್ನುವುದರಲ್ಲಿತ್ತು. ನೀನು ಬಚಾಯಿಸಿದೆ.” ಎಂದು ತಬ್ಬಿಕೊಂಡನು.
ಮಹಾರಾಜರು ಗಂಭೀರವಾಗಿ ನಗುತ್ತಾ “ಹೌದು, ನಮ್ಮದು ಎರಡನೆಯ ಏಟು. ಮೊದಲನೆಯ ಏಟು ನಿಮ್ಮದು. ದೇವರು ದೊಡವನು, ನಿಮ್ಮ ರೂಪವಾಗಿ ಬಂದು ಕಾದ” ಎಂದು ನಾಯಕನ ಭುಜ ತಟ್ಟಿದರು.
ನಾಯಕನು ಸಹಜವಾದ ವಿನಯದಿಂದ ರೈಫಲನ್ನು ತಗ್ಗಿಸಿ ಹಿಡಿದುಕೊಂಡು “ಮಹಾಪಾದದ ದಯೆ!” ಎಂದು ಕೈ ಮುಗಿದ.
*****
ಮುಂದುವರೆಯುವುದು