ಬಹಳವನ್ನು ಅರಿತ ಒಬ್ಬ ಬ್ರಾಹ್ಮಣನಿಗೆ ತಲೆ ನಿಲ್ಲುತಿರಲಿಲ್ಲ. ತನ್ನ ಪ್ರಖರ ಪಾಂಡಿತ್ಯಕ್ಕೆ ಬೆಂಕಿ ಕೂಡ ತನ್ನನ್ನು ಸುಡಲಾರದೆಂದು ಹೆಮ್ಮೆ ಪಡುತ್ತಿದ್ದ. ಪ್ರಖರ ಪಾಂಡಿತ್ಯದ ತೇಜದ ಮುಂದೆ ಬೆಂಕಿ ನಿಸ್ತೇಜವೆನ್ನುತಿದ್ದ. ಒಮ್ಮೆ ಅವನ ಮನೆಗೆ ಒಬ್ಬ ಸನ್ಯಾಸಿ ಬಂದ.
ಇವನ ಒಣ ಪಾಂಡಿತ್ಯಕ್ಕೆ ಬುದ್ಧಿ ಕಲಿಸಬೇಕೆಂದು ಕೊಂಡನು. ಅಡುಗೆಮನೆಯ ಉರಿಯುವ ಒಲೆಯಲ್ಲಿ ತನ್ನ ಕಮಂಡಲವನ್ನು ಎಸೆದು “ಎಲಾ! ಬ್ರಾಹ್ಮಣ ಉರಿಯುತ್ತಿರುವ ನನ್ನ ಕಮಂಡಲ ಕೈಯಿಂದ ತೆಗೆದುಕೊಡು” ಎಂದು ಕೇಳಿದನು.
ಸನ್ಯಾಸಿಯ ಎದಿರು ತನ್ನ ಪಾಂಡಿತ್ಯದ ಪ್ರಾತಾಪ ತೋರಿಸಲು ಕೈ ಹಾಕಿ ಕಮಂಡಲವನ್ನು ತೆಗೆಯಲು ಹೋಗಿ ಕೈ ಸುಟ್ಟು ಕೊಂಡ.
ಬ್ರಾಹ್ಮಣ ಸುಟ್ಟ ಹಸಿ ಘಾಯದಲ್ಲಿ ತನ್ನ ಒಣ ಪಾಂಡಿತ್ಯವನ್ನು ಸುಟ್ಟು ಮರೆತು ಬಿಟ್ಟ.
*****