ಕಂದ ನಂದನೋ ತಾನೆ ನಂದನಂದನಾ
ತಂದನ್ನೆ ತಾನೋ ತಾನಾನಾ || ಪಲ್ಲವಿ ||
ಜಾಗಡಿ (ಶೀತೆಗೆ ಎಂದು)
ಶೀತೆಗೋ ಶಿರರಾಮಾಗೋ ಮಕ್ಕಳಿಲ್ಲಾ ಮಾದೇವಾ
ಹುಟ್ಟಾದೆರಡು ಚಿಕ್ಕಮಕ್ಕಳು ತಾನೋ ತಂದನಾನಾ
ತಂದನೆನಾನೊ ತಾನಾನಂದೆ ತಾನತಾನ
ತಂದನೆನಾನೊ ತಾನಾನಂದೆ ತನನಾನಾ || ೧ ||
ಹಶವಿಲ್ಲಾದೋನಕೀಗೇ ನೇವಾಳಾದಾ ಬಲಗಟ್ಟು
ಸೊಸಮುದ್ದೂ ತೊಳಸುವಾ ತಾನನಂದನಾನಾ
ತಾನೆ ತಾನ ತಂದನಾ ತಾನಾ ತಂದನ್ನಾ || ೨ ||
ತುಂಬೇ ಹೂಗು ಕೊಯ್ದೀ ಬೆಲ್ಲೀ ಹರಮಣ ತುಂಬೀ
ಯಾವಾ ದ್ಯಾವರಿಗೇ ಕಳಗೂವಾ || ೩ ||
ನೆಟ್ಟನೆಟ್ಟ ಮಲ್ಲುಗೇ ನೆಟ್ಟಿದಂತ ಸಂಪೂಗೇ
ನೆಟ್ಟಾಂಗೆ ಬಾ ನಮ್ಮ ತುರಾಯಕೇ || ೪ ||
*****
ಹೇಳಿದವರು: ತೊಲಶು ಹಮ್ಮು ಗೌಡ, ಉಂಚಗಿ, ೮೫ ವರ್‍ಷ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.