ಕೇಶವ ಕೇಶವ ಮಾಧವಾ ನೀನು
ನನ್ನ ಮೊರೆಯ ನೀ ಕೇಳಲಾರೆಯಾ
ಏಳುತ್ತ ಬೀಳುತ್ತ ಸಾಗಿರವನನಗೆ
ಬಂದರೆಡು ಮಾತು ಹೇಳಲಾರೆಯಾ
ಭವಸಾಗರದಲಿ ನಿನ್ನ ನನ್ನ ಬೀಳಿಸಿದೆ
ನನಗೊಂದು ನೀಡಿ ರಂಧ್ರದ ದೋಣಿ
ತೇಲುತ್ತಿದೆ ಮುಳುಗತ್ತಿದೆ ನಿತ್ಯ ನೋಡು
ಕಾಪಾಡದೆ ನೀನಿದ್ದರೆ ಜೀವ ಹಣಾ ಹಣಿ
ನಿರ್‍ಮಿಸಿದೆ ನನಗಾಗಿ ನೂರು ದುಗುಡ
ಮತ್ತೆ ಕಾಮ ಕ್ರೋಧದ ಬಣ್ಣಗಳು
ದೂರದಲಿ ನಿಂತು ಕಾಣುತಿಹೆ ನೀನು
ನನ್ನ ಬದುಕಾಗಿವೆ ಅವು ಸುಣ್ಣಗಳು
ಮುಟ್ಟಿಯು ಬಾಳದೆ ಬಿಟ್ಟಿಯೂ ಬಾಳಲಾರೆ
ಅಂತರಂಗದ ಇಂಗಿತ ಹೇಳಲಾರೆ
ಇತ್ತ ಭವ ಎಳೆಯುತ್ತಿರೆ ಅತ್ತ ಶಿವ
ಶರಣು ಬಂದಿಹೆ ನಾನಿನ್ನೂ ತಾಳಲಾರೆ
ಪಂಜರದೋಳ ಆತ್ಮಗೂಡು ಕಟ್ಟಿದೆ
ಬುದ್ಧಿ ಮನಗಳಿಂದ ಉಸಿರುಗಟ್ಟಿದೆ
ಬಾರೋ ಗೋವಿಂದ ಎತ್ತಕೊ ಬೇಗ
ಮಾಣಿಕ್ಯವಿಠಲನ ವಿರಾಗ ಗಗನಕ್ಕೆ ತಟ್ಟಿದೆ
*****