ಯೆಂಡಕ್ಕ್ ತರಪ್ಣ

ಜೀತಾ ಮಾಡಿ ಕಾಸ್ ಕೆರ್‍ಕೊಂಡಿ
ಅಟ್ಟೀಲ್ ಎಡ್ತೀನ್ ಮೋಸೋಸ್ಕಂಡಿ
ಏನೋ ಕುಡಿಯಾಕ್ ಬಂದ್ರೆ-
ಸೇರಿಗ್ ಸೇರು ನೀರ್‍ನೆ ಬೆರಸಿ
ಕಾಸ್ ಕೇಳ್ತೀಯ ಮೋಸ ಮರಸಿ
ಸಾಚಾ ಮನ್ಸರ್ ಬಂದ್ರೆ? ೧

ನನ್ ಕೈ ಕಾಸು! ನಂಗ್ ಔಳ್ ಎಡ್ತಿ!
ಮೋಸ ಮಾಡ್ತೀನ್ ನಾನ್ ಔಳ್ಗ್ ಇಡ್ದಿ!
ಆಮಾತ್ ಅತ್ತಾಗ್ ಬುಡ್ಲಿ!
ಕೂಸೂ ಕೊಟ್ಕೊಂಡ್ ತೆಪ್ಗೆ ತಣ್ಗೆ
ನಿನ್ ಕೈಲ್ ಮೋಸ ವೋಗೋದ್ ನನ್ಗೆ
ಮಾನದ್ ಬುಡಕೆ ಕೊಡ್ಲಿ! ೨

ಯೆಂಡ ಮಾರೋರ್ ಎಲ್ರೂ ಯಿಂಗೇ
ಮೋಸ ಮಾಡ್ತಾರಂತ ನಂಗೆ
ನೀನೇಳ್ಬೇಕ! ನನ್ಗೂ!
ದುಡ್ಡಿನ್ ರುಚಿ ಕಂಡೋರ್ ನಿಂಗೆ
ಎಸ್ಟ್ ಏಳಿದ್ರೇನ್ ನಾವೂ ಸುಂಕೆ?
ಒಬ್ಬನ್ ಚಾಲೇ ಮನ್ಗೂ! ೩

ಕುಡಿಯೋ ನನ ಬಾಯ್ಗ್ ಇನ್ಮೇಲ್ ಬೀಗ
ಆಕ್ತೀನ್ ಅಂತ ಯೋಳ್ತಿನೀಗ
ಎದೇಗ್ ಕೈನ ತಾಕ್ಸಿ!
ಈ ಮಾತ್ ಓದ್ರೆ ಮಾನಕ್ ತೊಂದ್ರೆ!
ರತ್ನನ್ ಮಾತಿನ್ ತೂಕೀಗಂದ್ರೆ
ರತ್ನನ್ ಎಸರೆ ಸಾಕ್ಸಿ! ೪

ಯೋಳ್ತೀನ್ ಕೈನ ಎದೆಮೇಲಿಟ್ಟಿ-
ಈವೊತ್ನಿಂದ ಯೆಂಡ ಬುಟ್ಟೆ
ಮಾನಕ್ ಬದಕ್ಬೇಕಂತ!
ಮನಸ ಮಾನ ಎಂಗೈತೇಂತ
ಗೊತ್ತಿಲ್ದೆ ನಾನೂ ಇವ್ನೀಂತ
ಎಂಗೋ ಇದ್ರೆ ಬಂತ! ೫

ಪ್ರಾಣಕ್ಕಿಂತ ಯೆಂಡ ಯೆಚ್ಚು!
ಯೆಂಡಕ್ಕಿಂತ ಮಾನ ಯೆಚ್ಚು!
ಯೆಂಡದ್ ಮುನಿಯ! ಜಿಪ್ಣ!
ಮಾನದ್ ಮುಂದೆ ಯಾವ್ದ್ ಏನೈತೆ?
ತಕ್ಕೊ! ಕೊಡ್ತೀನ್ ಈಗ್ ಬರತೈತೆ
ಆಳ್ ಯೆಂಡಕ್ಕೆ ತರಪ್ಣ! ೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀನಾರಾಯಣ
Next post ಸಂದಿಗ್ಧಗಳ ಮೀರುವತ್ತ ನಿಸಾರ್ ಕಾವ್ಯ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…